ನವದೆಹಲಿ:ಕೇಂದ್ರ ಸರ್ಕಾರವೂ ಶೀಘ್ರದಲ್ಲೇ ನೂರು ರೂಪಾಯಿ ನಾಣ್ಯವನ್ನು ಹೊರ ತರಲಿದೆ ಎಂಬ ಸಂಗತಿಯೊಂದು ಹೊರಬಿದ್ದಿದೆ. ಮನ್​ ಕಿ ಬಾತ್​ನ ನೂರನೇ ಕಾರ್ಯಕ್ರಮದ ಸ್ಮರಣಾರ್ಥವಾಗಿ ಈ ನೂರು ರೂಪಾಯಿ ನಾಣ್ಯ ಬಿಡುಗಡೆ ಆಗಲಿದೆ ಎನ್ನಲಾಗಿದೆ.
ಮನ್ ಕಿ ಬಾತ್ ನೂರನೇ ಸಂಚಿಕೆಯ ಸಂಸ್ಮರಣಾರ್ಥವಾಗಿ ಈ ನೂರು ರೂಪಾಯಿ ನಾಣ್ಯವನ್ನು ಕೇಂದ್ರ ಸರ್ಕಾರ ಮುದ್ರಿಸಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಇದೇ ಏ.30ರಂದು ಮನ್​ ಕಿ ಬಾತ್​ನ ನೂರನೇ ಸಂಚಿಕೆ ಇದ್ದು ಅಂದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ನಾಣ್ಯ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ನಾಣ್ಯಗಳ ಪೈಕಿ ಸದ್ಯ 20 ರೂ. ಗರಿಷ್ಠ ಮುಖಬೆಲೆ. ನೂರು ರೂಪಾಯಿಯ ಈ ನಾಣ್ಯ ಕಾನೂನುಬದ್ಧ ಕರೆನ್ಸಿ ಆಗಿದ್ದು, ನೂರು ರೂ. ಮೌಲ್ಯವನ್ನು ಹೊಂದಿದ್ದರೂ ವ್ಯಾಪಕ ಬಳಕೆಗೆ ಲಭ್ಯವಿರುವುದಿಲ್ಲ. ಅದಾಗ್ಯೂ ಕೆಲವೊಂದು ನಿಗದಿತ ಸಂಸ್ಥೆಗಳಲ್ಲಿ ಈ ನಾಣ್ಯ ಲಭ್ಯವಿರುತ್ತದೆ.
ಇದನ್ನೂ ಓದಿ:ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು
ಹೇಗಿರಲಿದೆ?:ನೂರರ ಈ ನಾಣ್ಯವು ದುಂಡಗಿದ್ದು, 44 ಮಿ.ಮೀ. ವ್ಯಾಸವಿದ್ದು, 200 ದಂತುರಗಳು ಇರಲಿವೆ. ಮಿಶ್ರಲೋಹದ ಈ ನಾಣ್ಯ 35 ಗ್ರಾಮ ತೂಕ ಇರಲಿದ್ದು, ಶೇ. 50 ಬೆಳ್ಳಿ, ಶೇ. 40 ತಾಮ್ರ, ಶೇ. 5 ನಿಕ್ಕೆಲ್ ಮತ್ತು ಶೇ. 5 ಜಿಂಕ್​ ಒಳಗೊಂಡಿರುತ್ತದೆ. ಅಶೋಕಸ್ತಂಭ ಹಾಗೂ ಸತ್ಯಮೇವ ಜಯತೇ ಬರಹವನ್ನೂ ಈ ನಾಣ್ಯ ಹೊಂದಿರುತ್ತದೆ. ಜೊತೆಗೆ ದೇವನಾಗರಿ ಲಿಪಿಯಲ್ಲಿ ಭಾರತ ಮತ್ತು ಇಂಗ್ಲಿಷ್​ನಲ್ಲಿ ಇಂಡಿಯಾ ಎಂದೂ ಬರೆಯಲಾಗಿರುತ್ತದೆ. ಅಲ್ಲದೆ ಮನ್ ಕಿ ಬಾತ್ ಕುರಿತ ಬರಹವೂ ಇರಲಿದೆ.
ಸಿದ್ದರಾಮಯ್ಯ ಹೊತ್ತಿಸಿದ ಲಿಂಗಾಯತ ಕಿಡಿ: ಕೈ ನಾಯಕನ ವಿರುದ್ಧ ಕಮಲ ಪಡೆ ವಾಗ್ದಾಳಿ

‘ನೀವೇ ನಿಜವಾದ ಸಚಿನ್ ಅಂತ ಏನು ಗ್ಯಾರಂಟಿ?’ ಎಂದಿದ್ದಕ್ಕೆ ತೆಂಡುಲ್ಕರ್ ಕೊಟ್ಟ ವೆರಿಫಿಕೇಷನ್ ಇದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + eleven =
Remember me
