ನವದೆಹಲಿ:ಗುರು ತೇಗ್​ ಬಹಾದೂರ್ ಅವರ 400ನೇ ಜಯಂತಿ ಆಚರಣೆಯನ್ನು ಯೋಜನಾಬದ್ಧವಾಗಿ ನೆರವೇರಿಸುವುದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಸರ್ಕಾರ ರಚಿಸಿದೆ. ಈ ಸಮಿತಿಯಲ್ಲಿ 70 ಸದಸ್ಯರಿದ್ದು, ಕಾರ್ಯಕ್ರಮದ ರೂಪುರೇಷೆ, ಆಯೋಜನೆ ಮಾಡುವ ನಿಟ್ಟಿನಲ್ಲಿ ಸಕ್ರಿಯವಾಗಿರಲಿದೆ. ಕಾರ್ಯಕ್ರಮದ ನೀತಿ, ನಿಯಮ, ಯೋಜನೆ, ಉಸ್ತುವಾರಿ, ದಿನಾಂಕ ನಿಗದಿ ಮುಂತಾದ ಕಾರ್ಯಕ್ರಮಗಳೂ ಸೇರಿ ಒಟ್ಟಾರೆ ವ್ಯವಸ್ಥೆಯನ್ನು ನಿರ್ವಹಿಸುವ ದೃಷ್ಟಿಯಿಂದ ಈ ಉನ್ನತ ಸಮಿತಿ ಗಮನಹರಿಸಲಿದೆ. ಈ ಸಮಿತಿಯಲ್ಲಿ ಅನೇಕ ನಾಯಕರಿದ್ದು, ಕಾರ್ಯಕ್ರಮವನ್ನು ಸಂದರ್ಭೋಚಿತವಾಗಿ ಯಶಸ್ವಿಯಾಗಿ ನೆರವೇರಿಸಲು ಸರ್ಕಾರ ಸಜ್ಜಾಗಿದೆ.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್​, ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಷಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್​, ಹರ್ದೀಪ್​ ಸಿಂಗ್ ಪುರಿ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್​, ಹರಿಯಾಣ, ಬಿಹಾರ್​, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಒಡಿಶಾ ಮತ್ತು ರಾಜಸ್ಥಾನಗಳ ಮುಖ್ಯಮಂತ್ರಿಗಳು ಈ ಸಮಿತಿಯ ಸದಸ್ಯರು.
ಇದನ್ನೂ ಓದಿ:ಉಪ ಚುನಾವಣೆ ಮಾತ್ರವಲ್ಲ, ಮುಂದಿನ ಎಲ್ಲ ಚುನಾವಣೆಯಲ್ಲೂ ಗೆಲ್ತೀವಿ, ಮತ್ತೆ ಮೋದಿಯೇ ಪ್ರಧಾನಿ: ಬಿಎಸ್​ವೈ
ಇವರಷ್ಟೇ ಅಲ್ಲ, ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್​, ಅಖಾಲಿ ದಳದ ಪ್ರಕಾಶ್ ಸಿಂಗ್ ಬಾದಲ್​, ಸುಖ್​​ಬೀರ್ ಸಿಂಗ್ ಬಾದಲ್​, ಎಸ್​ಜಿಪಿಸಿ ಪ್ರೆಸಿಡೆಂಟ್​ ಗೋವಿಂಧ್ ಸಿಂಗ್ ಲೊಂಗೊವಾಲ್​, ನಿವೃತ್ತ ಸೇನಾಧಿಕಾರಿಗಳಾದ ಜೆ.ಜೆ.ಸಿಂಗ್​, ಬೀರೇಂದರ್ ಸಿಂಗ್​ ಧನೋವಾ, ಕ್ರೀಡಾ ತಾರೆಗಳಾದ ಮಿಲ್ಖಾ ಸಿಂಗ್​, ಹರ್ಭಜನ್ ಸಿಂಗ್ ಇತರೆ ಸದಸ್ಯರು. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಈ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿದ್ದಾರೆ. (ಏಜೆನ್ಸೀಸ್)
ಬೆದರಿಕೆ ಎದುರಾದ್ರೆ ಹೋರಾಡ್ತೇವೆ, ಒಳಿತಿಗಾಗಿ ಸಮರ ಮಾಡ್ತೇವೆ- ಚೀನಾಕ್ಕೆ ದೋವಲ್ ಕಡಕ್ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
