ಪುಣೆ:ವಯಸ್ಸು ಬರೇ ಒಂದು ಸಂಖ್ಯೆ ಎಂದು ನೀವು ಹಲವಾರು ಬಾರಿ ಕೇಳಿರಬಹುದು. ಆ ಮಾತಿಗೆ ತಕ್ಕಂತೆ, 83 ವರ್ಷದ ಮಹಿಳೆಯೊಬ್ಬರು ಪುಣೆಯಲ್ಲಿ ನಡೆದ ಕೇರಂ ಟೂರ್ನಮೆಂಟ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಮಾಹಿತಿಯನ್ನು ಅವರ ಮೊಮ್ಮಗ ತನ್ನ ಟ್ವಿಟರ್‌ ಅಕೌಂಟ್​ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು ಸುದ್ದಿ ಈಗ ವೈರಲ್​ ಆಗಿದೆ.
ತಮ್ಮ ಟ್ವಿಟರ್ ಬಯೋ ಪ್ರಕಾರ ಆಮ್ ಆದ್ಮಿ ಪಕ್ಷದ ವಕೀಲ ಮತ್ತು ವಕ್ತಾರ ಅಕ್ಷಯ್ ಮರಾಠೆ, ಪುಣೆಯ ಆಲ್-ಮಗರಪಟ್ಟಾ ಸಿಟಿ ಕೇರಂ ಪಂದ್ಯಾವಳಿಯಲ್ಲಿ ತನ್ನ 83 ವರ್ಷದ ಅಜ್ಜಿ, ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಸಿಂಗಲ್ಸ್ ವಿಭಾಗದಲ್ಲಿ ಕಂಚು ಗೆದ್ದಿದ್ದಾರೆ ಎಂದು ಹಂಚಿಕೊಂಡಿದ್ದಾರೆ.
ಕಿರಿಯ ವಯಸ್ಸಿನ ಎದುರಾಳಿಗಳನ್ನು ಅಜ್ಜಿ ಸೋಲಿಸಿದ್ದು ಈ ಸಾಧನೆಯನ್ನು ಎಲ್ಲರೂ ಮೆಚ್ಚುತ್ತಿದ್ದಾರೆ. ತನ್ನ ಅಜ್ಜಿ ಯುವತಿಯೊಬ್ಬಳ ವಿರುದ್ಧ ಕೇರಂ ಆಟ ಆಡುತ್ತಿರುವ 21 ಸೆಕೆಂಡ್ ಗಳ ಕ್ಲಿಪ್ ಕೂಡ ಅಕ್ಷಯ್​ ಮರಾಠೆ ಹಾಕಿದ್ದಾರೆ. ನೆಟ್ಟಿಗರು, ಈ ಸಾಧನೆ ಬಗ್ಗೆ ಅಜ್ಜಿಗೆ ಅಭಿನಂದಿಸಿದ್ದರಿಂದ ಅಕ್ಷಯ್​ ಮರಾಠೆ ಪೋಸ್ಟ್​ ಮಾಡಿದ್ದ ಕ್ಲಿಪ್ 10,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.(ಏಜೆನ್ಸೀಸ್​)
Inspired by my 83-year-old Aaji who won Gold in the Doubles and Bronze in the singles in Pune’s All-Magarpatta City carrom tournament against much younger and steadier hands. 👑👌🎯pic.twitter.com/Mh1pPnUa2O
We can take some credit for practicing with her although@abhijeet_dipkeand I got destroyed by Aaji, despite being paired with@PulkitS_😜pic.twitter.com/N6mmb8v5ul
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:10 + nineteen =
Remember me
