ನವದೆಹಲಿ:ಮಹಾಮಾರಿ ಕರೊನಾ ಮಣಿಸಲು ನಾವು ನೀಡಿದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸದ ಕೇಂದ್ರ ಸರ್ಕಾರ ಅವುಗಳನ್ನು ಶೋಚನಿಯವಾಗಿ ನಡೆಸಿಕೊಂಡು, ಭಾಗಶಃ ಮಾತ್ರ ಕಾರ್ಯನಿರ್ವಹಿಸಿದೆ ಎಂದು ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕರೊನಾ ತೊಡೆದು ಹಾಕುವ ಹೃದಯ ವೈಶಾಲತೆ ಮತ್ತು ಕೆಲಸದ ಚುರುಕುತನ ಕೇಂದ್ರ ಸರ್ಕಾರದ ಅನುಪಸ್ಥಿತಿಯಲ್ಲಿ ಎದ್ದು ಕಾಣುತ್ತಿದೆ ಎಂದು ವ್ಯಂಗ್ಯವಾಡಿರುವ ಸೋನಿಯಾ ಗಾಂಧಿ, ನಮ್ಮ ಸಭೆ ನಡೆದು ಮೂರು ವಾರಗಳು ಕಳೆದರೂ ಕರೊನಾ ಸೋಂಕು ಮಾತ್ರ ವೇಗವಾಗಿ ಹರಡುತ್ತಲೇ ಇದೆ ಎಂದರು.
ನಾನು ಕೇಂದ್ರ ಸರ್ಕಾರಕ್ಕೆ ರಚನಾತ್ಮಕ ಸಹಕಾರ ಮತ್ತು ಸಲಹೆಗಳನ್ನು ನೀಡಿದ್ದೆ. ಆದರೆ ಕೇಂದ್ರ ಸರ್ಕಾರ ಭಾಗಶಃ ಮಾತ್ರ ಕಾರ್ಯನಿರ್ವಹಿಸಿದ್ದು, ನಮ್ಮ ಸಲಹೆಗಳನ್ನು ದುಃಖಕರ ಮಾರ್ಗದಲ್ಲಿ ನಡೆಸಿಕೊಂಡಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಕೂಲಿಗಾರರು, ವಲಸೆ ಕಾರ್ಮಿಕರು, ಕಟ್ಟಡ ನಿರ್ಮಾಣ ಕೆಲಸಗಾರರು ಮತ್ತು ಅಸಂಘಟಿತ ವಲಯದಂತಹ ಸಮಾಜದ ಕೆಲವು ವಿಭಾಗಗಳು ಲಾಕ್​ಡೌನ್​ನಿಂದ ತುಂಬಾ ಕಷ್ಟದ ಸ್ಥಿತಿಯಲ್ಲಿವೆ. ವ್ಯಾಪಾರ, ವಾಣಿಜ್ಯ ಮತ್ತು ಕಾರ್ಖಾನೆಗಳು ಸ್ತಬ್ಧವಾಗಿವೆ. ಕೋಟ್ಯಾಂತರ ಜೀವನೋಪಾಯಗಳು ನಾಶವಾಗುತ್ತಿವೆ. ಜನರನ್ನು ಪರೀಕ್ಷಿಸಿ, ಪತ್ತೆಹಚ್ಚಿ ಕ್ವಾರಂಟೈನ್​ ಮಾಡದೇ ಬೇರಿ ದಾರಿ ಇಲ್ಲವೆಂದು ಪ್ರಧಾನಿ ಮೋದಿ ಅವರಿಗೆ ಪದೇಪದೆ ಕೇಳಿಕೊಳ್ಳಲಾಗುತ್ತಿದೆ. ದುರಾದೃಷ್ವಶಾತ್​ ಕರೊನಾ ಪರೀಕ್ಷಾ ಸಂಖ್ಯೆ ಇನ್ನು ಮಂದಗತಿಯಲ್ಲಿದೆ ಮತ್ತು ಟೆಸ್ಟಿಂಗ್ ಕಿಟ್​ಗಳ ಪೂರೈಕೆಯ ಕೊರತೆಯು ಇದೆ​ ಹಾಗೂ ಪಿಪಿಇ ಕಿಟ್​ ಸಂಖ್ಯೆ ಹಾಗೂ ಗುಣಮಟ್ಟವೂ ಬಡವಾಗಿದೆ ಎಂದು ತಿಳಿಸಿದ್ದಾರೆ.
ಮಾರ್ಚ್​ 23ರಂದು ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸರಣಿ ಪತ್ರಗಳನ್ನು ಬರೆದು ಸರ್ಕಾರಕ್ಕೆ ಕೋವಿಡ್​ 19 ವಿರುದ್ಧ ಹೋರಾಡುವುದು ಹೇಗೆ ಎಂಬ ಸಲಹೆಗಳನ್ನು ನೀಡಿದ್ದರು.(ಏಜೆನ್ಸೀಸ್​)
ಕರೊನಾ ವಿರುದ್ಧ ಹೋರಾಡಲು ಪ್ರಧಾನಿ ಮೋದಿಗೆ ಪ್ರಮುಖ 5 ಸಲಹೆ ನೀಡಿದ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − two =
Remember me
