ನವದೆಹಲಿ:ಕರೊನಾ ವೈರಸ್​ ಅನ್ನು ಶೀಘ್ರವಾಗಿ ಪತ್ತೆ ಹಚ್ಚುವ ಸಂಬಂಧ ಕೇಂದ್ರ ಸರ್ಕಾರ ಆರೋಗ್ಯಸೇತು ಆ್ಯಪ್​ ಅನ್ನು ಶುರು ಮಾಡಿ ಅನೇಕ ವಾರಗಳೇ ಕಳೆದಿವೆ. ಹಲವು ಕಡೆಗಳಲ್ಲಿ ಈ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳುವುದನ್ನು ಕಡ್ಡಾಯ ಕೂಡ ಮಾಡಲಾಗಿದೆ.
ಇಂಥದ್ದೊಂದು ಹೊಸ ಪ್ರಯತ್ನಕ್ಕೆ ಕೈಹಾಕುವ ಮೂಲಕ ಸರ್ಕಾರ, ಜನರಿಗೆ ತಮ್ಮ ಸುತ್ತಮುತ್ತಲೂ ಇರುವ ಕರೊನಾ ಸೋಂಕಿತರನ್ನು ಸುಲಭದಲ್ಲಿ ಪತ್ತೆ ಹಚ್ಚಲು ಅನುಕೂಲ ಕಲ್ಪಿಸಿದೆ. ಜಗತ್ತಿನ ಬೇರೆ ಯಾರ ದೇಶಗಳಲ್ಲಿಯೂ ಇಂಥದ್ದೊಂದು ಆ್ಯಪ್​ ಕಂಡುಹಿಡಿದಿಲ್ಲ ಎನ್ನುವ ಹೆಗ್ಗಳಿಕೆ ಭಾರತದ್ದು.
ಇದೀಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಕೇಂದ್ರ ಸರ್ಕಾರ, ಆರೋಗ್ಯಸೇತು ಅ್ಯಪ್​ನಲ್ಲಿ ಏನಾದರೂ ಭದ್ರತಾ ನ್ಯೂನತೆಗಳು ಇದ್ದರೆ ಅದನ್ನು ಕಂಡುಹಿಡಿದು ತಿಳಿಸಿದವರಿಗೆ ಹಾಗೂ ಆ್ಯಪ್​ ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಏನಾದರೂ ಸಲಹೆಗಳನ್ನು ನೀಡಿದವರಿಗೆ ಪ್ರಶಸ್ತಿ ಪ್ರಕಟಿಸಿದೆ.
ಇದನ್ನೂ ಓದಿ:ತಿರುಪತಿ ಭಕ್ತರ ಆಕ್ರೋಶಕ್ಕೆ ಮಣಿದ ಆಂಧ್ರ ಸರ್ಕಾರ: ಆಸ್ತಿ ಹರಾಜಿಗೆ ತಡೆ
ಆ್ಯಪ್​ನಲ್ಲಿರುವ ಸುರಕ್ಷತೆಯಲ್ಲಿ ಕುಂದನ್ನು ಕಂಡುಹಿಡಿದವರಿಗೆ ಒಂದು ಲಕ್ಷ ರೂಪಾಯಿವರೆಗೂ ಪ್ರಶಸ್ತಿ ಇರುವುದಾಗಿ ಕೇಂದ್ರ ಹೇಳಿದೆ. ಮೂರು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು. ಇದರ ಮೊತ್ತ ಒಂದು ಲಕ್ಷ ರೂಪಾಯಿವರೆಗೂ ಇದೆ, ಆ್ಯಪ್​ನ ಕೋಡ್​ ಅಭಿವೃದ್ಧಿಪಡಿಸುವ ಬಗ್ಗೆ ಸಲಹೆ ನೀಡಿದರೂ ಬಹುಮಾನ ಪಡೆಯಬಹುದು ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರದ ಮಹಾ ನಿರ್ದೇಶಕರಾದ ನೀತಾ ವರ್ಮಾ ತಿಳಿಸಿದ್ದಾರೆ. ಆ್ಯಪ್​ನಲ್ಲಿ ಸದ್ಯ ನಮಗೆ ಯಾವುದೇ ರೀತಿಯ ದೋಷ ಕಂಡುಬಂದಿಲ್ಲ. ಆದರೆ ಈ ಆ್ಯಪ್​ ಕೂಡ ಮಾನವ ನಿರ್ಮಿತವೇ ಆಗಿರುವ ಕಾರಣ, ದೋಷ ಕಂಡರೆ ತಿಳಿಸಬಹುದು ಎಂದಿದ್ದಾರೆ.
