ದೆಹಲಿ:ದೇಶದ ಜನರಿಗೆ ತೈಲ ಬೆಲೆ ಅಂದರೆ ಪೆಟ್ರೋಲ್-ಡೀಸೆಲ್‌ ಬೆಲೆ ಇಳಿಕೆ ಮಾಡಿ ಸಂತೋಷದ ಸುದ್ದಿ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಖುಷಿಯ ಸಂಗತಿಯನ್ನು ತಿಳಿಸಿದೆ. ಈ ಮೂಲಕ ಜನರ ಮನಗೆಲ್ಲಲು ಕೇಂದ್ರ ಸರ್ಕಾರ ಮತ್ತೊಂದು ಪ್ರಯತ್ನಕ್ಕೆ ಕೈಹಾಕಿದೆ.
ಪೆಟ್ರೋಲ್-ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಸುವ ಮೂಲಕ ಬೆಲೆ ಇಳಿಕೆಗೆ ಕಾರಣವಾಗಿದ್ದ ಕೇಂದ್ರ ಸರ್ಕಾರ ಇದೀಗ ಖಾದ್ಯ ತೈಲದ ಬೆಲೆ ಇಳಿಸುವ ಸಲುವಾಗಿ ಅದರ ಮೇಲಿನ ಮೂಲ ಕರವನ್ನು ಕಡಿತಗೊಳಿಸಿದೆ.
ಇದನ್ನೂ ಓದಿ:ಅಣ್ಣ-ತಮ್ಮ ಸೇರಿ ಕೆಲಸ ಕೊಟ್ಟಿದ್ದಾತನ ಮಗನನ್ನೇ ಕೊಂದು ಮೂಟೆ ಕಟ್ಟಿದ್ದರು!; ಇಬ್ಬರು ಕೊಲೆ ಆರೋಪಿಗಳ ಬಂಧನ…
ಕಳೆದ ಒಂದು ವರ್ಷದಿಂದ ಏರುತ್ತಲೇ ಇದ್ದ ಖಾದ್ಯ ತೈಲ ಬೆಲೆಯನ್ನು ಇಳಿಸುವ ಸಲುವಾಗಿ ಸರ್ಕಾರ ಈ ನಿರ್ಧಾರ ತಳೆದಿದೆ. ಆ ನಿಟ್ಟಿನಲ್ಲಿ ಕಚ್ಚಾ ತಾಳೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಗಳ ಮೇಲಿನ ಮೂಲ ಕರವನ್ನು ಶೇ. 2.5ರಿಂದ ಶೂನ್ಯಕ್ಕೆ ಇಳಿಸಿದೆ.
ಅಲ್ಲದೆ ಈ ಎಣ್ಣೆಗಳ ಮೇಲಿನ ಕೃಷಿಕರವನ್ನೂ ಇಳಿಸಲಾಗಿದೆ. ಕಚ್ಚಾ ತಾಳೆ ಎಣ್ಣೆ ಮೇಲಿನ ಕೃಷಿಕರವನ್ನು ಶೇ. 20ರಿಂದ ಶೇ. 7.5ಗೆ, ಕಚ್ಚಾ ಸೋಯಾಬೀನ್‌ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಕೃಷಿಕರವನ್ನು ಶೇ. 5ಕ್ಕೆ ಇಳಿಸಲಾಗಿದೆ. ಪರಿಣಾಮವಾಗಿ ಒಟ್ಟು ಕರ ಕಚ್ಚಾ ತಾಳೆ ಎಣ್ಣೆಗೆ ಶೇ. 7.5 ಹಾಗೂ ಕಚ್ಚಾ ಸೂರ್ಯಕಾಂತಿ ಮತ್ತು ಸೋಯಾಬೀನ್‌ ಎಣ್ಣೆಗೆ ಶೇ. 5 ಆಗಿರಲಿದೆ.
ಪುನೀತ್ ರಾಜಕುಮಾರ್ ಸಾವಿನ ಕುರಿತು ಮತ್ತೊಂದು ಅನುಮಾನ!?; ತನಿಖೆಗೆ ಆಗ್ರಹಿಸಿ ಪೊಲೀಸ್ ಠಾಣೆಗೂ ದೂರು…
ಜೊತೆಗಿದ್ದ ಗೆಳೆಯರೇ ಒಟ್ಟಿಗೇ ಉಂಡು, ಕೊಂದರು; ಡ್ರಗ್ಸ್‌ ನಶೆ, ಹಣದ ಆಸೆಗೆ ಬಿದ್ದು ಅಪಹರಿಸಿ ಕೊಲೆ ಮಾಡಿದ್ರು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − one =
Remember me
