ನವದೆಹಲಿ:ದೇಶದಲ್ಲಿ ಕರೊನಾ ಸೋಂಕಿತರ ಪ್ರಮಾಣ ದ್ವಿಗುಣವಾಗುವ ಕಾಲಾವಧಿಯಲ್ಲಿ ಏರಿಕೆಯಾಗಿದೆ. ಅಂದರೆ, ಈ ಮೊದಲು 3.4 ದಿನಗಳಲ್ಲಿ ಎರಡು ಪಟ್ಟು ಹೆಚ್ಚಾಗುತ್ತಿದುದು ಈಗ 7.5 ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಕೇಂದ್ರ ಕುಟುಂಬ ಮತ್ತು ಆರೋಗ್ಯ ಇಲಾಖೆ ಹೇಳಿದೆ.
ದೇಶಾದ್ಯಂತ ವಿಧಿಸಲಾಗಿರುವ ಲಾಕ್​ಡೌನ್​ ನಿರ್ಬಂಧಗಳನ್ನು ಮೇ 3ರ ನಂತರ ಹಂತಹಂತವಾಗಿ ಸಡಿಲಗೊಳಿಸಲು ಕೇಂದ್ರ ಸರ್ಕಾರ ಮಾರ್ಗೋಪಾಯಗಳನ್ನು ಹುಡುಕುತ್ತಿದೆ. ಆ ವೇಳೆಗೆ ಸೋಂಕಿತರ ಪ್ರಮಾಣ ದ್ವಿಗುಣಗೊಳ್ಳುವ ಅವಧಿ 12 ದಿನಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷೆ ಹೊಂದಲಾಗಿದೆ.
ಇದರ ನಡುವೆ, ಮೇ ಅಂತ್ಯಕ್ಕೆ ಅಥವಾ ಜೂನ್​ ಆರಂಭದಲ್ಲಿ ಕರೊನಾ ಸೋಂಕಿನ ಎರಡನೇ ಅಲೆ ಅಥವಾ ಹಂತ ಆರರಂಭವಾಗಲಿದೆ. ಇದಕ್ಕಾಗಿಯೂ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಲಾಕ್​ಡೌನ್​ ನಿರ್ಬಂಧಗಳನ್ನು ಒಂದೇ ಬಾರಿಗೆ ತೆರವುಗೊಳಿಸಲು ಸಾಧ್ಯವಿಲ್ಲ ಎಂಬುದಂತೂ ಗೊತ್ತಿರುವ ಸಂಗತಿ. ಹೀಗಾಗಿ ಹಂತಹಂತವಾಗಿ ಕೆಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗುತ್ತದೆ. ಇದು ಶುರುವಾಗುತ್ತಿದ್ದಂತೆ ಕರೊನಾ ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬರಲಿದೆ. ಮೇ ಅಂತ್ಯ ಅಥವಾ ಜೂನ್​ ವೇಳೆಗೆ ಎರಡನೇ ಹಂತದ ಕರೊನಾ ಅಲೆ ಕಾಣಿಸಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರೊನಾ ವಿಚಾರವಾಗಿ ಜನರು ಈಗಾಗಲೇ ಜಾಗೃತರಾಗಿದ್ದಾರೆ. ಸಾಮಾಜಿಕ ಅಂತರದ ಮಹತ್ವ ಅರಿತಿದ್ದಾರೆ. ಮಾಸ್ಕ್​ ಧರಿಸುತ್ತಿದ್ದಾರೆ. ಹೀಗಾಗಿ ರೋಗಿಗಳ ಸಂಖ್ಯೆಯಲ್ಲಿ ದ್ವಿಗುಣವಾಗುವ ಕಾಲಾವಧಿ 5 ದಿನಗಳಿಗಿಂತ ಕಡಿಮೆ ಆಗಲಾರದು ಎಂಬ ಲೆಕ್ಕಾಚಾರ ಹಾಕಲಾಗಿದೆ.ನಗರ ಹಾಗೂ ಅರೆನಗರ ಪಟ್ಟಣಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಕರೊನಾ ನಿಯತ್ರಣ ಹೆಚ್ಚು ಸವಾಲಾಗಿದೆ. ದೆಹಲಿ, ಮುಂಬೈ ಹಾಗೂ ಚಂಡಿಗಢ್​ನ ವಿದ್ಯಮಾನಗಳು ಈ ಯುದ್ಧದಲ್ಲಿ ಹಲವು ಅನಿರೀಕ್ಷಿತಗಳು ಎದುರಾಗಬಹುದು ಎಂಬುದನ್ನು ತಿಳಿಸಿವೆ.
ಕರೊನಾ ಪ್ರಕರಣಗಳ ಹೆಚ್ಚಳ ಹಾಗೂ ಕಡಿಮೆಯಾದ ಆಧಾರದಲ್ಲಿ ಪ್ರದೇಶವಾರು ಲಾಕ್​ಡೌನ್​ ಹಾಗೂ ನಿಯಮಗಳ ಸಡಿಲಿಕೆಯು ಕನಿಷ್ಠ ಸೆಪ್ಟೆಂಬರ್​ ಮುಂದುವರಿಯಲಿದೆ. ಆದರೆ, ಎರಡನೇ ಹಂತದಲ್ಲಿ ಮೊದಲಿನಷ್ಟು ವೇಗವಾಗಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುವುದಿಲ್ಲ. ಜತೆಗೆ ಈಗಾಗಲೇ ಅಗತ್ಯ ಆಸ್ಪತ್ರೆ, ಟೆಸ್ಟಿಂಗ್​ ಕಿಟ್​ ಹಾಗೂ ವಿವಿಧ ವೈದ್ಯಕೀಯ ಅಗತ್ಯಗಳು ಎರಡನೇ ಹಂತದಲ್ಲಿ ಸಮಸ್ಯೆಯಾಗುವುದಿಲ್ಲ ಎಂಬ ವಿಶ್ವಾಸ ಅಧಿಕಾರಿಗಳದ್ದಾಗಿದೆ.
ವಿಡಿಯೋ ಕಾನ್ಫರೆನ್ಸಿಂಗ್​ ಮೇಲೆ ಏನಿದು ‘ಝೂಮ್​ ಬಾಂಬಿಂಗ್​’ ? ಚೀನಿ ಆ್ಯಪ್​ ಜನಪ್ರಿಯತೆ ಏರಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 13 =
Remember me
