ನವದೆಹಲಿ: ದೇಶಿಯ ವಿಮಾನಗಳಲ್ಲಿ ಪ್ರಯಾಣದ ಅವಧಿಗೆ ಅನುಗುಣವಾಗಿ ಪ್ಯಾಕ್ ಮಾಡಿದ ಆಹಾರ ಹಾಗೂ ಪಾನೀಯಗಳು ಮತ್ತು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಬಿಸಿ ಆಹಾರವನ್ನು ಪೂರೈಸಲು ವಾಯುಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಎಸ್​ಒಪಿಗಳನ್ನು ಪರಿಷ್ಕರಿಸಿ ಅಧಿಸೂಚನೆ ಹೊರಡಿಸಿದೆ.
ಆಹಾರ ಮತ್ತು ಪಾನೀಯಗಳನ್ನು ಪೂರೈಸುವಾಗ ಒಂದೇ ಬಾರಿ ಬಳಸುವಂತಹ ಟ್ರೇ ಹಾಗೂ ತಟ್ಟೆಗಳನ್ನು ನೀಡಬೇಕು. ಸಿಬ್ಬಂದಿ ಹೊಸ ಗ್ಲೌಸ್​ಗಳನ್ನು ಧರಿಸಬೇಕು. ಪ್ರಯಾಣಿಕರಿಗೆ ಮನೋರಂಜನಾ ಸೌಲಭ್ಯಗಳನ್ನೂ ಒದಗಿಸಲು ಒಮ್ಮೆ ಉಪಯೋಗಿಸಿ ಬಿಸಾಡಬಹುದಾದ ಅಥವಾ ಸೋಂಕು ರಹಿತವಾಗಿ ಸ್ವಚ್ಛಗೊಳಿಸಿದ ಇಯರ್​ಫೋನ್​ಗಳನ್ನು ಪ್ರಯಾಣಿಕರಿಗೆ ನೀಡಬೇಕು ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:ಫ್ಯೂಯೆಲ್ ಇಕಾನಮಿಯ ಸ್ಟೈಲಿಶ್​ ಕಿಯಾ ಸೋನೆಟ್​ ಬುಕ್ಕಿಂಗ್ ಶುರು
ಜತೆಗೆ ವಿಮಾನದಲ್ಲಿ ಫೇಸ್​ಮಾಸ್ಕ್ ಧರಿಸಲು ನಿರಾಕರಿಸುವ ಪ್ರಯಾಣಿಕರನ್ನು ನೋ-ಫ್ಲೈ ಪಟ್ಟಿಯಲ್ಲಿ ಸೇರಿಸಬಹುದು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪದ್ಮಪುರಸ್ಕಾರ 2021 ಆನ್​ಲೈನ್ ಅರ್ಜಿ ಸಲ್ಲಿಕೆಗೆ ಸೆ.15 ರ ತನಕ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − five =
Remember me
