ಮುಂಬೈ:1,000 ಕೋಟಿ ರೂ.ಗಳ ಆನ್‌ಲೈನ್ ಪೋಂಜಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಬಾಲಿವುಡ್ ಸ್ಟಾರ್ ನಟ ಗೋವಿಂದ್​ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಒಡಿಶಾ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಬುಧವಾರ ತಿಳಿಸಿದೆ.
ರಾಷ್ಟ್ರೀಯ ಮಟ್ಟದಲ್ಲಿ ಬರೋಬ್ಬರಿ 1000 ಕೋಟಿ ರೂ. ಪಂಗನಾಮ ಹಾಕಿದ್ದ ಪೋಂಜಿ ಹಗರಣದ ಜತೆ ಬಾಲಿವುಡ್ ನಟ ಗೋವಿಂದ್ ಹೆಸರು ತಳುಕು ಹಾಕಿಕೊಂಡಿದೆ. ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಗೋವಿಂದ್ ಅವರನ್ನು ತನಿಖೆ ಮಾಡಲಾಗುವುದು ಎಂದು ಹೇಳಿಕೆ ತಿಳಿಸಿದೆ.
ಸೋಲಾರ್ ಟೆಕ್ನೋ ಅಲಯನ್ಸ್, ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಯು ಕ್ರಿಪ್ಟೋಕರೆನ್ಸಿ ಹೂಡಿಕೆಯ ಹೆಸರಿನಲ್ಲಿ ಆನ್‌ಲೈನ್ ಪೊಂಜಿ ಯೋಜನೆಯನ್ನು ನಡೆಸುತ್ತಿದೆ.ಇದರ ಭಾಗವಾಗಿ, ಕಂಪನಿಯು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅನುಮತಿಯಿಲ್ಲದೆ ದೇಶಾದ್ಯಂತ 2 ಲಕ್ಷಕ್ಕೂ ಹೆಚ್ಚು ಗ್ರಾಹಕರಿಂದ ಭಾರಿ ಮೊತ್ತದ ಠೇವಣಿ ಸಂಗ್ರಹಿಸಿದೆ.ಇದು ಸುಮಾರು ರೂ.1,000 ಕೋಟಿ ಸಂಗ್ರಹಿಸಿ ವಂಚಿಸಿದೆ.ಈ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ನಟ ಗೋವಿಂದ್ ಅವರನ್ನು ತನಿಖೆ ಮಾಡಲಾಗುವುದು ಎಂದು ಹೇಳಿಕೆ ತಿಳಿಸಿದೆ.
ಈ ಕುರಿತು EOW ಇನ್​ಸ್ಪೆಕ್ಟರ್ ಜನರಲ್ ಜೆ.ಎನ್. ಪಂಕಜ್ ಮಾತನಾಡಿ, “ಜುಲೈ ತಿಂಗಳಲ್ಲಿ ಗೋವಾದಲ್ಲಿ STA ಸಂಸ್ಥೆ ಹಮ್ಮಿಕೊಂಡಿದ್ದ ಅದ್ದೂರಿ ಕಾರ್ಯಕ್ರಮಕ್ಕೆ ಗೋವಿಂದ ಏಕೆ ಹೋಗಿದ್ದರು ಮತ್ತು ಪ್ರೊಮೋಷನಲ್ ವಿಡಿಯೋಗಳಲ್ಲಿ ಏಕೆ ಕಾಣಿಸಿಕೊಂಡರು ಎಂಬುದರ ಬಗ್ಗೆ ಅವರಲ್ಲಿ ಮಾಹಿತಿ ಪಡೆಯಲು ನಮ್ಮ ತಂಡ ಸದ್ಯದಲ್ಲೇ ಮುಂಬೈಗೆ ತೆರಳಿದೆ. ಈ ಪ್ರಕರಣದಲ್ಲಿ ಗೋವಿಂದ ಆರೋಪಿಯೂ ಅಲ್ಲ, ಅಪರಾಧಿಯೂ ಅಲ್ಲ. ಅವರು ಕೇವಲ ಪ್ರಚಾರ ಮಾತ್ರ ಮಾಡುತ್ತಿದ್ದರು ಎಂದಾದಲ್ಲಿ, ಅವರನ್ನು ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ” ಎಂದು ಅಧಿಕಾರಿ ತಿಳಿಸದ್ದಾರೆ.
ನೆಟ್​​ವರ್ಕ್​ ಚೈನ್ ಮೂಲಕ ಹಣ ಹೂಡಿಕೆ ಮಾಡಿ ಇತರರನ್ನೂ ಕರೆತರುವಂತೆ ಸಂಸ್ಥೆ ಹಲವರನ್ನು ಉತ್ತೇಜಿಸಿತ್ತು. ಹೂಡಿಕೆಯಾದ ಹಣವನ್ನು ಕ್ರಿಪ್ಟೋ ಕರೆನ್ಸಿಯಾಗಿ ಪರಿವತಿರ್ಸುವುದಾಗಿ ನಂಬಿಸಿತ್ತು. ಈ ಸಂಸ್ಥೆಯನ್ನು ನಂಬಿ ಬಿಹಾರ, ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ, ಹರಿಯಾಣ, ದೆಹಲಿ, ಝಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳ ಜನ ಹಣ ಹೂಡಿಕೆ ಮಾಡಿದ್ದರು. ಭದ್ರಕ್, ಕ್ಯೋಂಜಾರ್, ಬಾಲಾಸೋರ್, ಮಯೂರ್ಭಂಜ್, ಮತ್ತು ಭುಬನೇಶ್ವರ್ ಪ್ರದೇಶಗಳಲ್ಲಿ 10,000 ಜನರಿಂದ 30 ಕೋಟಿ ರೂ. ಹಣ ಪಡೆದು ವಂಚಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ರಾಷ್ಟ್ರೀಯ ಮುಖ್ಯಸ್ಥ ಗುರ್​ತೇಜ್ ಸಿಧು, ಒಡಿಶಾದ ಶಾಖೆಯ ಮುಖ್ಯಸ್ಥ ನಿರೋದ್ ದಾಸ್​ ಮತ್ತು ಇತರ ಸದಸ್ಯರನ್ನು ಬಂಧಿಸಲಾಗಿತ್ತು.
VIDEO | ಕುಟುಂಬಕ್ಕೆ ಹೆಗಲಾಗಲು ರಸ್ತೆ ಬದಿ ರುಚಿಕರ ಆಹಾರ ಮಾರುತ್ತಿರುವ ಮಕ್ಕಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
