ನವದೆಹಲಿ:ದೇಶದಲ್ಲಿ ಕೋವಿಡ್​-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಸರ್ಕಾರ ತೋರಿಸಿದ್ದಕ್ಕಿಂತಲೂ ಹೆಚ್ಚಿತ್ತಾ?– ಹೀಗೊಂದು ಅನುಮಾನ ದೇಶದ ಜನತೆಯಲ್ಲಿ ಮೂಡಿದ್ದು, ಒಂದಷ್ಟು ಚರ್ಚೆಗೂ ಕಾರಣವಾಗಿದೆ. ಸಾವಿನ ಲೆಕ್ಕದಲ್ಲೂ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಪ್ರತಿಪಕ್ಷದ ನಾಯಕರು ಕೂಡ ಆರೋಪ ಮಾಡಿದ್ದೂ ನಡೆದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಬಗ್ಗೆ ತನ್ನ ಸ್ಪಷ್ಟನೆಯನ್ನು ನೀಡಿದೆ.
2021ರ ನವೆಂಬರ್​ ಆರಂಭದವರೆಗೂ ದೇಶದಲ್ಲಿ 32ರಿಂದ 37 ಲಕ್ಷ ಮಂದಿ ಕರೊನಾದಿಂದಾಗಿ ಸಾವಿಗೀಡಾಗಿದ್ದಾರೆ. ಆದರೆ ಸರ್ಕಾರ ಕರೊನಾದಿಂದ ಸತ್ತವರ ಸಂಖ್ಯೆ ಬರೀ 4.6 ಲಕ್ಷ ಎಂದು ಕಡಿಮೆ ಲೆಕ್ಕ ತೋರಿಸಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿತ್ತು.
ಈ ಸಂಬಂಧ ಕೇಂದ್ರ ಸರ್ಕಾರವು ಪ್ರೆಸ್​ ಇನ್​ಫಾರ್ಮೇಷನ್​ ಬ್ಯೂರೋ ಮೂಲಕ ಸ್ಪಷ್ಟನೆಯನ್ನು ಹೊರಡಿಸಿದೆ.ಕೋವಿಡ್​ನಿಂದಾಗಿದ್ದೂ ಸೇರಿದಂತೆ ಸಾವಿನ ವರದಿ ದಾಖಲಿಸಿಕೊಳ್ಳಲು ಭಾರತದಲ್ಲಿ ಅತ್ಯುತ್ತಮ ವ್ಯವಸ್ಥೆ ಇದೆ. ಕರೊನಾ ಸಾವಿನ ಲೆಕ್ಕಾಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದ್ದು, ಕಡಿಮೆ ಲೆಕ್ಕ ತೋರಿಸಿದ್ದಾರೆ ಎಂಬುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಹಾಗೆ ಬಿಂಬಿಸುವ ಮೂಲಕ ದಾರಿ ತಪ್ಪಿಸಲಾಗುತ್ತಿದೆ ಎಂದು ಸ್ಪಷ್ಟನೆಯಲ್ಲಿ ತಿಳಿಸಲಾಗಿದೆ.
ಕೋವಿಡ್​ ಸಾವಿನ ಸಂಖ್ಯೆ ಹೆಚ್ಚಿದೆ ಹೇಳಲು ಬಳಸಲಾದ ಅಂಶಗಳು ಸಮಂಜಸವಾಗಿಲ್ಲ. ಅಲ್ಲದೆ ಸರ್ಕಾರ ಕೋವಿಡ್​ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಬೇಕಾದ್ದರಿಂದ ನಿಖರ ಮಾಹಿತಿಯನ್ನು ಇಟ್ಟುಕೊಳ್ಳಬೇಕಿದೆ ಮತ್ತು ಇದರ ಮೇಲೆ ಸುಪ್ರೀಂ ಕೋರ್ಟ್ ನಿಗಾ ಕೂಡ ಇರುವುದರಿಂದ ಅಂಕಿ-ಅಂಶದಲ್ಲಿ ತಪ್ಪಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದೆ.
ಒಂದು ವರ್ಷದ ಮಗಳನ್ನೇ ಮಾರಿದ ತಾಯಿ; ಅಮ್ಮನೂ ಸೇರಿ 9 ಮಂದಿಯ ಬಂಧನ

ಪದವಿ ಪರೀಕ್ಷೆ ಒಂದು ತಿಂಗಳು ಮುಂದೂಡಲು ವಿಶ್ವವಿದ್ಯಾಲಯಗಳಿಗೆ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
