ಲಖನೌ:ಅಂಡರ್​ ಸೆಕ್ರೆಟರಿ ಹಂತದ ಸರ್ಕಾರಿ ಅಧಿಕಾರಿಯೊಬ್ಬ ಕಾಂಟ್ರಾಕ್ಟ್​​ ನೌಕರಿ ಹೊಂದಿದ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಈ ಪ್ರಭಾವೀ ಅಧಿಕಾರಿಯನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ರಾಜಧಾನಿ ಲಖನೌನ ಬಾಪು ಭವನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಭಾಗ ಮುಖ್ಯಸ್ಥನ ಹುದ್ದೆ ಹೊಂದಿರುವ ಇಚ್ಛಾರಾಮ್​ ಯಾದವ್​ ಬಂಧಿತ ಅಧಿಕಾರಿ. ಈತ 2018 ರಿಂದ ತನ್ನ ಕಛೇರಿಯ ಕಾಂಟ್ರಾಕ್ಟ್​ ನೌಕರಳಿಗೆ ಕೆಲಸದ ವೇಳೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ದೂರು ನೀಡಿದರೆ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಕ್ರೆಡಿಟ್ ಕಾರ್ಡ್ ಮೂಲಕ ಹಣ ವರ್ಗಾವಣೆ ಇಬ್ಬರು ಟಿಬೆಟಿಯನ್ ಪ್ರಜೆಗಳ ಬಂಧನ
ಇತ್ತೀಚೆಗೆ ಸಂತ್ರಸ್ತೆಯು ಧೈರ್ಯ ಮಾಡಿ ಆತನ ಅಸಭ್ಯ ವರ್ತನೆಯ ಹಲವು ವಿಡಿಯೋಗಳನ್ನು ಮಾಡಿದಳು. ಈ ವಿಡಿಯೋಗಳನ್ನು ಲಗತ್ತಿಸಿ ಅ.29 ರಂದು ಹುಸೈನ್​ಗಂಜ್​ ಪೊಲೀಸ್​ ಠಾಣೆಗೆ ದೂರು ನೀಡಿದಳು. ಆರಂಭಿಕವಾಗಿ ಪ್ರಭಾವೀ ಆರೋಪಿಯನ್ನು ಬಂಧಿಸಲು ಪೊಲೀಸರು ಹಿಂಜರಿದ ಹಿನ್ನೆಲೆಯಲ್ಲಿ ಒಂದು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಿದಳು ಎನ್ನಲಾಗಿದೆ.
ವೈರಲ್​ ಆದ ಈ ವಿಡಿಯೋದಲ್ಲಿ ಸಂತ್ರಸ್ತೆಯು ವಿರೋಧಿಸುತ್ತಿದ್ದರೂ, ಆತನನ್ನು ದೂರಕ್ಕೆ ತಳ್ಳುತ್ತಿದ್ದರೂ, ಆತ ಅವಳನ್ನು ಹಿಂಸಿಸುತ್ತಿರುವುದು ದಾಖಲಾಗಿದೆ. ಸಂತ್ರಸ್ತ ಮಹಿಳೆಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಎರಡೂ ಪಕ್ಷಗಳ ಹೇಳಿಕೆಗಳನ್ನು ದಾಖಲಿಸಿ, ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸೆಂಟ್ರಲ್​ ಎಡಿಸಿಪಿ ಖ್ಯಾತಿ ಗರ್ಗ್​ ಹೇಳಿದ್ದಾರೆ.(ಏಜೆನ್ಸೀಸ್)
ಇದರಲ್ಲಿ ಕರ್ನಾಟಕ ಮಾದರಿಯಾಗಲಿ ಎಂದರಂತೆ ಮೋದಿ! ಪ್ರಧಾನಿ ಜತೆಗಿನ ಮಾತುಕತೆ ವಿವರ ಬಿಚ್ಚಿಟ್ಟ ಸಿಎಂ

ವಿರಾಟ್​​ ಕೊಹ್ಲಿ ಪುತ್ರಿಗೆ ರೇಪ್​ ಬೆದರಿಕೆ ಹಾಕಿದ್ದವ ಪೊಲೀಸ್​ ವಶಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + six =
Remember me
