ನವದೆಹಲಿ:ಒಂದೆಡೆ ಚೀನಾದ ಕರೊನಾ ವೈರಸ್ ಹೊಡೆತಕ್ಕೆ ಸಿಲುಕಿ ಜನ ನಲುಗಿಹೋಗಿದ್ದರೆ ಇನ್ನೊಂದೆಡೆ ಪಾಕಿಸ್ತಾನದ ಮಿಡತೆಗಳು ರೈತರನ್ನು ಕಂಗೆಡಿಸಿವೆ.ಮಿಡತೆ ದಾಳಿ ತಡೆಗೆ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸರ್ಕಾರಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ. ಸುಧಾರಿತ ಸ್ಪ್ರೇಯರ್ ಮತ್ತು ಡ್ರೋನ್‌ಗಳನ್ನು, ಟ್ರಾಕ್ಟರ್​​ಗಳನ್ನು ಬಳಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಕುರಿತು ಹಲವು ಪರಿಣಾಮಕಾರಿ, ಸುಧಾರಿತ ಕ್ರಮಗಳನ್ನು ಘೋಷಿಸಿದೆ.ರಾಜಸ್ಥಾನದಲ್ಲಿ ಕೃಷಿಭೂಮಿಗಳ ಮೇಲೆ ಮೊದಲು ದಾಳಿ ಮಾಡಿದ ಮಿಡತೆಗಳು ಈಗ ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಿಗೆ ಹರಡಿವೆ. ಈ ನಿಟ್ಟಿನಲ್ಲಿ ಮಿಡತೆ ಹಾವಳಿಯನ್ನು ಪರೀಕ್ಷಿಸಲು ಕೇಂದ್ರವು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಅಧಿಕಾರಿಗಳ ತಂಡಗಳನ್ನು ರಚಿಸಿದೆ.ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಮಿಡತೆಗಳ ತಂಡ ಪ್ರವೇಶಿಸುವ ಸಾಧ್ಯತೆ ಇದ್ದು, ಈ ಎರಡು ರಾಜ್ಯಗಳಿಗೆ ಲೋಕಸ್ಟ್ ವಾರ್ನಿಂಗ್ ಸಂಸ್ಥೆ (ಎಲ್‌ಡಬ್ಲ್ಯುಒ) ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:ಎನ್​ಎಚ್​ಎಐದಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗುವ ಅವಕಾಶ
ತೋಟ, ಹೊಲ, ಗದ್ದೆಗಳಲ್ಲಿ ರಾಸಾಯನಿಕಗಳನ್ನು ಸಿಂಪಡಿಸಲು ಅಮೆರಿಕದಿಂದ 60 ಹೆಚ್ಚುವರಿ ಸ್ಪ್ರೇಯರ್​​ಗಳನ್ನು ಖರೀದಿಸಲು ಕೇಂದ್ರ ಕೃಷಿ ಸಚಿವಾಲಯ ಅನುಮೋದನೆ ನೀಡಿದೆ. ಮಿಡತೆ ತಡೆ ಕಾರ್ಯಾಚರಣೆಗಳಿಗೆ ರಿಮೋಟ್ಲಿ ಪೈಲಟೆಡ್ ಏರ್​​​​​ಕ್ರಾಫ್ಟ್ ಸಿಸ್ಟಮ್ ಅನ್ನು ಬಳಸಲು ಸರ್ಕಾರಿ ಘಟಕಕ್ಕೆ ನಾಗರಿಕ ವಿಮಾನಯಾನ ಸಚಿವಾಲಯವು ಷರತ್ತುಬದ್ಧ ವಿನಾಯಿತಿ ನೀಡಿದೆ. ಕೀಟನಾಶಕಗಳನ್ನು ಸಿಂಪಡಿಸಲು ಡ್ರೋನ್‌ಗಳ ಬಳಕೆಗಾಗಿ ಎರಡು ಸಂಸ್ಥೆಗಳನ್ನು ನಿರ್ಧರಿಸಲಾಗಿದೆ. ಮಿಡತೆ ಪೀಡಿತ ರಾಜ್ಯಗಳಲ್ಲಿ ಆಯಾ ಜಿಲ್ಲಾಡಳಿತಗಳ ಸಹಯೋಗದೊಂದಿಗೆ ಮತ್ತು ಕೃಷಿ ಯಂತ್ರೋಪಕರಣಗಳೊಂದಿಗೆ 200 ಲೋಕಸ್ಟ್ ಸರ್ಕಲ್ ಕಚೇರಿಗಳು (ಎಲ್‌ಸಿಒ) ಸಮೀಕ್ಷೆ ಮತ್ತು ನಿಯಂತ್ರಣ ಕಾರ್ಯಾಚರಣೆಗಳನ್ನು ನಡೆಸುತ್ತಿವೆ ಎಂದು ಸರ್ಕಾರ ಹೇಳಿದೆ.
