ನವದೆಹಲಿ:ದೇಶದಲ್ಲಿ ಕೃಷಿ ಮೂಲಸೌಕರ್ಯ ವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಡಿ ಇರಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಗ್ರಿಕಲ್ಚರ್ ಇನ್​​ಫ್ರಾಸ್ಟ್ರಕ್ಚರ್​ ಫಂಡ್​ ಸ್ಥಾಪನೆಯ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದೆ.
ಈ ನಿಧಿಗೆ ಕಾರ್ಪಸ್ ಫಂಡ್ ಆಗಿ 1 ಲಕ್ಷ ಕೋಟಿ ರೂಪಾಯಿಯನ್ನೂ ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಈ ಹಣವನ್ನು ಕೃಷಿ ಕ್ಷೇತ್ರದಲ್ಲಿನ ಉದ್ಯಮಿಗಳು, ನವೋದ್ಯಮಿಗಳು ಮತ್ತು ಅಗ್ರಿ ಟೆಕ್​ ಕ್ಷೇತ್ರದವರು, ಕೃಷಿಕರ ಗುಂಪುಗಳಿಗೆ ಮೂಲಸೌಕರ್ಯ, ಲಾಜಿಸ್ಟಿಕ್ಸ್ ಸೌಲಭ್ಯವನ್ನು ನಿರ್ಮಿಸಲು ಬಳಸಲಾಗುತ್ತದೆ. ಕೃಷಿ ಮೂಲಸೌಕರ್ಯ ನಿಧಿಯು ಕೋವಿಡ್​ 19 ಸಂಕಷ್ಟ ಪರಿಹಾರಕ್ಕೆ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿ ಹಣಕಾಸು ಪ್ಯಾಕೇಜಿನ ಭಾಗವೇ ಆಗಿದೆ.
ಇದನ್ನೂ ಓದಿ:ನವೆಂಬರ್‌ ಅಂತ್ಯದವರೆಗೂ ಉಚಿತ ಪಡಿತರ- ಸಚಿವ ಸಂಪುಟ ಅನುಮೋದನೆ
ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೃಷಿ ಕ್ಷೇತ್ರದ ಮಟ್ಟಿಗೆ ಇದೊಂದು ಐತಿಹಾಸಿಕ ತೀರ್ಮಾನವಾಗಿದೆ. ಪ್ರೈಮರಿ ಅಗ್ರಿ ಕ್ರೆಡಿಟ್ ಸೊಸೈಟಿಗಳಿಗೆ, ಕೃಷಿಕರ ಗುಂಪುಗಳಿಗೆ, ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಸೇಷನ್​ (ಎಫ್​ಪಿಒಎಸ್​), ಕೃಷಿ ಉದ್ಯಮಿಗಳು, ಸ್ಟಾರ್ಟಪ್​ಗಳು, ಅಗ್ರಿ ಟೆಕ್​ ಉದ್ಯಮಿಗಳಿಗೆ ಒಂದು ಲಕ್ಷ ಕೋಟಿ ರೂಪಾಯಿಗೂ ಅಧಿಕ ನೆರವು ಸಿಗಲಿದೆ ಎಂದು ಹೇಳಿದರು.
ಕೋಲ್ಡ್​ ಸ್ಟೋರೇಜ್​ಗಳು, ವೇರ್​ಹೌಸಿಂಗ್​, ಸಿಲೋಸ್​, ಗ್ರೇಡಿಂಗ್​, ಪ್ಯಾಕಿಂಘ್ ಘಟಕಗಳು, ಇ-ಮಾರ್ಕೆಟಿಂಗ್ ಪಾಯಿಂಟ್ಸ್​, ಇ-ಟ್ರೇಡಿಂಗ್​ ಪ್ಲಾಟ್​ಫಾರ್ಮ್ಸ್​ ಮುಂತಾದವುಗಳ ಸ್ಥಾಪನೆಗೆ ನೆರವು ಸಿಗಲಿದೆ. (ಏಜೆನ್ಸೀಸ್)
ಬಡ ಮಹಿಳೆಯರಿಗೆ ಇನ್ನೂ 3 ಸಿಲಿಂಡರ್​ ಉಚಿತ – ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
