ನವದೆಹಲಿ:ಹೊಸ ಕೃಷಿ ಕಾನೂನು ವಿರೋಧಿ ಪ್ರತಿಭಟನೆ ನಡೆಸುತ್ತಿರುವ ರೈತ ನಾಯಕರ ಜತೆಗೆ ಮಾತುಕತೆಯ ಪ್ರಸ್ತಾಪವನ್ನು ಇಟ್ಟಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​, ನಾವು ಕಳುಹಿಸಿರುವ ಪ್ರಸ್ತಾವನೆಯನ್ನು ಒಮ್ಮೆ ಓದಿಕೊಳ್ಳಿ. ನಂತರ ಮಾತುಕತೆ ನಡೆಸೋಣ ಎಂದು ಗುರುವಾರ ಕರೆ ಕೊಟ್ಟಿದ್ದಾರೆ.
ಪ್ರತಿಭಟನಾನಿರತರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಮುಕ್ತವಾಗಿ ಮಾತುಕತೆ ನಡೆಸುವುದಕ್ಕೆ ಸರ್ಕಾರ ಸಿದ್ಧವಿದೆ. ಕಾನೂನಿನ ಯಾವೆಲ್ಲ ಅಂಶಗಳ ಬಗ್ಗೆ ಅವರ ವಿರೋಧ ಇದೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಎಪಿಎಂಸಿ ಅಥವಾ ಎಂಎಸ್​ಪಿಗಳ ಮೇಲೆ ಕಾನೂನು ಯಾವ ರೀತಿಯ ಕೆಟ್ಟ ಪರಿಣಾಮವನ್ನೂ ಬೀರದು. ಇದನ್ನು ನಾವು ಅವರಿಗೆ ತಿಳಿಸಿ ಹೇಳುವುದಕ್ಕೆ ಪ್ರಯತ್ನಿಸಿದ್ದೇವೆ.
ಇದನ್ನೂ ಓದಿ:ಪ್ರೀತ್ಸೆ.. ಪೀತ್ಸೆ.. ಎನ್ನುತ್ತ ಕಂಡವರ ಹೆಂಡ್ತಿ ಹಿಂದೆ ಬಿದ್ದವನಿಗಾಗಿ ಪಾರ್ಟಿಯಲ್ಲೇ ಕಾಯುತ್ತ ಕುಳಿತಿದ್ದ ಜವರಾಯ!
ಗುತ್ತಿಗೆ ಕೃಷಿ ಪದ್ಧತಿ ಬಂದರೆ ಕೃಷಿ ಭೂಮಿ ಉದ್ಯಮಿಗಳ ಪಾಲಾಗಲಿದೆ ಎಂದು ಗುಜರಾತ್​, ಮಹಾರಾಷ್ಟ್ರ, ಪಂಜಾಬ್​, ಹರಿಯಾಣ, ಕರ್ನಾಟಕಗಳಲ್ಲಿ ಬಿಂಬಿಸಲಾಗುತ್ತಿದೆ. ವಾಸ್ತವದಲ್ಲಿ ಅಂಥ ಯಾವುದೇ ಅನುಭವ ಆಗಿಲ್ಲ ಎಂದು ಸಚಿವ ತೋಮರ್ ವಿವರಿಸಿದರು. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
VIDEO | ಭಾರ ಎತ್ತೋದಂದ್ರೆ ಏಳರ ಪೋರಿಗೆ ಬಲು ಸಲೀಸು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − thirteen =
Remember me
