ನವದೆಹಲಿ:ಸ್ವಿಸ್ ಬ್ಯಾಂಕ್​ಗಳಲ್ಲಿ ಖಾತೆ ಹೊಂದಿರುವ ಭಾರತೀಯರ ಬಗ್ಗೆ 2ನೇ ಸುತ್ತಿನ ಮಾಹಿತಿಯನ್ನು ಸ್ವಿಜರ್ಲೆಂಡ್, ಭಾರತ ಸರ್ಕಾರಕ್ಕೆ ಶುಕ್ರವಾರ ನೀಡಿದೆ ಎನ್ನಲಾಗಿದೆ. ಸ್ವಯಂಚಾಲಿತ ಮಾಹಿತಿ ವಿನಿಮಯ (ಎಇಒಐ) ಕಾನೂನಿನ ಪ್ರಕಾರ 86 ದೇಶಗಳ 31 ಲಕ್ಷ ಖಾತೆಗಳ ಮಾಹಿತಿಯನ್ನು ನೀಡಲಾಗಿದೆ ಎಂದು ಸ್ವಿಸ್ ಕೇಂದ್ರೀಯ ತೆರಿಗೆ ಆಡಳಿತ (ಎಫ್​ಟಿಎ) ತಿಳಿಸಿದೆ. ಈ ಪಟ್ಟಿಯಲ್ಲಿ ನಿರ್ದಿಷ್ಟವಾಗಿ ಭಾರತವನ್ನು ಎಫ್​ಟಿಎ ಹೆಸರಿಸಿಲ್ಲ. ಆದರೆ, ಪಟ್ಟಿಯಲ್ಲಿ ಭಾರತ ಮೂಲದವರ ಮತ್ತು ಸಂಸ್ಥೆಗಳ ಸಂಖ್ಯೆ ಗಣನೀಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಖಾತೆದಾರರ ಗುರುತು, ವಿಳಾಸ, ದೇಶ, ತೆರಿಗೆ ಗುರುತಿನ ಸಂಖ್ಯೆಯನ್ನು ಸ್ವಿಸ್ ಸರ್ಕಾರ ಹಂಚಿಕೊಂಡಿದೆ. ಈ ಮಾಹಿತಿಯ ಆಧಾರದ ಮೇಲೆ ಭಾರತದ ತೆರಿಗೆ ಇಲಾಖೆ, ಪರಿಶೀಲನೆ ನಡೆಸಲಿದೆ. ಸ್ವಿಸ್ ನೀಡಿರುವ ಮಾಹಿತಿ ಮತ್ತು ಖಾತೆದಾರರು ಭಾರತದಲ್ಲಿ ಘೋಷಿಸಿರುವ ಆದಾಯವನ್ನು ತಾಳೆ ಹಾಕಲಾಗುತ್ತದೆ. ವ್ಯತ್ಯಾಸ ಕಂಡುಬಂದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮುಂದಿನ ಮಾಹಿತಿ 2021ರ ಸೆಪ್ಟೆಂಬರ್​ನಲ್ಲಿ ಭಾರತಕ್ಕೆ ಸಿಗಲಿದೆ.
ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಸ್ವಿಸ್ ಸರ್ಕಾರ ಹಂಚಿಕೊಂಡ ಮಾಹಿತಿಯಲ್ಲಿ 100ಕ್ಕೂ ಹೆಚ್ಚು ಭಾರತೀಯರು ಮತ್ತು ಸಂಸ್ಥೆಗಳ ಖಾತೆ ವಿವರ ಲಭ್ಯವಾಗಿತ್ತು. 2018ರವರೆಗೆ ಖಾತೆಯನ್ನು ಸಕ್ರಿಯವಾಗಿರಿಸಿದ್ದವರ ತೆರಿಗೆ ಸಂಬಂಧಿತ ಅಕ್ರಮಗಳು ಸ್ವಿಸ್ ಸರ್ಕಾರ ಒದಗಿಸಿದ ಮಾಹಿತಿಯಲ್ಲಿ ಇತ್ತು. ಭಾರತೀಯರು ಪನಾಮಾ, ಬ್ರಿಟನ್ ವರ್ಜಿನ್ ದ್ವೀಪಗಳು, ಕೇಮನ್ ದ್ವೀಪ್​ಗಳಲ್ಲಿ ಹೊಂದಿದ್ದ ಕಂಪನಿಗಳು ಸ್ವಿಸ್​ಬ್ಯಾಂಕ್​ಗಳಲ್ಲಿ ಹೊಂದಿದ್ದ ಖಾತೆ ವಿವರಗಳು ಲಭಿಸಿದ್ದವು. ಬಹುತೇಕ ಖಾತೆದಾರರು ಉದ್ಯಮಿಗಳಾಗಿದ್ದರು. ಕೆಲವು ರಾಜಕಾರಣಿಗಳ , ರಾಜ ಕುಟುಂಬಗಳ ಖಾತೆಯ ಬಗ್ಗೆ ಮಾಹಿತಿ ಸಿಕ್ಕಿತ್ತು.
ಕಾಳಧನಿಕರ ಸ್ವರ್ಗ ಸ್ವಿಜರ್ಲೆಂಡ್​ನಲ್ಲಿ ಹಣ ಇರಿಸುವ ತಮ್ಮ ದೇಶದವರ ಮಾಹಿತಿ ನೀಡುವಂತೆ ಭಾರತ ಸೇರಿ ಅನೇಕ ದೇಶಗಳು ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದ್ದವು. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಾನದಂಡದ ಅನ್ವಯ ಎಇಒಐ ವಿಶೇಷ ಕಾನೂನನ್ನು 2017 ಜನವರಿ 1ರಂದು ಜಾರಿ ಮಾಡಿದ ಸ್ವಿಸ್ ಸರ್ಕಾರ, ಎಫ್​ಟಿಎ ಮೂಲಕ ಮಾಹಿತಿ ರವಾನೆ ಮಾಡುತ್ತಿದೆ. ಖಾತೆದಾರರ ಪ್ರಾಥಮಿಕ ಮಾಹಿತಿ ನೀಡಲಾಗುವುದು, ಅವರ ಸಂಪತ್ತಿನ ಸೂಕ್ಷ್ಮ ವಿವರ ನೀಡುವುದಿಲ್ಲ ಎಂದು ಸ್ವಿಸ್ ಆಡಳಿತ ಕಾನೂನು ರಚನೆ ಸಂದರ್ಭದಲ್ಲೇ ಸ್ಪಷ್ಟಪಡಿಸಿದೆ. 2018ರಲ್ಲಿ 36 ರಾಷ್ಟ್ರಗಳ ಖಾತೆದಾರರ ಮಾಹಿತಿಯನ್ನು ಎಫ್​ಟಿಎ ಮೊದಲ ಬಾರಿಗೆ ಹಂಚಿಕೊಂಡಿತು. ಆದರೆ, ಈ ಪಟ್ಟಿಯಲ್ಲಿ ಭಾರತ ಇರಲಿಲ್ಲ. 2019ರ ಸೆಪ್ಟೆಂಬರ್​ನಲ್ಲಿ ಭಾರತವೂ ಸೇರಿ 75 ದೇಶಗಳ 31 ಲಕ್ಷ ಖಾತೆಗಳ ವಿವರವನ್ನು ಹಂಚಿಕೊಂಡಿತ್ತು.
ಮಿತ್ರರಾಷ್ಟ್ರ ಚೀನಾಕ್ಕೆ ‘ಟಿಕ್​ಟಾಕ್’​ ಶಾಕ್​ ನೀಡಿದ ಪಾಕಿಸ್ತಾನ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − four =
Remember me
