ವೆಲ್ಲೂರು:ಅಪಘಾತದಲ್ಲಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ತಲೆಯಲ್ಲಿ ಕಬ್ಬಿಣದ ನಟ್​ವೊಂದನ್ನು ಹಾಗೆಯೇ ಬಿಟ್ಟು ಹೊಲಿಗೆ ಹಾಕಿರುವ ಆಘಾತಕಾರಿ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ.
ಇದನ್ನೂ ಓದಿ:ಈ ದೇಶದಲ್ಲಿ ಅಧ್ಯಕ್ಷನ ಫೋಟೊ ಮೇಲೆ ಮೀಸೆ ಬಿಡಿಸಿದ್ದಕ್ಕೆ 16ರ ಪೋರನ ಬಂಧನ!
ಮಿನ್ನೂರು ನಿವಾಸಿ ಕಾರ್ತಿಕೇಯನ್(46) ಸರ್ಕಾರಿ ಬಸ್​ ಚಾಲಕನಾಗಿದ್ದು, ಸೋಮವಾರ ವೆಲ್ಲೂರಿಗೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಆತನ ತಲೆಗೆ ಗಂಭೀರ ಗಾಯವಾಗಿತ್ತು. ಗಾಯಗೊಂಡ ಚಾಲಕನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ನಂತರ ಹೆಚ್ಚಿನ ಚಿಕಿತ್ಸೆಗೆಂದು ಕಾರ್ತಿಕೇಯನ್​ ಖಾಸಗಿ ಕ್ಲಿನಿಕ್‌ಗೆ ತೆರಳಿದ್ದು. ಅಲ್ಲಿ ತಲೆಯ ಸ್ಕ್ಯಾನಿಂಗ್​ ಮಾಡಿಸಿದ್ದರು. ಈ ವೇಳೆ ತಲೆಬುರುಡೆಯಲ್ಲಿ ಕಬ್ಬಿಣದ ನಟ್​​ ಇರುವುದು ಬೆಳಕಿಗೆ ಬಂದಿದೆ. ಕಾರ್ತಿಕೇಯನ್ ಸಂಬಂಧಿಕರು ತಕ್ಷಣವೇ ಆತನನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಸಂಬಂಧಿಸಿದ ವೈದ್ಯಕೀಯ ಸಿಬ್ಬಂದಿಗೆ ಈ ಘಟನೆ ಕುರಿತಾಗಿ ವಿವರಣೆ ಕೇಳಿದ್ದರು. ತಕ್ಷಣವೇ ಆಸ್ಪತ್ರೆಯ ಡೀನ್ ಈ ನಿರ್ಲಕ್ಷ್ಯದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.(ಏಜೆನ್ಸೀಸ್​​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
