ಕೇರಳ:ಕರೊನಾ-ಲಾಕ್​ಡೌನ್ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಇರುವುದನ್ನೆಲ್ಲ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇನ್ನೊಂದಷ್ಟು ಮಂದಿ ಅಂಥ ಸಂಕಷ್ಟದಲ್ಲಿ ಇರದಿದ್ದರೂ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ 70 ಲಕ್ಷ ರೂಪಾಯಿ ಲಾಟರಿ ಹೊಡೆದರೆ ಹೇಗಿರಬಹುದು!
ಇಂಥ ಟೈಮ್​ನಲ್ಲೂ ಅಷ್ಟೊಂದು ಹಣನಾ ಎಂದು ಮೂಗು ಮುರಿಯುವ ಹಾಗಿಲ್ಲ. ಏಕೆಂದರೆ ಇದು ಕನಸಲ್ಲ, ನಿಜವಾಗಿಯೂ ಒಬ್ಬರಿಗೆ ಲಾಟರಿಯ ಬಂಪರ್ ಪ್ರೈಜ್​ ಬಹುಮಾನವಾಗಿ 70 ಲಕ್ಷ ರೂಪಾಯಿ ಸಿಗಲಿದೆ. ಈ ಬಗ್ಗೆ ಕೇರಳ ಸರ್ಕಾರ ಇಂದು ಮಧ್ಯಾಹ್ನವೇ ಘೋಷಿಸಿದೆ.
ಇದನ್ನೂ ಓದಿ:‘ನಾಯಿಗೆ ರಕ್ತ ಬೇಕಾಗಿದೆ!’; ಅಪಘಾತಕ್ಕೀಡಾಗಿ ಮೂಳೆ ಮುರಿದ ಶ್ವಾನಕ್ಕೆ ನಡೆಯಲಿದೆ ಸರ್ಜರಿ..
ಲಾಕ್​ಡೌನ್​ ಹಿನ್ನೆಲೆಯಲ್ಲಿ ಮೂರು ತಿಂಗಳಿನಿಂದ ಲಾಟರಿ ಡ್ರಾ ಸ್ಥಗಿತಗೊಳಿಸಿದ್ದ ಕೇರಳದ ಲಾಟರಿ ಇಲಾಖೆ ಇಂದು ಕೇರಳ ಸರ್ಕಾರದ ಅಕ್ಷಯ ಎಕೆ-496 ಲಾಟರಿಯನ್ನು ಎತ್ತಿದೆ. ಇದರಲ್ಲಿ ಬಂಪರ್ ಪ್ರೈಜ್​​ ಆಗಿ 70 ಲಕ್ಷ ರೂಪಾಯಿ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ 10 ಲಕ್ಷ ರೂಪಾಯಿ ಸಿಗಲಿದೆ. ಅಕ್ಷಯ ಎಕೆ-496 ಲಾಟರಿ ಟಿಕೆಟ್ ಸಂಖ್ಯೆ ಎಯು-258505ಕ್ಕೆ ಬಂಪರ್ ಪ್ರೈಜ್​ ಬಂದಿದ್ದರೆ, ಇನ್ನೊಂದು ಟಿಕೆಟ್​ಗೆ ದ್ವಿತೀಯ ಬಹುಮಾನ ಲಭಿಸಿದೆ. ಇನ್ನು 12 ಟಿಕೆಟ್​ಗಳು ಮೂರನೇ ಬಹುಮಾನಕ್ಕೆ ಆಯ್ಕೆ ಆಗಿವೆ.
ಇದನ್ನೂ ಓದಿ:ನೀವೂ ಕಣ್ತುಂಬಿಸಿಕೊಳ್ಳಬಹುದು ಸರ್ಜಾ ಕುಟುಂಬ ನಿರ್ಮಿಸಿರುವ ಆಂಜನೇಯ ದೇವಸ್ಥಾನದ ಕುಂಭಾಭಿಷೇಕ..
ಕೇರಳದಲ್ಲಿ 1967ರಲ್ಲೇ ಲಾಟರಿ ಇಲಾಖೆ ಸ್ಥಾಪನೆಗೊಂಡಿದ್ದು, ಇದು ರಾಜ್ಯದ ಪ್ರಮುಖ ಆದಾಯ ಮೂಲವಾಗಿದೆ. ಪ್ರತಿದಿನವೂ ಇಲ್ಲಿ ಲಾಟರಿ ಡ್ರಾ ಇದ್ದು, ನಿತ್ಯ 2 ಲಕ್ಷ ಮಂದಿ ಇದರಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೇರಳದಲ್ಲಿ ವರ್ಷಕ್ಕೆ ಲಾಟರಿಯೊಂದರಿಂದಲೇ 10 ಸಾವಿರದಿಂದ 12 ಸಾವಿರ ಕೋಟಿ ರೂಪಾಯಿ ಆದಾಯ ಬರುತ್ತಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಕಳೆದ 3 ತಿಂಗಳು ಲಾಟರಿಯನ್ನು ಸ್ಥಗಿತಗೊಳಿಸಲಾಗಿತ್ತು. (ಏಜೆನ್ಸೀಸ್​)
ಹ್ಯಾಕ್​ ಮಾಡಿದ್ದಕ್ಕೂ ಈಕೆಗೆ ಲಕ್ಷಗಟ್ಟಲೆ ರೂಪಾಯಿ ಇನಾಮು ಸಿಕ್ತು; ಮೈಕ್ರೋಸಾಫ್ಟ್​, ಫೇಸ್​ಬುಕ್​ನಿಂದ್ಲೇ ಬಹುಮಾನ

ಅರ್ಧಕ್ಕರ್ಧ ಕಡಿತ; ಕಪ್ಪು ಶಿಲೀಂಧ್ರ ರೋಗ ಪತ್ತೆ ಪರೀಕ್ಷೆಗೆ ದರ ನಿಗದಿಪಡಿಸಿದ ಸರ್ಕಾರ

ಆ ಭಾಗ ಸ್ವಲ್ಪ ಕಾಣಿಸ್ತಿದೆ ಅಂತ ಜಿಮ್​ನಿಂದ್ಲೇ ಹೊರಗೆ ಕಳಿಸಿದ್ರಂತೆ!; ಅವಮಾನ ಆಯಿತೆಂದು ವಿಡಿಯೋ ಮಾಡಿ ಅತ್ತಳು…

ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:1 × 3 =
Remember me
