ನವದೆಹಲಿ:ದೇಶದಲ್ಲಿ ಇಂಧನಗಳ ಬಳಕೆ ಹೆಚ್ಚಿದ್ದು, ಸೋಲಾರ್​ ಅಳವಡಿಕೆ ಅವಶ್ಯವಾಗಿರುವುದರಿಂದ ಅದರತ್ತ ಹೆಚ್ಚಿನ ಒತ್ತು ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ವೇಳೆಯಲ್ಲಿ ಹೇಳಿದ್ದಾರೆ. ದೇಶದ 15 ಲಕ್ಷ ರೈತರಿಗೆ ಸೋಲಾರ್​ ಪಂಪ್​ ಅಳವಡಿಕೆಗೆ ಹಣ ನೀಡುವುದಾಗಿ ಅವರು ತಿಳಿಸಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್​ ಉರ್ಜಾ ಸುರಕ್ಷಾ ಉತ್ಥಾನ್​ ಮಹಾಭಿಯಾನ (ಪಿಎಂ ಕೆಯುಎಸ್​ಯುಎಮ್​​) ಯೋಜನೆಯನ್ನು ಆರಂಭಿಸಲಾಗಿತ್ತು. 34,422 ಕೋಟಿ ಮೊತ್ತದ ಈ ಯೋಜನೆಯಲ್ಲಿ ಈಗಾಗಲೇ ಒಟ್ಟು 34,422 ಕೋಟಿ ರೈತರನ್ನು ಇಂಧನ ಮುಕ್ತ ಕೃಷಿಯತ್ತ ತರಲಾಗಿದೆ. ಬರಡು ಭೂಮಿಯಲ್ಲಿ ಸೋಲಾರ್​ ಅಳವಡಿಕೆ ಮಾಡುವ ಮೂಲಕ ಆದಾಯ ತೆಗೆಯಲು ಸಹಾಯ ಮಾಡಲಾಗಿದೆ ಎಂದು ಸಚಿವೆ ತಿಳಿಸಿದ್ದಾರೆ.
ಪಿಎಂ ಕೆಯುಎಸ್​ಯುಎಮ್​​ ಯೋಜನೆಯನ್ನು ಮೂರು ಘಟಕಗಳಾಗಿ ಕರೆಯಲಾಗಿದೆ. ಮೊದಲನೆಯ ಘಟಕದಲ್ಲಿ ಗ್ರಿಡ್​ಗಳಿಂದ ಸಂಪರ್ಕಿತವಾದ ವಿಕೇಂದ್ರೀಕೃತ ಗ್ರೌಂಡ್​ಗಳಲ್ಲಿ 10,000 ಮೆಗಾವ್ಯಾಟ್​ ಸೌರಶಕ್ತಿ ತಯಾರಿಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಎರಡನೆಯ ಘಟಕದ ಅನುಸಾರ 17.5 ಲಕ್ಷ ಸ್ಟಾಂಡ್​ ಅಲೋನ್​ ಸೋಲಾರ್​ ಕೃಷಿ ಪಂಪ್​ಗಳು ಮತ್ತು ಮೂರನೆಯ ಘಟಕದಲ್ಲಿ 10 ಲಕ್ಷ ಗ್ರಿಡ್​ ಕನೆಕ್ಟೆಡ್​ ಸೋಲಾರ್​ ಕೃಷಿ ಪಂಪ್​ಗಳನ್ನು ನಿರ್ಮಿಸುವುದಾಗಿ ಬಜೆಟ್​ನಲ್ಲಿ ತಿಳಿಸಲಾಗಿದೆ. ಮುರು ಘಟಕಗಳಿಂದ ಒಟ್ಟಾಗಿ 2022ರ ವೇಳೆಗೆ 25,750 ಮೆಗಾ ವ್ಯಾಟ್​ ವಿದ್ಯುತ್​ ತಯಾರಿಸುವುದಾಗಿ ಸಚಿವೆ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
