ರಾಂಚಿ:ಸರ್ಕಾರಿ ಸೌಲಭ್ಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವವರಿರುವಂತೆ ಅದನ್ನು ದುರುಪಯೋಗ ಮಾಡಿಕೊಳ್ಳುವವರೂ ಇದ್ದಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಸತ್ತು ನಾಲ್ಕು ವರ್ಷಗಳಾದ ನಂತರ ಆತನಿಗೆ ಸರ್ಕಾರದಿಂದ ಮನೆ ಬಂದಿದೆ. ವಿಶೇಷವೆಂದರೆ ಅವನ ಹೆಸರಿನಲ್ಲಿಯೇ ಮೊದಲ ಕಂತಿನ ಹಣ ವಿತ್​ಡ್ರಾ ಕೂಡ ಮಾಡಲಾಗಿದೆ.
ಇದನ್ನೂ ಓದಿ:ಇನ್ನು ಮುಂದೆ ರೈಲ್ವೆ ನಿಲ್ದಾಣದಲ್ಲಿ ಟೀ ಕುಡಿಯೋಕೆ ಸಿಗಲ್ಲ ಪ್ಲಾಸ್ಟಿಕ್​ ಕಪ್​; ಮಣ್ಣಿನ ಲೋಟದಲ್ಲೇ ಸವಿಯಿರಿ ಬಿಸಿಬಿಸಿ ಚಹಾ!
ಇಂತದ್ದೊಂದು ಘಟನೆ ನಡೆದಿರುವುದು ಜಾರ್ಖಂಡ್​ನ ಗರ್ಹ್ವಾ ನಗರದಲ್ಲಿ. ಅಲ್ಲಿನ ಧನೇಸರ್ ರಾಮ್ ಹೆಸರಿನ ವ್ಯಕ್ತಿ ನಾಲ್ಕು ವರ್ಷದ ಹಿಂದೆಯೇ ಮೃತನಾಗಿದ್ದಾನೆ. ಆದರೆ ಆತನ ಹೆಸರಿಗೆ 2016-17ನೇ ಸಾಲಿನಲ್ಲಿ ಸರ್ಕಾರಿ ಮನೆ ಮಂಜೂರಾಗಿದೆ. ಅಂದು ಮಂಜೂರಾದ ಮನೆಗೆ 2020ರ ಅಕ್ಟೋಬರ್​ನಲ್ಲಿ ಮೊದಲ ಕಂತಿನ ಹಣ ಬಂದಿದೆ. ನೇರವಾಗಿ ಧನೇಸರ್ ಖಾತೆಗೆ ಬಂದ ಹಣವನ್ನು ಯಾರೋ ಬಿಡಿಸಿಕೊಂಡಿದ್ದಾರೆ ಕೂಡ.
ಇದನ್ನೂ ಓದಿ:ಲಿಫ್ಟ್​ನ ಎರಡು ಬಾಗಿಲ ಮಧ್ಯೆ ಸಿಲುಕಿ ಐದು ವರ್ಷದ ಬಾಲಕ ಸಾವು; ಬೆಚ್ಚಿ ಬೀಳಿಸುತ್ತೆ ಫೋಟೋ
ಇದರಲ್ಲಿ ದೊಡ್ಡ ಅಚ್ಚರಿಯೆಂದರೆ ಹಣವನ್ನು ಪಡೆದಿರುವುದು ಆತನ ಕುಟುಂಬದ ಯಾರೊಬ್ಬರೂ ಅಲ್ಲ. ಮನೆಗೆ ಅರ್ಜಿಯನ್ನೂ ಸಹ ಕುಟುಂಬಸ್ಥರು ಹಾಕಿಲ್ಲ. ಹಾಗಿದ್ದರೂ ಆತನ ಹೆಸರಿಗೆ ಮನೆ ಮಂಜೂರಾಗಿ, ಹಣ ಬಿಡುಗಡೆಯಾಗಿದೆ. ಯಾರೋ ಅದನ್ನು ಬಳಸಿಕೊಂಡಿದ್ದಾರೆ. ಈ ವಿಚಾರವಾಗಿ ಧನೇಸರ್ ಅವರ ಮೊಮ್ಮಗ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದ್ದಾನೆ.
ಇದೀಗ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಪ್ರಕರಣದ ಕುರಿಯಾಗಿ ತೀವ್ರ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)
ಲೈವ್​ನಲ್ಲೇ ಹೋಯಿತು ಪ್ರಾಣ! ಹರಿಹರದಲ್ಲಿ ವಿದ್ಯುತ್​ ಅವಘಡಕ್ಕೆ ಬಲಿಯಾದ ಲೈನ್​ ಮ್ಯಾನ್​

ಬಾಡಿಗಾರ್ಡ್​ನೊಂದಿಗೇ ಅಫೇರ್​ ಇಟ್ಟುಕೊಂಡ ರಾಜಕುಮಾರಿ! ವಿಷಯ ಮುಚ್ಚಿಡಲು ಕೊಟ್ಟಿದ್ದು 12 ಕೋಟಿ ರೂ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − nine =
Remember me
