ಹರಿಯಾಣ:ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ತನ್ನ ಮೊಬೈಲ್ ಫೋನ್‌ನಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಅಶ್ಲೀಲ ವೀಡಿಯೊಗಳನ್ನು ತೋರಿಸಿರುವ ಘಟನೆ ಹರಿಯಾಣದ ಪಂಚಕುಲದ ರಾಯ್ಪುರ್​​ರಾಣಿ ಪಟ್ಟಣದಲ್ಲಿ ಹತ್ತಿರ ನಡೆದಿದೆ.
ಆರೋಪಿಯನ್ನು ಬಂತ್​ ಸಿಂಗ್​ ಎಂದು ಗುರುತಿಸಲಾಗಿದ್ದು, ರಾಯ್ಪುರ್​​ರಾಣಿ ಪಟ್ಟಣದ ಬಳಿ ಇರುವ ಶಾಲೆಯಲ್ಲಿ ಪಂಜಾಬಿ ಭಾಷೆ ಕಲಿಸುವ ಶಿಕ್ಷಕನಾಗಿದ್ದಾನೆ. ಈತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚಾಕೊಲೇಟ್‌ಗಳನ್ನು ನೀಡಿದ ನಂತರ ತನ್ನ ಫೋನ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು ತೋರಿಸುತ್ತಿದ್ದ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿ:ಶವದ ಎದೆಯ ಮೇಲೆ ಕುಳಿತು ಪೂಜೆ ಮಾಡಿದ ಅಘೋರಿ!
ಘಟನೆಯ ಬಗ್ಗೆ ಪಾಲಕರಿಗೆ ತಿಳಿದ ಕೂಡಲೇ, ಶಾಲೆಯ ಮುಂದೆ ಧರಣಿ ನಡೆಸಿದ್ದರು. ಈ ನಡುವೆ ಇದನ್ನು ಮಾತುಕತೆ ಮೂಲಕ ಬಗೆಹರಿಸಿ ಮುಚ್ಚಿ ಹಾಕಲು ಯತ್ನಿಸಲಾಗಿತ್ತು. ಕೊನೆಗೆ ಆರೋಪಿಯ ವಿರುದ್ಧ ಪಾಲಕರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಈ ವಿಷಯ ತಿಳಿದ ಕೂಡಲೇ ಆರೋಪಿ ಪರಾರಿಯಾಗಿದ್ದಾನೆ.
ಪೋಕ್ಸೊ ಕಾಯ್ದೆಯಡಿ ಶಾಲೆಯ ಶಿಕ್ಷಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಜಿಲ್ಲಾ ಶಿಕ್ಷಣ ಕಚೇರಿಯೂ ಘಟನೆಯ ಕುರಿತು ಪ್ರತ್ಯೇಕ ತನಿಖೆಗೆ ಆದೇಶಿಸಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
