ಕರೊನಾ ಸೋಂಕಿನ ಸಂದರ್ಭದಲ್ಲಿ ‘ಆತ್ಮನಿರ್ಭರ ಭಾರತದ ಅಭಿಯಾನ’ಕ್ಕೆ ಅಗತ್ಯವಾದ -ಠಿ; 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಕುರಿತು ನಾಲ್ಕನೇ ಚರಣದಲ್ಲಿ 8 ಕ್ಷೇತ್ರಗಳಿಗೆ ಸಂಬಂಧಿಸಿದಂತೆ 12 ಉಪಕ್ರಮಗಳ ವಿವರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸುದ್ದಿಗೋಷ್ಠಿಯಲ್ಲಿ ನೀಡಿದರು. ಕಲ್ಲಿದ್ದಲು ಕ್ಷೇತ್ರದಲ್ಲಿ ಸರ್ಕಾರ ನಿಯಂತ್ರಣ ತಗ್ಗಿಸಿ, ವಾಣಿಜ್ಯ ಗಣಿಗಾರಿಕೆಗೆ ಹೆಚ್ಚಿನ ಅವಕಾಶ, ಖನಿಜ ವಲಯದಲ್ಲೂ ಹೆಚ್ಚು ನಿಕ್ಷೇಪಗಳು ಗಣಿಗೆ ಮುಕ್ತ, ರಕ್ಷಣಾ ಉತ್ಪಾದನೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ ಹೆಚ್ಚಳ, ವೈಮಾನಿಕ ಕ್ಷೇತ್ರದಲ್ಲಿ 3 ಉಪಕ್ರಮಗಳು, ಅಣುಶಕ್ತಿ ಕ್ಷೇತ್ರದಲ್ಲಿ 2 ತಂತ್ರಜ್ಞಾನ ನೆರವು, ಕೇಂದ್ರಾಡಳಿತ ಪ್ರದೇಶದಲ್ಲಿ ಡಿಸ್ಕಾಂಗಳ ಖಾಸಗೀಕರಣ ಹಾಗೂ ಸಾಮಾಜಿಕ ಮೂಲ ಸೌಕರ್ಯ ಕ್ಷೇತ್ರದಲ್ಲಿ ಸರ್ಕಾರದ ಅನುದಾನ ಹೆಚ್ಚಳ ಕುರಿತಂತೆ ಸಚಿವೆ ಮಾಹಿತಿ ನೀಡಿದರು.
ಕಲ್ಲಿದ್ದಲು ನಿಯಂತ್ರಣಮುಕ್ತ
ಕಲ್ಲಿದ್ದಲು ಗಣಿಗಾರಿಕೆಯನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ ಸ್ಪರ್ಧಾತ್ಮಕತೆ, ಪಾರದರ್ಶಕತೆ ಮತ್ತು ಖಾಸಗಿ ಪಾಲುದಾರಿಕೆ ಹೆಚ್ಚಿಸಲು ಗಣಿ ನೀತಿಯಲ್ಲಿ ಸುಧಾರಣೆ. ಆದಾಯ ಹಂಚಿಕೆಯ ಹೊಸ ವಿಧಾನ. ಕಲ್ಲಿದ್ದಲು ಬಳಸುವಂತಹವರು ಮಾತ್ರ ಗಣಿಕಾರಿಕೆ ನಡೆಸಲು ಇದ್ದ ಅವಕಾಶವನ್ನು ಈಗ ಮುಕ್ತಗೊಳಿಸಲಾಗಿದೆ. ಯಾರು ಬೇಕಾದರೂ ಟೆಂಡರ್​ನಲ್ಲಿ ಭಾಗವಹಿಸಿ ಮುಕ್ತ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ಮಾರಾಟ ಮಾಡಬಹುದಾಗಿದೆ. ಪರಿಷ್ಕೃತ ಗಣಿ ನೀತಿಯಡಿ 50 ನಿಕ್ಷೇಪಗಳನ್ನು ಶೀಘ್ರವೇ ಮಂಜೂರು ಮಾಡಲು ಸರ್ಕಾರ ಸಿದ್ಧವಿದೆ.
