ನವದೆಹಲಿ:ಚೀನಾದಿಂದ ದೇಣಿಗೆ ಸ್ವೀಕರಿಸಿದ್ದ ಕಾರಣಕ್ಕೆ ಭಾರಿ ಚರ್ಚೆಗೆ ಕಾರಣವಾಗಿದ್ದ ರಾಜೀವ್ ಗಾಂಧಿ ಪ್ರತಿಷ್ಠಾನ ಕುರಿತು ಮತ್ತಷ್ಟು ಆರೋಪಗಳು ಕೇಳಿಬಂದಿವೆ. ಗಾಂಧಿ ಕುಟುಂಬ ಹಾಗೂ ಅದರ ನಿಯಂತ್ರಣದಲ್ಲಿರುವ ಟ್ರಸ್ಟ್ ಗಳಿಗೆ ಅನುಕೂಲ ಕಲ್ಪಿಸಲು ಹಿಂದಿನ ಕಾಂಗ್ರೆಸ್ ಸರ್ಕಾರ ಭೂ ಮಂಜೂರಾತಿಯಲ್ಲಿ ಬದಲಾವಣೆ ಮಾಡಿತ್ತು ಎಂಬುದು ಈಗ ಬಯಲಾಗಿದೆ.
1975ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಕಚೇರಿ ನಿರ್ವಿುಸಲು ದೆಹಲಿಯ ಲ್ಯೂಟಿಯನ್ಸ್ ಪ್ರದೇಶದಲ್ಲಿ ಎರಡು ಎಕರೆ ಭೂಮಿ ಮಂಜೂರು ಮಾಡಲಾಗಿತ್ತು. ಆದರೆ ನಿಯಮ ಉಲ್ಲಂಘನೆ ಮಾಡಿ ಈ ಜಾಗವನ್ನು ಗಾಂಧಿ ಕುಟುಂಬ ಹಾಗೂ ಅದರ ನಿಯಂತ್ರಣದ ಟ್ರಸ್ಟ್​ಗಳಿಗೆ ಉಚಿತವಾಗಿ ಭೋಗ್ಯದ ಮೇಲೆ ನೀಡಲಾಯಿತು. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಈ ಜಾಗವನ್ನು ಮೊದಲು ಗಾಂಧಿ ಭವನ ನಿರ್ವಣಕ್ಕಾಗಿ ನೀಡಲಾಗಿತ್ತು. ಕೊನೆಗೆ ಇದನ್ನು ಸೋನಿಯಾ ಗಾಂಧಿ ನೇತೃತ್ವದ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಉಚಿತವಾಗಿ ಕೊಡಲಾಯಿತು.
ಹಲವು ಬಾರಿ ನಿಯಮ ಉಲ್ಲಂಘನೆ:1976ರ ಡಿಸೆಂಬರ್​ನಲ್ಲಿ ಗಾಂಧಿ ಭವನ ಟ್ರಸ್ಟ್​ನ್ನು ಜವಾಹರ ಭವನ ಟ್ರಸ್ಟ್ ಎಂದು ಮರುನಾಮಕರಣ ಮಾಡಲಾಯಿತು. ಎರಡು ಎಕರೆ ಭೂಮಿಯನ್ನು ಈ ಟ್ರಸ್ಟ್​ಗೆ ಹಸ್ತಾಂತರ ಮಾಡಲಾಯಿತು. 1988ರಲ್ಲಿ ರಾಜೀವ್ ಗಾಂಧಿ ಆಡಳಿತ ಅವಧಿಯಲ್ಲಿ ನಿಯಮವನ್ನು ಮತ್ತೆ ಬದಲಾವಣೆ ಮಾಡಿ, ಜವಾಹರಲಾಲ್ ನೆಹರು ಟ್ರಸ್ಟ್ ಕಚೇರಿ ನಿರ್ವಣಕ್ಕಾಗಿ ನೀಡಲಾಯಿತು. ಈ ಟ್ರಸ್ಟ್​ನ ನೇತೃತ್ವವನ್ನು ಗಾಂಧಿ ಕುಟುಂಬ ನೋಡಿಕೊಳ್ಳುತ್ತಿತ್ತು. 