ಬೀರ್‌ಪುರ:ಸರ್ಕಾರಿ ನೌಕರರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಪ್ರತಿನಿತ್ಯ ಹೆಲ್ಮೆಟ್​​ ಧರಿಸಿ ಕೆಲಸ ಮಾಡುತ್ತಿರುವ ವಿಶಿಷ್ಟ ಘಟನೆ ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಬೀರ್‌ಪುರ ಮಂಡಲದಲ್ಲಿ ನಡೆದಿದೆ.
ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಂಡಲ ಪರಿಷತ್ ಅಭಿವೃದ್ಧಿ ಅಧಿಕಾರಿಗಳೇ ಹೀಗೆ ಹೆಲ್ಮೆಟ್ ಧರಿಸಿ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ. ಕಚೇರಿ ಕಟ್ಟಡದ ದುಸ್ಥಿತಿ ಹಾಗೂ ಭದ್ರತೆಯ ದೃಷ್ಟಿಯಿಂದ ಹೆಲ್ಮೆಟ್ ಹಾಕಿಕೊಂಡು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ವಾಸಿಸಲು ಯೋಗ್ಯವಲ್ಲದ ಇಂತಹ ಹಳೆಯ ಕಟ್ಟಡದಲ್ಲಿ ತಮ್ಮ ಜೀವನದ ಬಗ್ಗೆ ಯೋಚಿಸದೆ ಅಪಾಯಕಾರಿ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದು, ಈ ಕಟ್ಟಡದ ಅವಶೇಷಗಳು ಅವಾಗ ಅವಾಗ ಬೀಳುತ್ತಿವೆ ಎಂದು ಕಛೇರಿ ನೌಕರರು ದೂರಿದ್ದಾರೆ.
ಇದನ್ನೂ ಓದಿ:ರೋಗಿಗೆ ಮೂತ್ರ ಚೀಲದ ಬದಲು ಕೂಲ್​ ಡ್ರಿಂಕ್​ ಬಾಟಲಿ ಬಳಕೆ: ಅವ್ಯವಸ್ಥೆ ಕಂಡು ನೆಟ್ಟಿಗರು ಗರಂ
ಕಳೆದ ವರ್ಷದಿಂದ ಎಂಪಿಡಿಒ ಕಚೇರಿಯ ಮೇಲ್ಛಾವಣಿ ಸೋರುತ್ತಿದ್ದು, ಈಗ ಶಿಥಿಲಾವಸ್ಥೆಯಲ್ಲಿದೆ. ಕಳೆದ ವರ್ಷ ಎಂಪಿಡಿಒಗಳು ಕೆಲಸ ಮಾಡುತ್ತಿರುವಾಗ ಮೇಲ್ಛಾವಣಿಯಿಂದ ಚಪ್ಪಡಿಗಳು ಬೀಳುತ್ತಲೇ ಇದ್ದರೂ ನೌಕರರಿಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಕೂಡಲೇ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಎಂಪಿಡಿಒ ಕಚೇರಿ ಸ್ಥಳಾಂತರಕ್ಕೆ ಆದೇಶ ನೀಡಿದರೂ ಇದುವರೆಗೂ ಜಾರಿಯಾಗಿಲ್ಲ. ಆತಂಕಕ್ಕೊಳಗಾದ ನೌಕರರು ತಮ್ಮ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ ಕೆಲಸ ಮಾಡುತ್ತಿದ್ದು, ಈ ಪ್ರದೇಶದಲ್ಲಿ ಜುಲೈನಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಕಚೇರಿಯ ಆವರಣ ಮಳೆಗೆ ತುಂಬಿ ಗೋಡೆಗಳು ಒದ್ದೆಯಾಗಿ ಶಿಥಿಲಗೊಂಡಿದೆ.
ಇಂತಹ ಅಪಾಯಕಾರಿ ಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ನೌಕರರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಕೂಡ ಪ್ರತಿಕ್ರಿಯಿಸುತ್ತಿದ್ದಾರೆ. ಉದ್ಯೋಗಿಗಳಿಗೆ ಬೆಂಬಲವಾಗಿ ನಿಲ್ಲುವುದರೆ ಜತೆಗೆ ಮತ್ತು ಕೆಲಸದ ಬಗ್ಗೆ ಅವರ ಸಮರ್ಪಣಾಭಾವವನ್ನು ಶ್ಲಾಘಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − five =
Remember me