ವಾಣಿಜ್ಯಾತ್ಮಕ ಗಣಿಗಾರಿಕೆಗೂ ಅವಕಾಶ:ಭಾಗಶಃ ಬಳಕೆಯಾದ ನಿಕ್ಷೇಪಗಳನ್ನು ಕಲ್ಲಿದ್ದಲು ಉತ್ಖನನ ಕಂ ಉತ್ಪಾದನೆ ಕಾರ್ಯಕ್ರಮದಡಿ ಹರಾಜು. (ಹಿಂದೆ ಖಾಲಿಯಾದ ನಿಕ್ಷೇಪಗಳನ್ನು ಮಾತ್ರ ಹರಾಜು ಮಾಡಲಾಗುತ್ತಿತ್ತು)
ಪರಿಣಾಮ:ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವ ಮೂಲಕ 2023-24ರ ಹೊತ್ತಿಗೆ 1 ಲಕ್ಷ ಕೋಟಿ ಟನ್ ಕಲ್ಲಿದ್ದಲು ಉತ್ಪಾದನೆಯ ಗುರಿ. ಕಲ್ಲಿದ್ದಲನ್ನು ಅನಿಲವಾಗಿ ಪರಿವರ್ತಿಸುವುದರಿಂದ ಪರಿಸರ ಮಾಲಿನ್ಯ ತಗ್ಗುತ್ತದೆ.
500 ಖನಿಜ ನಿಕ್ಷೇಪ
ಖನಿಜ ಗಣಿಗಾರಿಕೆಯಲ್ಲಿ ಆಧುನಿಕತೆಗೆ ಮತ್ತು ಅವರಿತ ಉತ್ಖನನಕ್ಕೆ ಒತ್ತು. ಸ್ವಂತ ಬಳಕೆಗಾಗಿ ಖನಿಜ ಗಣಿಗಾರಿಕೆ ಮತ್ತು ವಾಣಿಜ್ಯ ಉದ್ದೇಶದ ಖನಿಜ ಗಣಿಕಾರಿಕೆ ಇದ್ದ ನಿರ್ಬಂಧ ಸಡಿಲಿಸಿ ಗಣಿಗುತ್ತಿಗೆಯನ್ನು ವರ್ಗಾಯಿಸಲು ಮತ್ತು ಹೆಚ್ಚುವರಿ ಖನಿಜವನ್ನು ಮಾರಾಟ ಮಾಡಲು ಅವಕಾಶ. ಈ ಕುರಿತು ಗಣಿಗಳ ಸೂಚಿಯನ್ನು ಗಣಿ ಸಚಿವಾಲಯ ಪ್ರಕಟಿಸಲಿದೆ.
ಪರಿಣಾಮ:ಖನಿಜ ಗಣಿಗಾರಿಕೆಯಲ್ಲಿ ಸುಸ್ಥಿರ ಪ್ರಗತಿ ಮತ್ತು ಅಪಾರ ಉದ್ಯೋಗಾವಕಾಶ.
ಕೇಂದ್ರಾಡಳಿತ ಪ್ರದೇಶದಲ್ಲಿ ಡಿಸ್ಕಾಂ ಖಾಸಗಿಗೆ
ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯುತ್ ಉತ್ಪಾದನೆ, ನಿರ್ವಹಣೆ ಮತ್ತು ವಿತರಣೆಯಲ್ಲಿ ದಕ್ಷತೆತರುವ ನಿಟ್ಟಿನಲ್ಲಿ ಡಿಸ್ಕಾಂಗಳನ್ನು ಶೀಘ್ರದಲ್ಲೆ ಖಾಸಗಿಗೆ ವಹಿಸಲಾಗುತ್ತದೆ.
ಪರಿಣಾಮ:ಗ್ರಾಹಕರಿಗೆ ಸಮರ್ಪಕ ಸೇವೆ, ವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚಳ ಆಗಲಿದೆ. ಡಿಸ್ಕಾಂಗಳಿಗೆ ಆಗುವ ನಷ್ಟವನ್ನು ಗ್ರಾಹಕರಿಗೆ ವರ್ಗಾವಣೆ ಆಗದು. ಲೋಡ್​ಶೆಡ್ಡಿಂಗ್ ಮಾಡಿದರೆ ಡಿಸ್ಕಾಂಗಳಿಗೆ ದಂಡ.
ಬಾಹ್ಯಾಕಾಶದ ಸೌಕರ್ಯ ಖಾಸಗಿಗೂ ವಿಸ್ತರಣೆ
ಬಾಹ್ಯಾಕಾಶ ಸೌಕರ್ಯಗಳನ್ನು ಇಸ್ರೊ ಮೂಲಕ ಖಾಸಗಿಗೆ ವಿಸ್ತರಿಸಲು ಉತ್ತೇಜಕ ಕ್ರಮ. ಉಪಗ್ರಹ ನಿರ್ವಣ, ಉಡಾವಣೆ, ಬಾಹ್ಯಾಕಾಶದ ಸೇವೆ ಇನ್ನಿತರ ಕ್ಷೇತ್ರಗಳಲ್ಲಿ ಖಾಸಗಿ ಭಾಗವಹಿಸುವಿಕೆ. ಗ್ರಹ ಪರಿಶೋಧನೆ, ಗಗನಯಾನದಲ್ಲೂ ಖಾಸಗಿಗೆ ಅವಕಾಶ. ಪ್ರಾದೇಶಿಕ ಡೇಟಾ ನೀತಿಯಲ್ಲಿ ಪರಿಷ್ಕರಣೆ, ಇದರಿಂದ ತಂತ್ರಜ್ಞಾನ ಸಂಸ್ಥೆಗಳಿಗೆ ಕುಗ್ರಾಮ/ಸೂಕ್ಷ್ಮಸ್ಥಳದ ಮಾಹಿತಿ ಕೆಲವು ನಿಬಂಧನೆ ಮೇರೆಗೆ ಲಭ್ಯ.