ಈ ಆ್ಯಪ್​ ಬಗ್ಗೆ ಇದಾಗಲೇ ವಿರೋಧ ಪಕ್ಷಗಳು ಸೇರಿದಂತೆ ಕೆಲವರು ತಮ್ಮದೇ ಆದ ರೀತಿಯಲ್ಲಿ ಟೀಕೆ ಟಿಪ್ಪಣೆ ಮಾಡುತ್ತಲೇ ಬಂದಿದ್ದಾರೆ. ಅಂಥವರು ಆ್ಯಪ್​ನಲ್ಲಿ ದೋಷ ಇರುವುದನ್ನು  ವೈಜ್ಞಾನಿಕವಾಗಿ ಕಂಡುಹಿಡಿದು ಈಗ ಬಹುಮಾನ ಪಡೆಯಬಹುದಾಗಿದೆ.
ಈ ಆ್ಯಪ್​ನಿಂದ ಖಾಸಗಿ ಮಾಹಿತಿಯ ಸೋರಿಕೆಯಾಗುತ್ತಿದೆ. ಇದರ ನಿಖರತೆ, ಪಾರದರ್ಶಕತೆಯ ಬಗ್ಗೆ ಅನುಮಾನವಿದೆ ಎಂದು ಕಾಂಗ್ರೆಸ್​ ಸೇರಿದಂತೆ ಕೆಲವರು ಕಿಡಿ ಕಾರುತ್ತಲೇ ಬಂದಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾಗಿರುವ ಮಾತು. ಈ ಆ್ಯಪ್​ ಕೇವಲ ಕರೊನಾ ಸಂಪರ್ಕವನ್ನು ಪತ್ತೆಹಚ್ಚುತ್ತದೆಯೇ ವಿನಾ ಯಾವುದೇ ವೈಯಕ್ತಿಕ ಮಾಹಿತಿಗಳನ್ನು ಕದಿಯುವುದಿಲ್ಲ ಅಥವಾ ವ್ಯಕ್ತಿಗಳ ಇನ್ನಾವುದೇ ಹಕ್ಕಿಗೆ ಇದು ಚ್ಯುತಿ ತರುವುದಿಲ್ಲ.
ಇದನ್ನೂ ಓದಿ:FACT CHECK: ಹಾದಿ ತಪ್ಪಿರುವ ಸೂರತ್ ಶ್ರಮಿಕ್​ ರೈಲು, ಸಾವು: ಈ ವರದಿಯಲ್ಲಿ ಸತ್ಯಾಂಶ ಇದೆಯೆ?
ಈ ಆ್ಯಪ್​ನಿಂದಾಗಿ ಜನರು ತಮ್ಮ ಸುತ್ತಮುತ್ತ ಇರುವ ಅಥವಾ ತಮ್ಮ ಸಂಪರ್ಕಕ್ಕೆ ಈ ಹಿಂದೆ ಬಂದಿರುವ ವ್ಯಕ್ತಿಗಳಲ್ಲಿ ಕರೊನಾ ಸೋಂಕು ಇದ್ದರೆ ಅದನ್ನು ಸುಲಭದಲ್ಲಿ ಗುರುತಿಸಲು ಸಾಧ್ಯವಾಗಿದೆ, ಅಷ್ಟೇ ಅಲ್ಲದೇ, ಒಂದು ವೇಳೆ ಹಿಂದೆ ಸಂಪರ್ಕಕ್ಕೆ ಬಂದಿರುವ ಯಾವುದೋ ವ್ಯಕ್ತಿಗೆ ಹೊಸದಾಗಿ ಸೋಂಕು ತಗುಲಿದರೂ ಈ ಆ್ಯಪ್​ ಅಲರ್ಟ್​ ಮಾಡುವ ಮೂಲಕ ಜನರನ್ನು ಎಚ್ಚರಿಸುತ್ತದೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್​ ಕಾಂತ್​ ಸ್ಪಷ್ಟಪಡಿಸಿದ್ದಾರೆ.
ಆರೋಗ್ಯಸೇತು ಆ್ಯಪ್​ ಅನ್ನು ಏಪ್ರಿಲ್ 2ರಂದು ಆರಂಭಿಸಲಾಗಿದೆ. ಈ ಆ್ಯಪ್​ ಅನ್ನು ಸದ್ಯ 11.5 ಕೋಟಿ ಜನರು ಡೌನ್​ಲೋಡ್​ ಮಾಡಿಕೊಂಡಿದ್ದಾರೆ. ಈ ಆ್ಯಪ್​ನ ಮೂಲ ಕೋಡ್ ಗಿಥಬ್ ನಲ್ಲಿ ಮಧ್ಯರಾತ್ರಿ 12 ಗಂಟೆ ನಂತರ ಸಿಗುತ್ತದೆ.
ಸಿರಿವಂತ ವಿದೇಶಿ ಹುಡುಗನೆಂದು ನಂಬಿ ಐದೂವರೆ ಲಕ್ಷ ಕಳಕೊಂಡ ಬೆಂಗಳೂರು ಮಹಿಳೆ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eight + seventeen =
Remember me
