ಲಾಸ್ ಏಂಜಲೀಸ್:ವಿಶ್ವದ ಅತ್ಯಂತ ಪ್ರತಿಷ್ಠಿತ ಸಂಗೀತ ಪ್ರಶಸ್ತಿ ಎಂದೇ ಕರೆಯಲಾಗುವ ಗ್ರ್ಯಾಮಿ ಪುರಸ್ಕಾರ ವೇದಿಕೆಯಲ್ಲಿ ಈ ಬಾರಿ ಭಾರತೀಯ ಸಂಗೀತ ದಿಗ್ಗಜರು ಮಿಂಚಿದ್ದಾರೆ. ಝಾಕಿರ್ ಹುಸೇನ್, ಶಂಕರ್ ಮಹದೇವನ್, ಜಾನ್ ಮೆಕ್​ಲಾಘ್ಲಿನ್, ವಿ. ಸೆಲ್ವಗಣೇಶ್, ಗಣೇಶ್ ರಾಜಗೋಪಾಲನ್ ಅವರಿದ್ದ ‘ಶಕ್ತಿ’ ಬ್ಯಾಂಡ್ ಪ್ರಶಸ್ತಿ ಜಯಿಸಿದೆ. ರಾಕೇಶ್ ಚೌರಾಸಿಯಾ ಅತ್ಯುತ್ತಮ ಸಮಕಾಲೀನ ಸಂಗೀತ ಮತ್ತು ಅತ್ಯುತ್ತಮ ಜಾಗತಿಕ ಸಂಗೀತ ವಿಭಾಗಗಳಲ್ಲಿ ಎರಡು ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದಾರೆ.
ಸಂಗೀತಕ್ಕಾಗಿ ನೀಡಲಾಗುವ ವಿಶ್ವದ ಪ್ರತಿಷ್ಠಿತ ಪ್ರಶಸ್ತಿ ಗ್ರ್ಯಾಮಿ. 66ನೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೋಮವಾರ (ಫೆ. 5) ಲಾಸ್ ಏಂಜಲೀಸ್​ನಲ್ಲಿ ನೆರವೇರಿದ್ದು ಭಾರತದ ‘ಶಕ್ತಿ ಬ್ಯಾಂಡ್’ ಪ್ರಶಸ್ತಿ ಗೆದ್ದು ದಾಖಲೆ ನಿರ್ವಿುಸಿದೆ. ಝಾಕಿರ್ ಹುಸೇನ್, ಶಂಕರ್ ಮಹದೇವನ್, ಜಾನ್ ಮೆಕ್​ಲಾಘ್ಲಿನ್, ವಿ. ಸೆಲ್ವಗಣೇಶ್, ಗಣೇಶ್ ರಾಜಗೋಪಾಲನ್ ಅವರ ‘ಶಕ್ತಿ’ ಬ್ಯಾಂಡ್​ನ ‘ದಿಸ್ ಮೊಮೆಂಟ್’ ಎಂಬ ಆಲ್ಬಂ ಹಾಡಿಗೆ ಅತ್ಯುತ್ತಮ ಗ್ಲೋಬಲ್ ಆಲ್ಬಂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

1973ರಲ್ಲಿ ಈ ಬ್ಯಾಂಡ್ ಶುರುವಾಗಿತ್ತು. ಬಳಿಕ 2020ರಲ್ಲಿ ಪುನಃರೂಪಿತಗೊಂಡಿತು. ಮೂರು ವರ್ಷಗಳ ನಂತರ ಈ ಬ್ಯಾಂಡ್​ನ ಮೊದಲ ಆಲ್ಬಂ ‘ದಿಸ್ ಮೊಮೆಂಟ್’ ಬಿಡುಗಡೆಯಾಗಿದ್ದು, ಇದರಲ್ಲಿ ‘ಶ್ರೀನೀಸ್ ಡ್ರೀಮ್, ‘ಬೆಂಡಿಂಗ್ ದಿ ರೂಲ್ಸ್’, ‘ಕರುಣ’, ‘ಗಿರಿಜಾ ಸುಧಾ’, ‘ಮೋಹನಂ’ ಸೇರಿ ಒಟ್ಟು ಎಂಟು ಹಾಡುಗಳಿವೆ. ಜತೆಗೆ ರಾಕೇಶ್ ಚೌರಾಸಿಯಾ ಅತ್ಯುತ್ತಮ ಸಮಕಾಲೀನ ಸಂಗೀತ ಮತ್ತು ಅತ್ಯುತ್ತಮ ಜಾಗತಿಕ ಸಂಗೀತ ವಿಭಾಗಗಳಲ್ಲಿ ಎರಡು ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದಾರೆ. ಪಾಪ್ ಗಾಯಕಿ ಫೀಬಿ ಬ್ರಿಡ್ಜರ್ಸ್ ನಾಲ್ಕು ಪ್ರಶಸ್ತಿ ಗೆದ್ದು ದಾಖಲೆ ಬರೆದಿದ್ದಾರೆ. ಉಳಿದಂತೆ ಎಸ್​ಝಿಎ, ಬಾಯ್ಜೀನಿಯಸ್, ಕಿಲ್ಲರ್ ಮೈಕ್ ಮೂರು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ನಾಲ್ಕನೇ ಬಾರಿ ‘ಆಲ್ಬಂ ಆಫ್ ದಿ ಇಯರ್’ ಗ್ರಾ್ಯಮಿ ಪ್ರಶಸ್ತಿ ಗೆದ್ದಿರುವ ಟೇಲರ್ ಸ್ವಿಫ್ಟ್ ಅತಿ ಹೆಚ್ಚು ‘ಆಲ್ಬಂ ಆಫ್ ದಿ ಇಯರ್’ ಪ್ರಶಸ್ತಿ ಪಡೆದ ಗಾಯಕಿಯಾಗಿದ್ದಾರೆ.
ರ‍್ಯಾಪರ್ ಕಿಲ್ಲರ್ ಮೈಕ್ ಈ ಬಾರಿ ಮೂರು ಗ್ರಾ್ಯಮಿ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿದ್ದರು. ಆದರೆ, ಪ್ರಶಸ್ತಿ ಪಡೆದ ಕೆಲ ಹೊತ್ತಿನಲ್ಲೇ ಪೊಲೀಸರು ಮೈಕ್​ಅನ್ನು ಬಂಧಿಸಿದ್ದರು. ಮೈಕ್ ಕೈಗಳಿಗೆ ಕೋಳ ಹಾಕಿ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಬಂಧನಕ್ಕೊಳಗಾದ ಕೇವಲ ಐದು ತಾಸಿನಲ್ಲೇ ಮೈಕ್ ಬಿಡುಗಡೆಯಾಗಿದ್ದಾರೆ ಎನ್ನಲಾಗಿದೆ. -ಏಜೆನ್ಸೀಸ್
ಗ್ರ್ಯಾಮಿ ಪ್ರಶಸ್ತಿ ಗೆದ್ದು ಸಾಧನೆ ಮಾಡಿದ ಝಾಕಿರ್ ಹುಸೇನ್, ಶಂಕರ್ ಮಹದೇವನ್, ರಾಕೇಶ್ ಚೌರಾಸಿಯಾ, ಸೆಲ್ವಗಣೇಶ್, ಗಣೇಶ್ ರಾಜಗೋಪಾಲನ್ ಅವರಿಗೆ ಅಭಿನಂದನೆ. ನಿಮ್ಮ ಪ್ರತಿಭೆ ಮತ್ತು ಸಂಗೀತದ ಕುರಿತ ಶ್ರದ್ಧೆ ವಿಶ್ವಾದ್ಯಂತ ಜನರ ಮನ ಗೆದ್ದು ಭಾರತವನ್ನು ಹೆಮ್ಮೆಗೊಳಿಸಿದೆ. ನಿಮ್ಮೆಲ್ಲರ ಪರಿಶ್ರಮಕ್ಕೆ ಸಿಕ್ಕ ಫಲವಿದು. ಮುಂದಿನ ಪೀಳಿಗೆಗೂ ನೀವು ಮಾದರಿಯಾಗಿದ್ದೀರಿ.
– ನರೇಂದ್ರ ಮೋದಿ ಪ್ರಧಾನ ಮಂತ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