ಪರಿಣಾಮ:ಬಾಹ್ಯಾಕಾಶದ ಖಾಸಗಿ ಕಂಪನಿಗಳಿಗೆ ಅನುಕೂಲ.
6 ವಿಮಾನ ನಿಲ್ದಾಣದ ನಿರ್ವಹಣೆ ಖಾಸಗಿಗೆ
ಆರು ವಿಮಾನ ನಿಲ್ದಾಣಗಳ ನಿರ್ವಹಣೆ ಯನ್ನು ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಖಾಸಗಿಗೆ ವಹಿಸಲಾಗುತ್ತದೆ. ಶೀಘ್ರದಲ್ಲೇ 3 ಏರ್​ಪೋರ್ಟ್ ಗಳ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಇದರಿಂದ ಮೊದಲ ಹಂತದಲ್ಲಿ 1000 ಕೋಟಿ ರೂ. ಆದಾಯ ದೊರೆಯಲಿದೆ.
ಮೊದಲ ಮತ್ತು ಎರಡನೇ ಹಂತದಲ್ಲಿ ಖಾಸಗಿಗೆ ನೀಡಲಾಗಿರುವ 12 ವಿಮಾನ ನಿಲ್ದಾಣಗಳಿಂದ  13 ಸಾವಿರ ಕೋಟಿ ರೂ.ಆದಾಯ ನಿರೀಕ್ಷಿಸಲಾಗಿದೆ.
ವಾಯು ಮಾರ್ಗ ಬಳಕೆ ಹೆಚ್ಚಳ:ದೇಶದ ವಾಯು ಮಾರ್ಗದಲ್ಲಿ ಹಾಲಿ ಶೇ. 60ರಷ್ಟು ಬಳಕೆಯಾಗುತ್ತಿದೆ. ಇದರಿಂದ ಹಲವು ಮಾರ್ಗ ಪಯಣ ದೀರ್ಘವಾಗಿದೆ. ವಾಯು ಪ್ರದೇಶ ಬಳಕೆಯನ್ನು ಹೆಚ್ಚಿಸುವುದರಿಂದ ಯಾನದ ಅವಧಿ, ಇಂಧನದ ಬಳಕೆ ಮತ್ತು ಪೈಲಟ್​ಗಳಿಗೆ ಹಾರಾಟದ ಸಮಯ ಉಳಿಯುತ್ತದೆ. ಈ ಯೋಜನೆ ಎರಡು ತಿಂಗಳಲ್ಲಿ ಜಾರಿಗೆ ಬರಲಿದೆ.
ಎಂಆರ್​ಒ ಜಾಗತಿಕ ಹಬ್
ವಿಮಾನಗಳ ದುರಸ್ತಿ, ನಿರ್ವಹಣೆ ಓವರ್ ಆಯಿಲಿಂಗ್ (ಎಂಆರ್​ಒ) ವ್ಯವಸ್ಥೆಯನ್ನು ಭಾರತದಲ್ಲೇ ತೆರೆಯಲು ಉತ್ತೇಜನ ನೀಡಲಾಗುತ್ತದೆ. ಈ ನಿಟ್ಟನಲ್ಲಿ ಶೇ. 18ರಷ್ಟಿದ್ದ ಜಿಎಸ್​ಟಿಯನ್ನು ಶೇ. 5ಕ್ಕೆ ಇಳಿಸಲಾಗಿದೆ. ಇದರಿಂದ ಭಾರತ ಎಂಆರ್​ಒದಲ್ಲಿ ಜಾಗತಿಕ ತಾಣವಾಗಲಿದೆ.
ಪರಿಣಾಮ:ವಾಯು ಮಾರ್ಗ ಬಳಕೆ ಹೆಚ್ಚಳದಿಂದ ಸುಮಾರು   1 ಸಾವಿರ ಕೋಟಿ ರೂ. ಇಂಧನ ವೆಚ್ಚ ಮಿಗತೆ.
