ಪುರಿ :ಭಗವಾನ್ ಶ್ರೀ ಜಗನ್ನಾಥನ 144ನೇ ವರ್ಷದ ರಥಯಾತ್ರೆಯು ಒಡಿಶಾದ ಪುರಿಯಲ್ಲಿ ಇಂದು ಆರಂಭವಾಗಿದೆ. ಕಳೆದ ವರ್ಷದಂತೆ ಈ ವರ್ಷವೂ, ಕರೊನಾ ಹಿನ್ನೆಲೆಯಲ್ಲಿ, ಭಕ್ತಾದಿಗಳಿಗೆ ವೀಕ್ಷಣೆ ಅಥವಾ ಭಾಗವಹಿಸುವ ಅವಕಾಶವಿಲ್ಲದೆ ರಥಯಾತ್ರೆ ನಡೆಯುತ್ತಿದೆ.
ಪುರಿಯ 12 ನೇ ಶತಮಾನದ ಶ್ರೀ ಜಗನ್ನಾಥ ದೇವಾಲಯದಿಂದ ಶ್ರೀ ಜಗನ್ನಾಥ ದೇವರು ತಮ್ಮ ಸೋದರರೊಂದಿಗೆ ಎರಡೂವರೆ ಕಿಲೋಮೀಟರ್​ ದೂರದಲ್ಲಿರುವ ಗುಂಡೀಚಾ ದೇವಾಲಯದ ಅತ್ತೆಯ ಮನೆಗೆ ಹೋಗುವುದನ್ನು ಆಚರಿಸಲು ಈ ರಥಯಾತ್ರೆಯನ್ನು ನಡೆಸಲಾಗುತ್ತದೆ ಎನ್ನಲಾಗಿದೆ.

ದೇವರ ದರ್ಶನಕ್ಕಾಗಿ ಜನರು ರಸ್ತೆಯಲ್ಲಿ ಗುಂಪು ಸೇರುವುದನ್ನು ತಡೆಯಲು ರಥಯಾತ್ರೆಯ ಮಾರ್ಗದ 19 ಕಿಲೋಮೀಟರ್​ನಷ್ಟು ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಶ್ರೀ ಜಗನ್ನಾಥ ದೇವಾಲದಿಂದ ಗುಂಡೀಚಾ ದೇವಾಲಯದವರೆಗಿನ 3 ಕಿಲೋಮೀಟರ್​ ಮಾರ್ಗದಲ್ಲಿ ಯಾವುದೇ ಚಟುವಟಿಕೆಗಳು ನಡೆಯದಂತೆ ನಿರ್ಬಂಧ ವಿಧಿಸಲಾಗಿದೆ.
ರಥಯಾತ್ರೆಯ ಕಾರ್ಯದಲ್ಲಿ ತೊಡಗಿರುವ ಸುಮಾರು 2,800 ಪುರೋಹಿತರು ಮತ್ತು ಅಧಿಕಾರಿಗಳಿಗೆ ಎರಡೂ ಡೋಸ್​ ಕರೊನಾ ಲಸಿಕೆ ನೀಡಲಾಗಿದೆ. ಕರೊನಾ ಪರೀಕ್ಷೆ ನಡೆಸಿ, ನೆಗೆಟೀವ್ ವರದಿ ಬಂದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ರಥಯಾತ್ರೆಯ ಮುನ್ನ ಇವರೆಲ್ಲರಿಗೂ ಪ್ರತ್ಯೇಕವಾಗಿ ಸರ್ಕಾರಿ ವಸತಿ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ.(ಏಜೆನ್ಸೀಸ್)
ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹೈಕೋರ್ಟ್​ ಗ್ರೀನ್ ಸಿಗ್ನಲ್

ಅತ್ಯಾಧುನಿಕ ಮತ್ತು ನೈಪುಣ್ಯಪೂರ್ಣ ‘ಸ್ಕೋಡಾ ಕುಷಾಕ್’ ಮಾರುಕಟ್ಟೆಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
