ನವದೆಹಲಿ:ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಇಸ್ಲಾಮಿಕ್​ ಸ್ಟೇಟ್ಸ್​ ನ ಉಪಸ್ಥಿತಿ ಇರುವ ಬಗ್ಗೆ ಮಾಹಿತಿ ಇದ್ದು, ಈಗಾಗಲೇ 122 ಆರೋಪಿಗಳನ್ನು ನ್ಯಾಷನಲ್ ಇನ್​ವೆಸ್ಟಿಗೇಶನ್ ಏಜೆನ್ಸಿ(ಎನ್​ಐಎ) ಬಂಧಿಸಿದೆ. ಈ ಸಂಬಂಧ 17 ಕೇಸ್​ಗಳು ದಾಖಲಾಗಿವೆ. ತೆಲಂಗಾಣ, ಕೇರಳ, ಆಂಧ್ರಪ್ರದಶ, ಕರ್ನಾಟಕ, ತಮಿಳುನಾಡುಗಳಲ್ಲಿ ಈ ಆರೋಪಿಗಳಿದ್ದರು ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಬುಧವಾರ ತಿಳಿಸಿದೆ.
ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ. ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಮ್ಮು-ಕಾಶ್ಮೀರ ಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಸಕ್ರಿಯವಾಗಿದೆ ಎಂಬ ಅಂಶ ಎನ್​ಐಎ ತನಿಖೆಯ ವೇಳೆ ಖಾತ್ರಿಯಾಗಿದೆ. ಇಸ್ಲಾಮಿಕ್ ಸ್ಟೇಟ್​ ತನ್ನ ಸಿದ್ಧಾಂತವನ್ನು ಪ್ರಚುರ ಪಡಿಸಲು ಇಂಟರ್​ನೆಟ್​ನ ವಿವಿಧ ವೇದಿಕೆಗಳನ್ನು ಬಳಸಿಕೊಳ್ಳುತ್ತಿದೆ. ಹೀಗಾಗಿ ಸೈಬರ್ ಸ್ಪೇಸ್​ ಮೇಲೂ ನಿಗಾ ಇರಿಸಲಾಗಿದ್ದು, ಸೂಕ್ತ ಸಮಯದಲ್ಲಿ ಸರಿಯಾದ ಕ್ರಮವನ್ನೇ ಏಜೆನ್ಸಿಗಳು ತೆಗೆದುಕೊಳ್ಳುತ್ತಿವೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ:ಅಡವಿ ತುಡವಿ ಜೇನು ಹುಳು, ಸೀತಾಳೆ ಆರ್ಕಿಡ್​ಗೆ ರಾಜ್ಯಪಟ್ಟ?
ಈ ಚಟುವಟಿಕೆಗಳನ್ನು ನಡೆಸುವುದಕ್ಕೆ ಇದರಲ್ಲಿ ಸಕ್ರಿಯರಾಗಿ ಇರುವಂಥವರಿಗೆ ದುಡ್ಡು ಎಲ್ಲಿಂದ ಬರುತ್ತಿದೆ? ಯಾರು ಫಂಡಿಂಗ್ ಮಾಡುತ್ತಿದ್ದಾರೆ? ಎಂಬಿತ್ಯಾದಿ ಮಾಹಿತಿ ಸರ್ಕಾರದ ಬಳಿ ಇದೆ. ಅನ್​ಲಾಫುಲ್ ಆ್ಯಕ್ಟಿವಿಟೀಸ್ (ಪ್ರಿವೆನ್ಶನ್​) ಆ್ಯಕ್ಟ್​ 1967 ಪ್ರಕಾರ ಇಸ್ಲಾಮಿಕ್ ಸ್ಟೇಟ್, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್​ ಆ್ಯಂಡ್ ಲೆವಂಟ್​, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್​ ಆ್ಯಂಡ್ ಸಿರಿಯಾ, ದಾಯಿಷ್​, ಇಸ್ಲಾಮಿಕ್ ಸ್ಟೇಟ್ ಇನ್ ಖೊರಸಾನ್​ ಪ್ರೊವಿಯೆನ್ಸ್​(ಐಎಸ್​ಕೆಪಿ), ಐಎಸ್​ಐಎಸ್​ ವಿಲಾಯತ್ ಖೊರಸಾನ್​, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ದ ಶಾಮ್ ಖೊರಸಾನ್​ ಮತ್ತು ಅವುಗಳ ಅಧೀನ ಸಂಘಟನೆಗಳನ್ನು ಅನ್​ಲಾಫುಲ್ ಆ್ಯಕ್ಟಿವಿಟೀಶ್​ (ಪ್ರಿವೆನ್ಶನ್​) ಆ್ಯಕ್ಟ್ 1967ರ ಫಸ್ಟ್ ಷೆಡ್ಯೂಲ್ ಪ್ರಕಾರ ಉಗ್ರ ಸಂಘಟನೆಗಳು ಎಂದು ಘೋಷಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. (ಏಜೆನ್ಸೀಸ್)
ಪಾಕ್ ಕ್ರಿಕೆಟ್ ಬೋರ್ಡ್ ದಿವಾಳಿ ಆಗಿಹೋಯಿತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