ಸಾಮಾಜಿಕ ಮೂಲಸೌಕರ್ಯಕ್ಕೆ ಒತ್ತು
ಸಾಮಾಜಿಕ ಮೂಲಸೌಕರ್ಯ ಕಲ್ಪಿಸುವಂತಹ ಯೋಜನೆಯಡಿ ಸರ್ಕಾರ ನೀಡುತ್ತಿದ್ದ ಕಾರ್ಯಸಾಧ್ಯತೆಯ ಅಂತರ್ ನಿಧಿ ಮಿತಿ ಶೇ. 20ರಿಂದ 30ಕ್ಕೆ ಹೆಚ್ಚಳ. ಈ ಬಾಬ್ತಿಗೆ  8,100 ಕೋಟಿ ರೂ.
ಪರಿಣಾಮ:ಸಾರ್ವಜನಿಕ ಆಸ್ಪತ್ರೆ, ಶಾಲೆ ಇನ್ನಿತರ ನಿರ್ವಣಗಳಿಗೆ ಅನುಕೂಲ.
ತರಕಾರಿ ತಾಜಾತನ ಕಾಪಿಡಲು ಅಣುಶಕ್ತಿ ಬಳಕೆ
ಅಲ್ಪಕಾಲದಲ್ಲಿ ಕೊಳೆತು ಹಾಳಾಗುವ ಬೆಳೆಗಳ ಜೀವಿತಾವಧಿಯನ್ನು ಹಿಗ್ಗಿಸಲು ಅಣುಶಕ್ತಿ ತಂತ್ರಜ್ಞಾನ ಬಳಕೆ ಮಾಡಲಾಗುವುದು. ಈ ರೀತಿ ಸಂಶೋಧನಾ ರಿಯಾಕ್ಟರ್​ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು. ವೈದ್ಯಕೀಯು ಐಸೋಟೋಪ್ಸ್​ಗಳನ್ನೂ ಉತ್ಪಾದಿಸಿ ಕಡಿಮೆ ವೆಚ್ಚದಲ್ಲಿ ಕ್ಯಾನ್ಸರ್​ಗೆ ಚಿಕಿತ್ಸೆ ನೀಡಬಹುದು. ಈ ನಿಟ್ಟಿನಲ್ಲಿ ಸ್ಟಾರ್ಟಪ್​ಗಳಿಗೂ ಅವಕಾಶ ಇದೆ.
ಪರಿಣಾಮ:ಶೀಘ್ರ ಹಾಳಾಗುವ ವಸ್ತುಗಳಲ್ಲಿ ತರಕಾರಿ, ಹಣ್ಣು, ಈರುಳ್ಳಿಯನ್ನು ಹೆಚ್ಚು ಕಾಲ ಕಾಪಿಡುವಂತಹ ತಂತ್ರಜ್ಞಾನ ಅಭಿವೃದ್ಧಿಯಾದರೆ ರೈತರಿಗೆ ಅನುಕೂಲ.
ಸೇನೆಗೆ ಶಸ್ತ್ರಾಸ್ತ್ರ ಸಾಧನಾ- ಸಲಕರಣ ಗಳನ್ನು ಪೂರೈಸುವ ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್​ಎ) ನಿಗಮೀಕರಣ ಗೊಳಿಸಲಾಗುವುದು. ಆದರೆ, ಇದು ಖಾಸಗಿಕರಣ ಅಲ್ಲ. ಇದರಿಂದ ಒಎಫ್​ಎನ ಸ್ವಾಯತ್ತತೆ ಹೆಚ್ಚಲಿದೆ. ದಕ್ಷತೆ, ಪಾರದರ್ಶಕತೆ ವೃದ್ಧಿ.
ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ಪಾಲುದಾರಿಕೆ ಹೆಚ್ಚಳ
ಪರಿಣಾಮ:ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವುದರಿಂದ ಆಮದು ವೆಚ್ಚ ಗಣನೀಯವಾಗಿ ತಗ್ಗಲಿದೆ.
ಮೇಕ್ ಇನ್ ಇಂಡಿಯಾ ಭಾರತದ ಬಲವನ್ನು ಹೆಚ್ಚಿಸಿದೆ. ಇದರಿಂದ ಜಾಗತಿಕ ಸವಾಲನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಭಾರತಕ್ಕೆ ಪ್ರಾಪ್ತವಾಗಿದೆ. ಈಗ ಈ ಕಾರ್ಯಕ್ರಮವನ್ನು ಸ್ವಾವಲಂಬಿ ಭಾರತದ ಅಭಿಯಾನಕ್ಕೆ ಬಳಸಿಕೊಳ್ಳಲಾಗುತ್ತಿದೆ
| ನಿರ್ಮಲಾ ಸೀತಾರಾಮನ್ಕೇಂದ್ರ ಹಣಕಾಸು ಸಚಿವೆ
ಲಾಕ್​ಡೌನ್​ ತೆರವಾದ ಬಳಿಕ ಸಾರ್ವಜನಿಕ ಸಾರಿಗೆ ಬಳಕೆ ಟ್ರೆಂಡ್​ ಹೇಗಿರುತ್ತೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + five =
Remember me