1995ರಲ್ಲಿ ಪಿ.ವಿ ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಈ ಸ್ಥಳವನ್ನು ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಉಚಿತವಾಗಿ ಗುತ್ತಿಗೆಗೆ ನೀಡಲಾಯಿತು. 2014ರಲ್ಲಿ ಯುಪಿಎ ಸರ್ಕಾರದ ಕೊನೆಯ ಅವಧಿಯಲ್ಲಿ ಈ 2 ಎಕರೆ ಭೂಮಿಯನ್ನು ಬಾಡಿಗೆಗೆ ನೀಡುವ ಅಧಿಕಾರವನ್ನು ರಾಜೀವ್ ಗಾಂಧಿ ಟ್ರಸ್ಟ್​ಗೆ ನೀಡಲಾಯಿತು. ಬಾಡಿಗೆ ಪಡೆದ 4 ಸಂಸ್ಥೆಗಳೂ ಗಾಂಧಿ ಕುಟುಂಬದ ಜತೆ ನಂಟು ಹೊಂದಿದ್ದವು ಎಂದು ಮಾಧ್ಯಮ ವರದಿಗಳು ಹೇಳಿವೆ.
ಆರೋಪಿಗಳಿಗೆ ಆಶ್ರಯ: ಕಾಂಗ್ರೆಸ್​ನ ಅಂಗ ಸಂಸ್ಥೆ ಸೇವಾದಳಕ್ಕೂ ಈ ಸ್ಥಳದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಈ ಸ್ಥಳದಲ್ಲಿ ಕನ್ನಯ್ಯ ಕುಮಾರ್, ಉಮರ್ ಖಾಲಿದ್ ಮತ್ತಿತರ ದೇಶದ್ರೋಹದ ಆರೋಪಕ್ಕೆ ಗುರಿಯಾದವರಿಗೆ ಆಶ್ರಯ ನೀಡಲಾಗಿತ್ತು. ಸಿಮಿ ಮಾಜಿ ಉಗ್ರ ಇಲಿಯಾಸ್ ಕೂಡ ಈ ಸ್ಥಳದಲ್ಲಿ ಕೆಲ ದಿನ ಇದ್ದ ಎಂದು ಸುದ್ದಿವಾಹಿನಿ ಬಹಿರಂಗ ಮಾಡಿದೆ.
ಚೀನಾ ದೇಣಿಗೆ ವಿವಾದ
ಸೋನಿಯಾ ಗಾಂಧಿ ನೇತೃತ್ವದ ರಾಜೀವ್ ಗಾಂಧಿ ಪ್ರತಿಷ್ಠಾನ 2005ರಿಂದ 2009ರ ಅವಧಿಯಲ್ಲಿ ಚೀನಾ ಸರ್ಕಾರದಿಂದ ಮೂರು ಬಾರಿ ಹಣ ಪಡೆದಿತ್ತು ಎಂಬ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಬೆನ್ನಲ್ಲೇ ಭೂಮಿ ನಿಯಮ ಬದಲಾವಣೆ ವಿಚಾರವೂ ಬೆಳಕಿಗೆ ಬಂದಿದ್ದು ಕಾಂಗ್ರೆಸ್ ಮತ್ತಷ್ಟು ಮುಜುಗರ ಅನುಭವಿಸುವಂತಾಗಿದೆ.
ಗಣಿತದಲ್ಲಿ ನೂರಕ್ಕೆ ನೂರು, ಉಳಿದ ವಿಷಯದಲ್ಲೂ ಉತ್ತಮ ಅಂಕ: ಆದ್ರೆ ಸಂಭ್ರಮಿಸಲು ವಿದ್ಯಾರ್ಥಿನಿಯೇ ಇಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
