
ನವದೆಹಲಿ:ಗುಜರಾತ್​ನ ಆಪ್​(ಆಮ್​ ಆದ್ಮಿ ಪಾರ್ಟಿ) ಮುಖ್ಯಸ್ಥ ಗೋಪಾಲ್​ ಇಟಾಲಿಯಾರನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಹಿಳೆಯರು ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಲ ದಿನಗಳ ಹಿಂದೆ ಗೋಪಾಲ್​ ಇಟಾಲಿಯಾ ಅವಹೇಳನಕಾರಿಯಾಗಿ ನಿಂದಿಸಿ ಮಾತನಾಡಿದ್ದರು. ಈ ವಿಡಿಯೋ ವೈರಲ್​ ಆಗಿತ್ತು. ಗೋಪಾಲ್​ ಇಟಾಲಿಯಾ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.ವಿಡಿಯೋದಲ್ಲಿ ಏನಿತ್ತು?: ಪ್ರಧಾನಿ ಮೋದಿ ಅವರನ್ನು ಅವಾಚ್ಯವಾಗಿ ನಿಂದಿಸಿರುವ ಹಾಗೂ ದೇವಸ್ಥಾನಗಳು-ಪುರಾಣ ಕಥೆಗಳು ಶೋಶಣೆಯ ಮೂಲವಾಗಿವೆ. ತಾಯಂದಿರು ಮತ್ತು ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಅಭಿವೃದ್ಧಿ ಹಾಗೂ ಗೌರವ ಬೇಕಿದ್ದರೆ ಅವರುಗಳು ದೇವಸ್ಥಾನಗಳಿಗೆ ಹೋಗಬಾರದು’ ಎಂದು ಇಟಾಲಿಯಾ ವಿವಾದಾತ್ಮಕವಾಗಿ ಹೇಳಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ವೈರಲ್​ ಆದ ವಿಡಿಯೋ ಮಹಿಳಾ ಆಯೋಗದ ಗಮನಕ್ಕೆ ಬರುತ್ತಿದ್ದಂತೆ ಇಟಾಲಿಯಾ ಅವರನ್ನ ವಿಚಾರಣೆಗೆಂದು ಇಂದು(ಗುರುವಾರ) ನವದೆಹಲಿಗೆ ಕರೆಸಿಕೊಳ್ಳಲಾಗಿತ್ತು. ವಿಚಾರಣೆ ವೇಳೆ ಪೊಲೀಸರ ಬಳಿ ಬಾಯ್ಬಿಟ್ಟ ಇಟಾಲಿಯಾ, ಯಾರೋ ವಿಡಿಯೋವನ್ನು ಎಡಿಟ್​ ಮಾಡಿ ವೈರಲ್​ ಮಾಡಿದ್ದಾರೆ’ ಎಂದಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 11 =
Remember me
