ವಿಜಯವಾಡ (ಆಂಧ್ರ ಪ್ರದೇಶ):ಕರೊನಾ ವೈರಸ್‌ ತಡೆಗೆ ರಾಜ್ಯದ ಜನತೆಗೆ ಸರ್ಕಾರದ ವತಿಯಿಂದಲೇ ಮಾಸ್ಕ್‌ ವಿತರಿಸುವ ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ 16 ಕೋಟಿ ಮಾಸ್ಕ್‌ ಖರೀದಿಸಲು ತೀರ್ಮಾನಿಸಿದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಕರೊನಾ ವೈರಸ್‌ ಪರಿಶೀಲನೆ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಮಾಸ್ಕ್‌ ಕುರಿತು ವಿವರಣೆ ನೀಡಿರುವ ಮುಖ್ಯಮಂತ್ರಿ, ‘ರಾಜ್ಯದ ಜನಸಂಖ್ಯೆ 5.3 ಕೋಟಿ. ಪ್ರತಿ ವ್ಯಕ್ತಿಗೆ ಮೂರು ಮಾಸ್ಕ್‌ನಂತೆ 16 ಕೋಟಿ ಮಾಸ್ಕ್‌ ವಿತರಿಸಲು ಸರ್ಕಾರ ತೀರ್ಮಾನಿಸಿದೆ’ ಎಂದಿದ್ದಾರೆ.
ಆಶಾ ಕಾರ್ಯಕರ್ತೆಯರು ಮನೆಮನೆಗೆ ಹೋಗಿ ಮೂರನೆಯ ರೌಂಡ್‌ ನಡೆಸಿದ ಪರಿಶೀಲನೆಯ ನಂತರ 32,349 ಮಂದಿಗೆ ಸ್ಕ್ರೀನಿಂಗ್‌ ನಡೆಸಲಾಗಿತ್ತು. ಆ ಪೈಕಿ 9,107 ಮಂದಿಗೆ ಕರೊನಾ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇವರನ್ನು ಪರೀಕ್ಷೆಗೆ ಒಳಪಡಿಸುವಂತೆ ಈಗ ಸೂಚಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ಇಲ್ಲಿಯವರೆಗೆ 409 ಕರೊನಾ ಸೋಂಕು ಪ್ರಕರಣ ವರದಿಯಾಗಿದೆ. ಏಳು ಮಂದಿ ಮೃತಪಟ್ಟಿದ್ದು, 11 ಮಂದಿ ಗುಣಮುಖರಾಗಿದ್ದಾರೆ. ಸೋಂಕು ಪೀಡಿತರ ಪೈಕಿ 199 ಮಂದಿ ದೆಹಲಿಯಲ್ಲಿ ತಬ್ಲಿಘಿ ಜಮಾತ್ ನಲ್ಲಿ ಭಾಗಿಯಾದವರು ಹಾಗೂ 161 ಮಂದಿ ಅವರ ಸಂಪರ್ಕಕ್ಕೆ ಬಂದವರು ಎಂದು ಮಾಹಿತಿ ನೀಡಲಾಗಿದೆ. (ಏಜೆನ್ಸೀಸ್)
ಮೃತ್ಯುಕೂಪ ಅಮೆರಿಕ: ಕರೊನಾ ನಿಯಂತ್ರಣಕ್ಕೆ ಟ್ರಂಪ್ ಆಡಳಿತ ಹರಸಾಹಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
