ನವದೆಹಲಿ:ರೂಪಾಂತರಗೊಂಡ ಕರೊನಾ ವೈರಸ್ ಕುರಿತು ಯಾರೂ ಭಯಪಡುವ ಅಥವಾ ಆತಂಕಕ್ಕೆ ಒಳಗಾಗಬೇಕಾದ ಅವಶ್ಯಕತೆ ಇಲ್ಲ. ಬ್ರಿಟನ್​ನಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಬ್ರಿಟನ್​ನಲ್ಲಿ ರೂಪಾಂತರಗೊಂಡ ಕರೊನಾ ವೈರಸ್ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಕಾರಣ ಭಾನುವಾರ ಒಂದೇ ದಿನ 35 ಸಾವಿರಕ್ಕೂ ಹೆಚ್ಚು ಜನ ಸೋಂಕುಪೀಡಿತರಾಗಿದ್ದಾರೆ. ಈ ವಿದ್ಯಮಾನದ ಬೆನ್ನಿಗೆ ವಿವಿಧ ದೇಶಗಳು ಬ್ರಿಟನ್​ ಜತೆಗಿನ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿದುಕೊಂಡಿವೆ. ಭಾರತದ ಕ್ರಮದ ಬಗ್ಗೆ ಸುದ್ದಿಗಾರರು ಸಚಿವರನ್ನು ಕೇಳಿದಾಗ ಅವರು ಉತ್ತರಿಸಿದ್ದಿಷ್ಟು –
ಇದನ್ನೂ ಓದಿ:ಹೊಸಮಾದರಿ ಕೋವಿಡ್ 19 – ತುರ್ತುಸಭೆ ಕರೆದಿರುವ ಕೇಂದ್ರ ಸರ್ಕಾರ
ಕಳೆದ ಒಂದು ವರ್ಷದಿಂದ ಕೋವಿಡ್ 19 ಪರಿಸ್ಥಿತಿಯನ್ನು ಸರ್ಕಾರ ನಿರ್ವಹಿಸಿದೆ. ಪ್ರತಿಯೊಂದು ಆಗುಹೋಗುಗಳು ಸರ್ಕಾರದ ಅರಿವಿನಲ್ಲಿದೆ. ನೀವು ನನ್ನನ್ನು ಕೇಳುವುದಾದರೆ, ಈ ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತವಾಗುತ್ತಿರುವ ರೀತಿಯಲ್ಲಿ ಯಾರೂ ಆತಂಕ ಪಡಬೇಕಾದ್ದಿಲ್ಲ. ಆತಂಕಕ್ಕೆ ಒಳಗಾಗುವುದಕ್ಕೆ ಸಕಾರಣವೂ ಇಲ್ಲ. ನಾನು ಇಷ್ಟು ಹೇಳಬಲ್ಲೆ – ಈಗ ನಡೆಯುತ್ತಿರುವುದೆಲ್ಲವೂ ನೀರ ಮೇಲಿನ ಗುಳ್ಳೆಯ ಮಾದರಿಯಲ್ಲೇ ಊಹೆಯ ಮೇಲಿನ ವಿಚಾರಗಳಷ್ಟೆ. ಕಲ್ಪನೆ ಮಾಡಿಕೊಂಡಿರುವ ಪರಿಸ್ಥಿತಿಗಳು, ವದಂತಿ, ಊಹಾಪೋಹ ಮತ್ತು ಕಲ್ಪನೆ ಮಾಡಿಕೊಂಡ ಭಯ ಇತ್ಯಾದಿ. ನೀವು ಕೂಡ ಇದರಲ್ಲಿ ಭಾಗಿಯಾಗಬೇಡಿ ಎಂದು ಮಾಧ್ಯಮದವರಲ್ಲಿ ಮನವಿ ಮಾಡಿದರು.
ಇದಕ್ಕೂ ಮೊದಲು, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಬ್ರಿಟನ್​ನಿಂದ ಬರುವ ವಿಮಾನಗಳನ್ನು ನಿಷೇಧಿಸುವಂತೆ ಮನವಿ ಮಾಡಿ ಟ್ವೀಟ್ ಮಾಡಿದ್ದರು. ಅವರ ಆತಂಕ, ಕಾಳಜಿಯನ್ನು ಮುಂದಿಟ್ಟು ಸುದ್ದಿಗಾರರು ಸಚಿವರ ಬಳಿ ಈ ಕುರಿತು ಪ್ರತಿಕ್ರಿಯೆ ಕೇಳಿದ್ದರು. (ಏಜೆನ್ಸೀಸ್)
ರೂಪಾಂತರಗೊಂಡ ವೈರಸ್​ ಕಾಟಕ್ಕೆ ಕಂಗಾಲಾದ್ರು ಬ್ರಿಟನ್​ವಾಸಿಗಳು: ಬ್ರಿಟನ್​ ಜತೆಗೆ ವಿವಿಧ ರಾಷ್ಟ್ರಗಳ ಸಂಪರ್ಕ ಕಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 7 =
Remember me
