ನವದೆಹಲಿ:ಭಾರತ ಖಂಢಗ್ರಾಸ ಗ್ರಹಣದ ಗುಂಗಿಗೆ ಜಾರಿರುವಾಗಲೇ ಕೋವಿಡ್​ 19 ಸೋಂಕಿನ ಹೆಸರಿನಲ್ಲಿ ಭಾರಿ ಪ್ರಮಾಣದ ಸೈಬರ್ ಅಟ್ಯಾಕ್​ ನಡೆಯಲಿದೆ. ವ್ಯಕ್ತಿಗತವಾಗಿ ಮತ್ತು ವ್ಯಾಪಾರೋದ್ಯಮಗಳೇ ಈ ದಾಳಿಯ ಗುರಿ ಆಗಿರಲಿದೆ. ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿ ಕಳವು ಮಾಡಿ ನಂತರದಲ್ಲಿ ದೋಚುವ ಪ್ರಯತ್ನ ಮಾಡಬಹುದು ಎಂದು ಇಂಡಿಯನ್ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್​ ಟೀಮ್​ (ಸಿಇಆರ್​ಟಿ-ಇನ್​) ಎಚ್ಚರಿಸಿದೆ.
ಭಾರತದ ಸೈಬರ್​ ಸೆಕ್ಯುರಿಟಿ ನೋಡೆಲ್ ಏಜೆನ್ಸಿ ಸಿಇಆರ್​ಟಿ-ಇನ್​. ಸಂಭಾವ್ಯ ಪಿಶಿಂಗ್​ ದಾಳಿಯ ಬಗ್ಗೆ ಎಚ್ಚರ ವಹಿಸುವಂತೆ ಈ ಸಂಸ್ಥೆ ಎಚ್ಚರಿಕೆ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಸರ್ಕಾರಿ ಸಂಸ್ಥೆಗಳು, ಇಲಾಖೆಗಳು, ವಾಣಿಜ್ಯ ಸಂಸ್ಥೆಗಳು ವಿಶೇಷವಾಗಿ ಸರ್ಕಾರಿ ಅನುದಾನವನ್ನು ಹಂಚುವ ವಿಭಾಗಗಳ ಕಂಪ್ಯೂಟರ್​ಗಳ ಮೇಲೆ ಇಂತಹ ದಾಳಿ ಆಗಲಿವೆ. ಈ ದಾಳಿ ನಾಳೆಯಿಂದಲೇ ಶುರುವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ:ಹಸು, ಗಂಗಾ, ಗೀತೆ ಇವುಗಳು ಭಾರತದ ಐಡೆಂಟಿಟಿ
ಸೈಬರ್ ಅಟ್ಯಾಕ್ ನಡೆಸುವುದಕ್ಕೆ ದಾಳಿಕೋರರು “[email protected]” ಈ ರೀತಿಯ ಇ-ಮೇಲ್​ಗಳನ್ನು ಬಳಸುವ ಸಾಧ್ಯತೆ ಇದೆ.ಕೋವಿಡ್ 19 ತಡೆಯ ಚಟುವಟಿಕೆಗೆ ಸಂಬಂಧಿಸಿ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಹಂಚುವ ಸ್ಥಳೀಯಾಡಳಿತದ ಅಧಿಕಾರಿಗಳಿಗೆ ಇಂತಹ ಇ-ಮೇಲ್​ಗಳು ರವಾನೆಯಾಗಬಹುದು. ಅದನ್ನು ತೆರೆದು ಉತ್ತರಿಸಲು ಪ್ರಯತ್ನಿಸಿದರೆ ಕಳ್ಳ ವೆಬ್​ಸೈಟ್​ಗಳು ಓಪನ್ ಆಗಿ ಸಿಸ್ಟಂನಲ್ಲಿ ಮಾಲ್ವೇರ್ ಇನ್​ಸ್ಟಾಲ್ ಆಗಬಹುದು. ಅಲ್ಲದೆ, ಎಲ್ಲ ರೀತಿಯ ಮಾಹಿತಿಗಳನ್ನೂ ದಾಳಿಕೋರರು ಸಂಗ್ರಹಿಸಬಹುದು ಎಂದು ಸಿಇಆರ್​ಟಿ-ಇನ್​ ಜೂನ್ 19ರ ಮಾರ್ಗಸೂಚಿಯಲ್ಲಿ ಎಚ್ಚರಿಕೆ ನೀಡಿದೆ.
ದಾಳಿಕೋರರು 20 ಲಕ್ಷ ನಾಗರಿಕರ ಇ-ಮೇಲ್​ಗೂ ಇಂತಹ ಮೇಲ್​ ಕಳುಹಿಸಬಹುದು. ಸಬ್ಜೆಕ್ಟ್ ಲೈನ್​ನಲ್ಲಿ ಫ್ರೀ ಕೋವಿಡ್ 19 ಟೆಸ್ಟಿಂಗ್ ಫಾರ್ ಆಲ್ ರೆಸಿಡೆಂಟ್ಸ್​ ಆಫ್ ದೆಹಲಿ/ಮುಂಬೈ/ಹೈದರಾಬಾದ್​/ಚೆನ್ನೈ ಇತ್ಯಾದಿ ಇರಬಹುದು. ಈ ರೀತಿಯ ಮೇಲ್ ಬಂದರೆ ಅವುಗಳನ್ನು ತೆರೆಯಬೇಡಿ ಎಂದು ಸಿಇಆರ್​ಟಿ ಇನ್ ಸಾರ್ವಜನಿಕರನ್ನೂ ಎಚ್ಚರಿಸಿದೆ. (ಏಜೆನ್ಸೀಸ್)
VIDEO: ಖಂಡಗ್ರಾಸ ಸೂರ್ಯಗ್ರಹಣ: ಪೊಲೀಸರಿಗೆ ಉದ್ದಿನ ವಡಾ, ಬಡವರಿಗೆ ನೀರು ಕೊಡಿ ಒಳ್ಳೆಯದಾಗತ್ತೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 8 =
Remember me
