ನವದೆಹಲಿ:ಕೇಂದ್ರ ಸಚಿವ ಸಂಪುಟವು ನೂತನ ‘ರಾಷ್ಟ್ರೀಯ ಶಿಕ್ಷಣ ನೀತಿ’ಗೆ ಬುಧವಾರ ಅನುಮೋದನೆ ನೀಡಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಖ್ರಿಯಾಲ್​ ಈ ವಿಷಯ ತಿಳಿಸಿದ್ದಾರೆ.
ವಿದೇಶಿ ವಿಶ್ವ ವಿದ್ಯಾಲಯಗಳ ಕ್ಯಾಂಪಸ್​ ಸ್ಥಾಪನೆಗೆ ಅವಕಾಶ, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಏಕ ನಿಯಂತ್ರಣ ವ್ಯವಸ್ಥೆ, ಪದವಿ ತರಗತಿಗಳಿಗೆ ಬಹುಹಂತದ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ, ಎಂಫಿಲ್​ ರದ್ದು, ದೇಶವ್ಯಾಪಿ ವಿವಿ ಕೋರ್ಸ್​ಗಳ ಪ್ರವೇಶಕ್ಕೆ ಒಂದೇ ಪ್ರವೇಶ ಪರೀಕ್ಷೆ ಮೊದಲಾದವುಗಳು ಶಿಕ್ಷಣ ನೀತಿಯ ಪ್ರಮುಖ ವಿಶೇಷತೆಗಳಾಗಿವೆ
ಇದನ್ನೂ ಓದಿ:ಈ ಬ್ಯಾಂಕ್​ಗೆ ಚೀನಾ ಸಾರಥ್ಯ, ಭಾರತವಿಲ್ಲಿ ಭಾರಿ ಸಾಲಗಾರ…! ಎಲ್ಲಿದೆ ಬ್ಯಾಂಕ್​?ಎಷ್ಟು ಸಾಲ?
ಪದವಿ ಶಿಕ್ಷಣ ಸ್ವರೂಪದಲ್ಲಿ ಬದಲಾವಣೆ:ಮೂರು ವರ್ಷಗಳ ಕೋರ್ಸ್​ ಮುಂದುವರಿಯಲಿದ್ದು, ನಾಲ್ಕು ವರ್ಷಗಳ ಬಹುಶಾಸ್ತ್ರೀಯ ಪದವಿ ಶಿಕ್ಷಣವನ್ನು ಮತ್ತೆ ಜಾರಿಗೊಳಿಸಲಾಗುತ್ತದೆ. ಇದರಲ್ಲಿ ಬಹುಹಂತದ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶವಿರಲಿದೆ. ಮೊದಲ ವರ್ಷದ ಬಳಿಕ ತೊರೆದರೆ ಸರ್ಟಿಫಿಕೇಟ್​ ಸಿಗಲಿದೆ. ಎರಡನೇ ವರ್ಷದಲ್ಲಿ ಡಿಪ್ಲೊಮಾ ಪಡೆಯಲಿದ್ದರೆ, ಮೂರು ವರ್ಷದ ಬಳಿಕ ಪದವಿ ಗಳಿಸಲಿದ್ದಾರೆ.
ನಾಲ್ಕು ವರ್ಷದ ಕೋರ್ಸ್​ನಲ್ಲಿ ಸಂಶೋಧನೆ ಜತೆಗೆ ಪದವಿ ದೊರೆಯಲಿದೆ. ವಿದ್ಯಾರ್ಥಿಯು ಪ್ರಮುಖ ವಿಷಯದಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಳ್ಳಬಹುದು ಎಂದು ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಲಾಗಿದೆ.
ಯುಜಿಸಿ ರದ್ದು:ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳ ನಿಯಂತ್ರಣಕ್ಕೆ ಒಂದೇ ಸಂಸ್ಥೆ ರಚನೆಯಾಗಲಿದೆ. ಯುಜಿಸಿ, ತಾಂತ್ರಿಕ ಶಿಕ್ಷಣ ಮಂಡಳಿ, ಉನ್ನತ ಶಿಕ್ಷಣ ಮಂಡಳಿ ಮೊದಲಾದವುಗಳು ಸ್ಥಾನ ಕಳೆದುಕೊಳ್ಳಲಿವೆ.
ಇದನ್ನೂ ಓದಿ:ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಉತ್ಪ್ರೇಕ್ಷೆ ಬೇಡ; ಆರ್ಥಿಕತೆ ಮತ್ತೆ ಸ್ಥಗಿತಗೊಳಿಸಬೇಡಿ; ತಜ್ಞರು ಹೇಳಿದ್ಯಾರಿಗೆ?
ಇಂಜಿನಿಯರಿಂಗ್​ ಕಾಲೇಜಿನಲ್ಲಿ ಕಲಾ ವಿಷಯಗಳನ್ನು ಕಲಿಯಬಹುದು. ಕಲಾ ಕಾಲೇಜುಗಳಲ್ಲಿ ಇಂಜಿನಿಯರಿಂಗ್​ ಕೂಡ ಬೋಧಿಸಬಹುದು. ಐಐಟಿ ಮೊದಲಾದ ಸಂಸ್ಥೆಗಳಲ್ಲಿ ಮಾನವಿಕ ವಿಷಯಗಳನ್ನೂ ಬೋಧಿಸಲಾಗುತ್ತದೆ. ವಿವಿಗಳಲ್ಲೂ ಬಹುಶಾಸ್ತ್ರೀಯ ಅಧ್ಯಯನಕ್ಕೆ ಅವಕಾಶವಿರಲಿದೆ. ಒಂದೇ ವಿಷಯ ಅಥವಾ ವಿಭಾಗದಲ್ಲಿ ಶಿಕ್ಷಣ ನೀಡುವ ಸಂಸ್ಥೆಗಳನ್ನು ಹಂತಹಂತವಾಗಿ ಬದಲಾಯಿಸಲಾಗುತ್ತದೆ. ಅಂತಿಮ ಸೆಮಿಸ್ಟರ್​ ಅಥವಾ ವಾರ್ಷಿಕ ಪರೀಕ್ಷೆ ಬದಲು ನಿರಂತರ ಮೌಲ್ಯಮಾಪನ ಪದ್ಧತಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಆದ್ಯತೆ ನೀಡಿದೆ.
ಮತ್ತೊಂದು ಆಘಾತಕಾರಿ ಹಂತ ತಲುಪಿದ ಕರೊನಾ; ಭಾರತದ ಮೊದಲ ಪ್ರಕರಣ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + four =
Remember me
