ನವದೆಹಲಿ:ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಒಟ್ಟು 628 ಹುಲಿಗಳು ನೈಸರ್ಗಿಕ ಕಾರಣಗಳು ಮತ್ತು ಬೇಟೆ ಸೇರಿದಂತೆ ಇತರೆ ಕಾರಣಗಳಿಂದ ಸಾವನ್ನಪ್ಪಿವೆ ಎಂದು ಸರ್ಕಾರ ಅಂಕಿ ಅಂಶಗಳು ತಿಳಿಸಿವೆ.
ಇದನ್ನೂ ಓದಿ:ಕಚೇರಿ ಒಳಗಡೆ ಕೊಡೆ ಹಿಡಿದು ಕೆಲಸ ಮಾಡುವ ಸಿಬ್ಬಂದಿ; ಕಾರಣ ಕೇಳಿದ್ರೆ ಹೀಗೂ ಉಂಟಾ ಅಂತಿರಾ..!
ಈ ಅವಧಿಯಲ್ಲಿ ಹುಲಿ ದಾಳಿಯಲ್ಲಿ 349 ಜನರು ಸಾವನ್ನಪ್ಪಿದ್ದರೆ, ಮಹಾರಾಷ್ಟ್ರವೊಂದರಲ್ಲೇ 200 ಮಂದಿಯ ಸಾವು ದಾಖಲಾಗಿವೆ.ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಪ್ರಕಾರ, 2019ರಲ್ಲಿ 96, 2020ರಲ್ಲಿ 106, 2021ರಲ್ಲಿ 127, 2022 ರಲ್ಲಿ 121 ಮತ್ತು 2023ರಲ್ಲಿ 178 ಹುಲಿಗಳು ಸಾವನ್ನಪ್ಪಿವೆ. 2023 ರಲ್ಲಿ ಹುಲಿ ಸಾವಿನ ಸಂಖ್ಯೆಯು 2012 ರಿಂದ ಅತಿ ಹೆಚ್ಚು ಎಂದು ಅಂಕಿಅಂಶಗಳು ಬಹಿರಂಗಪಡಿಸಿವೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು, 2019 ಮತ್ತು 2020 ರಲ್ಲಿ ತಲಾ 49 ಜನರು, 2021 ರಲ್ಲಿ 59, 2022 ರಲ್ಲಿ 110 ಮತ್ತು 2023 ರಲ್ಲಿ 82 ಜನರು ಹುಲಿ ದಾಳಿಗೆ ಬಲಿಯಾಗಿದ್ದಾರೆ ಎಂದು ಅಂಕಿ ಅಂಶ ಸಮೇತ ಉತ್ತರಿಸಿದ್ದಾರೆ.ಉತ್ತರಪ್ರದೇಶದಲ್ಲಿ 59 ಜನರು, ಮಧ್ಯಪ್ರದೇಶದಲ್ಲಿ 27 ಹುಲಿ ದಾಳಿಗೆ ಬಲಿಯಾಗಿದ್ದಾರೆ.

ಇತ್ತೀಚಿನ ಸರ್ಕಾರದ ಅಂಕಿಅಂಶಗಳ ಪ್ರಕಾರ, 2022 ರಲ್ಲಿ ಜಾಗತಿಕ ಹುಲಿಗಳ ಶೇಕಡಾ 75 ಅಂದರೆ 3,682 ಹುಲಿಗಳು ಭಾರತದಲ್ಲಿ ಇರುವುದು ಸರ್ಕಾರಿ ಅಂಶಗಳಿಂದ ತಿಳಿದು ಬಂದಿದೆ.
1973 ಏಪ್ರಿಲ್ 1 ರಂದು ಭಾರತ ಹುಲಿ ಯೋಜನೆ ಘೋಷಿಸಿತ್ತು. ಹುಲಿ ಸಂರಕ್ಷಣೆಯನ್ನು ಉತ್ತೇಜಿಸಲು ಆರಂಭದಲ್ಲಿ ಇದು 18,278 ಚದರ ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಒಂಬತ್ತು ಹುಲಿ ಸಂರಕ್ಷಿತ ಪ್ರದೇಶಗಳನ್ನು ಸಮೀಕ್ಷೆ ಕೈಗೊಳ್ಳಲಾಗಿತ್ತು. ಪ್ರಸ್ತುತ, ಭಾರತವು 78,735 ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು 55 ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿದೆ. ದೇಶದ ಭೌಗೋಳಿಕ ಪ್ರದೇಶದ ಸುಮಾರು 2.4 ಪ್ರತಿಶತ ಪ್ರದೇಶ ಹುಲಿಗಳ ಆವಾಸಸ್ಥಾವಾಗಿದೆ.
ರಾಮನಗರ ಹೆಸರು ತೆಗೆದವರು ಸರ್ವನಾಶ ಆಗುತ್ತಾರೆ: ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − two =
Remember me
