ಲಖನೌ:ಕೆಲವರು ಮದುವೆಯಾದ ನಂತರವೂ ವಿವಾಹೇತರ ಸಂಬಂಧವನ್ನೂ ಹೊಂದುವ ಮೂಲಕ ತಮ್ಮ ಸುಂದರವಾದ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಾರೆ. ಅನೈತಿಕ ಸಂಬಂಧವೂ ಅನೇಕರ ಜೀವನ ಕೆಡೆಸಿದ್ದು, ಕೆಲವೊಮ್ಮೆ ಈ ವಿಚಾರಗಳಿಗೆ ಕೊಲೆಗಳು ಸಹ ನಡೆದಿವೆ. ಇದೀಗ ಇದಕ್ಕೆ ಪೂರಕವೆಂಬಂತೆ ಪತಿಗೆ ತನ್ನ ಪತ್ನಿಯ ವಿವಾಹೇತರ ಸಂಬಂಧದ ಬಗ್ಗೆ ತಿಳಿಯುತ್ತಿದ್ದಂತೆ ಆಕೆ ನನ್ನ ಪ್ರಿಯಕರ ಕೂಡಾ ನಮ್ಮ ಜೊತೆ ಇದೇ ಮನೆಯಲ್ಲಿ ಇರಬೇಕೆಂದು ಆಗ್ರಹಿಸಿ ಟ್ರಾನ್ಸ್​​ಫಾರ್ಮರ್​ ಏರಿರುವ ಘಟನೆ ನಡೆದಿದೆ.
ಉತ್ತರಪ್ರದೇಶದ ಗೋರಖ್​ಪುರದ ಪಿಪ್ರೈಚ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಪತಿ ತನ್ನ ಪತ್ನಿಯ ವಿವಾಹೇತರ ಸಂಬಂಧದ ಬಗ್ಗೆ ತಿಳಿಯುತ್ತಿದ್ದಂತೆ ಹೈವೋಲ್ಟೇಜ್ ಡ್ರಾಮಾ ನಡೆದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮೂರು ಮಕ್ಕಳ ತಾಯಿಯಾದ 34 ವರ್ಷದ ಮಹಿಳೆಯೊಬ್ಬಳು ವ್ಯಕ್ತಿ ಒಬ್ಬನ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಳು. ಸುಮಾರು ಏಳು ವರ್ಷಗಳಿಂದ ಆಕೆ ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿರುವ ವಿಚಾರವನ್ನು ತಿಳಿದ ಪತಿ ಇದನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದಳು. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ.
मोहब्बत का ऐसा सिला…', 3 बच्चों की मां को चढ़ा 'इश्क का बुखार',प्रेमी को साथ रखने की बात पर पति से नाराज, खंभे पर चढ़ करने लगी तांडव !!#यूपीके#गोरखपुरसे एक हैरान कर देने वाला मामला सामने आया है। यहां तीन बच्चो की माँ को प्यार का खुमार चढ़ा है और प्यार का खुमार भी इस कदर…pic.twitter.com/J6XQ4FMxRh
ಇದನ್ನೂ ಓದಿ:ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆಗೆ ‘ಆಸ್ಕರ್​’ ವಿಶೇಷ ಗೌರವ
ಜಗಳವಾದರೂ ಸುಮ್ಮನಾಗದ ಮಹಿಳೆ ಪ್ರಿಯಕರ ಕೂಡಾ ಇದೇ ಮನೆಯಲ್ಲಿ ನಮ್ಮ ಜೊತೆಯಲ್ಲಿಯೇ ಇರಲಿ, ಇದರಿಂದ ನಮ್ಮ ಆರ್ಥಿಕತೆಯು ಸುಧಾರಿಸುತ್ತದೆ ಎಂದು ಪತಿಯ ಬಳಿ ಹಠ ಹಿಡಿದಿದ್ದಾಳೆ. ಇದಕ್ಕೆ ಪತಿ ಒಪ್ಪದಿದ್ದಾಗ ಕೋಪಗೊಂಡ ಆಕೆ ಮನೆ ಬಳಿ ಇರುವ ಟ್ರಾನ್ಸ್​ಫಾರ್ಮರ್​ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನೂ ಕಂಡ ಸ್ಥಳೀಯರು ಕೂಡಲೇ ಪೊಲೀಸ್​ ಹಾಗೂ ವಿದ್ಯುತ್​ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಇದನ್ನು ಕಂಡು ಗರಂ ಆಗಿರುವ ನೆಟ್ಟಿಗರು ಇಂತಹ ಮಹಿಳೆಯರಿಂದ ಸಮಾಜಕ್ಕೆ ಕೆಟ್ಟ ಹೆಸರು. ಅವಳು ಸತ್ತರೆ ಸಾಯಲು ಬಿಡಿ ಮೂರು ಮಕ್ಕಳಿದ್ದರು ಅನೈತಿಕ ಸಂಬಂಧ ಹೊಂದಿರುವ ಈಕೆಗೆ ಕಠಿಣ ಶಿಕ್ಷೆಯಾಗಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 5 =
Remember me