ಕೀಟನಾಶಕ ಸಿಂಪಡಣೆಗಾಗಿ 89 ಅಗ್ನಿಶಾಮಕ ದಳ; 120 ಸಮೀಕ್ಷೆ ವಾಹನಗಳು; ಸ್ಪ್ರೇ ಉಪಕರಣಗಳನ್ನು ಹೊಂದಿರುವ 47 ನಿಯಂತ್ರಣ ವಾಹನಗಳು ಮತ್ತು ಸ್ಪ್ರೇಯರ್ ತುಂಬಿದ 810 ಟ್ರಾಕ್ಟರ್ ಯಂತ್ರಗಳನ್ನು ನಿಯೋಜಿಸಲಾಗಿದ್ದು, ಇಂಗ್ಲೆಂಡ್​​ನಿಂದ 60 ಹೆಚ್ಚುವರಿ ಸ್ಪ್ರೇಯರ್​​​ಗಳನ್ನು ಖರೀದಿಸಲು ಸರ್ಕಾರ ಯೋಜಿಸುತ್ತಿದೆ.
ಇದನ್ನೂ ಓದಿ:ಎಸ್​ಇಬಿಐನಲ್ಲಿ ಇಂಟರ್ನ್​​ಷಿಪ್ ಮಾಡಲು ಅರ್ಹತೆಗಳೇನು?
ಕರ್ನಾಟಕದಲ್ಲಿ ಅಗತ್ಯ ಮುಂಜಾಗ್ರತೆಗೆ ಸೂಚನೆ:ದೇಶದ ಹಲವು ರಾಜ್ಯಗಳಲ್ಲಿ ಲಗ್ಗೆ ಇಟ್ಟಿರುವ ಮಿಡತೆ ಹಿಂಡುಕರ್ನಾಟಕಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಅಗತ್ಯ ಮುಂಜಾಗ್ರತೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದಾರೆ. ಸದ್ಯ ಮಿಡತೆ ಹಿಂಡು ಮಹಾರಾಷ್ಟ್ರದ ನಾಗ್ಪುರದಲ್ಲಿದೆ. ಗಾಳಿ ಬೀಸಿದ ದಿಕ್ಕಿಗೆ ಇವು ಹಾರಲಿದ್ದು, ರಾಜ್ಯದ ಗಡಿಯಿಂದ 300 ಕಿ.ಮೀ. ದೂರದ ನಾಗ್ಪುರದಲ್ಲಿ ಒಂದು ವೇಳೆ ಸ್ಥಳೀಯ ಮಾರುತಗಳುಂಟಾಗಿ ಗಾಳಿ ವಿರುದ್ಧ ದಿಕ್ಕಿನಲ್ಲಿ ಬೀಸಿದರೆ ಮಿಡತೆಗಳು ಸಾಂಗ್ಲಿ, ಸತಾರ, ಪುಣೆ ಮಾರ್ಗವಾಗಿ ರಾಜ್ಯಕ್ಕೆ ದಾಳಿ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲು ಗುರುವಾರ ವಿಜ್ಞಾನಿಗಳ ಜತೆ ಸಭೆ ಕರೆದಿದ್ದಾರೆ.
ವೈದ್ಯಲೋಕಕ್ಕೆ ಸವಾಲಾಗಿಯೇ ಉಳಿದರೆ ಚುನ್ರಿವಾಲಾ ಮಾತಾಜಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
