ಭಿವಾಡಿ:ಪ್ರತಿ ವರ್ಷದಂತೆ ಈ ವರ್ಷವೂ ಪುರುಷೋತ್ತಮ-ಅಧಿಕ ಮಾಸದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯನ್ನು ಮಾಡಿಸಬೇಕೆಂಬ ನಮ್ಮ ಮನಸ್ಸಿನ ಇಚ್ಛೆ, ಸ್ವಾಮಿ ನಾರಾಯಣನ ಆಶೀರ್ವಾದದಿಂದ ರಾಜಸ್ತಾನದ ಭಿವಾಡಿಯ ಟ್ರೆಹಾನ್​ನ ಹಿಲ್ ವ್ಯೂ ಗಾರ್ಡನ್​ನ ಸಭಾಂಗಣದಲ್ಲಿ ಈ ಆಗಸ್ಟ್ ೧೩ರ ರವಿವಾರದಂದು ಸಾಂಗವಾಗಿ ಈಡೇರಿತು.
ಇದನ್ನೂ ಓದಿ:ಪರಮೇಶ್ವರ ಸಿಎಂ ಆಗಲಿ ಎಂಬುದು ನಮ್ಮೆಲ್ಲರ ಆಶಯ: ರಾಜಣ್ಣ
ಭಿವಾಡಿ ಪ್ರದೇಶವು ದೆಹಲಿ ಮತ್ತು ರಾಜಸ್ತಾನ ಗಡಿ ಭಾಗದಲ್ಲಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಿಗರು ನೆಲೆಸಿದ್ದಾರೆ. ಬೆಳಗ್ಗೆ ದೆಹಲಿಯಿಂದ ಬಂದ ಅರ್ಚಕರು ಅಚ್ಚುಕಟ್ಟಾಗಿ ಪೂಜೆಯನ್ನು ಮಾಡಿಸಿದರು. ಪೂಜೆಗಾಗಿ ಭಿವಾಡಿ ಕನ್ನಡ ಸಂಘದ ವ್ಯವಸ್ಥಾಪಕ ಮಂಡಳಿ ಸದಸ್ಯರು ಬೆಳಗ್ಗಿನಿಂದಲೇ ಸಿದ್ಧತೆಗಾಗಿ ತೊಡಗಿಸಿಕೊಂಡಿದ್ದು, ಪೂಜೆಗೆಂದು ಸುಂದರವಾದ ವೇದಿಕೆಯನ್ನು ನಿರ್ಮಿಸಿ, ಶ್ರೀ ಸತ್ಯನಾರಾಯಣ ಸ್ವಾಮಿ ಫೋಟೋವನ್ನು ಸುಂದರವಾದ, ಸುಗಂಧಿತ ಪುಷ್ಪಗಳಿಂದ ಅಲಂಕರಿಸಿದ್ದರು.
11 ಗಂಟೆಯ ಸುಮಾರಿಗೆ ಆರಂಭವಾದ ಪೂಜೆ ಪ್ರಜ್ವಲಿಸುತ್ತಿದ್ದ ದೀಪಗಳ ಹಾಗೂ ಮಂತ್ರಘೋಷಗಳ ಜತೆ ಭಿವಾಡಿ, ಗುರುಗ್ರಾಮ ಮತ್ತು ದೆಹಲಿಯ 80ರಷ್ಟು ಭಕ್ತಾದಿಗಳ ಸಮ್ಮುಖದಲ್ಲಿ ಮಧ್ಯಾಹ್ನ 1.30 ರವರೆಗೆ ನಡೆದಿತ್ತು. ನೆರೆದಿದ್ದ ಭಕ್ತಾದಿಗಳೆಲ್ಲರೂ ಭಕ್ತಿ, ಭಾವದಿಂದ ಮಂಗಳಾರತಿಯಲ್ಲಿ ಭಾಗವಹಿಸಿ ಜತೆ ಜತೆಗೆ ಶ್ರೀ ರಾಮರಕ್ಷಾ ಸ್ತೋತ್ರವನ್ನೂ ಪಠಿಸಿದರು. ನಮ್ಮ ಕನ್ನಡ ಕಲಿಕಾ ಕೇಂದ್ರದ ಮಕ್ಕಳೂ ಐದಾರು ದೇವರ ನಾಮ ಸ್ಮರಣೆಯನ್ನು ಹಾಡಿದರು.
ಇದನ್ನೂ ಓದಿ:2023-24ನೇ ಸಾಲಿಗೆ 262 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭ
ಎಲ್ಲರಿಗೂ ಸ್ವಾದಿಷ್ಟ ಊಟದ ಸಿದ್ಧತೆಯನ್ನು ಮಾಡಲಾಗಿತ್ತು. ಎಲ್ಲಾ ಮಹಿಳೆಯರು ಕೂಡಿ ದೇವರ ಹಾಡುಗಳನ್ನು ಹೇಳುತ್ತಾ ಊಟ ಮಾಡುತ್ತಿರುವವರಿಗೆ ಆನಂದವನ್ನು ನೀಡಿದರು. ಹಾಜರಿದ್ದ ಎಲ್ಲಾ ಮುತ್ತೈದೆಯರಿಗೆ ಖಣ ಹಾಗೂ ಕುಂಕುಮವನ್ನು ನೀಡಲಾಗಿತ್ತು. ಎಲ್ಲರೂ ಪಾಯಸ, ಮೃಷ್ಟಾನ್ನ ಭೋಜನವನ್ನು ಉಂಡು ಸಂತೃಪ್ತ ಭಾವದಿಂದ ಮನೆಗಳಿಗೆ ತೆರಳಿದರು. ಎಲ್ಲರಿಗೂ ಶ್ರಿಸತ್ಯನಾರಾಯಣನ ಕೃಪೆ ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಬೇಡಿಕೊಳ್ಳತ್ತೇನೆ.
ವರದಿ:ವೀಣಾ ದೇಸಾಯಿ, ಉಪಾಧ್ಯಕ್ಷೆ, ಭಿವಾಡಿ ಕನ್ನಡ ಸಂಘ ಸೊಸೈಟಿ.
ಮಹೇಶ್​ ಬಾಬು ಫ್ಯಾನ್ಸ್​​ಗೆ ಸಿಹಿ ಸುದ್ದಿ; ಸಂಕ್ರಾಂತಿ ಹಬ್ಬಕ್ಕೆ ತೆರೆ ಕಾಣಲಿದೆ ‘ಗುಂಟೂರು ಕಾರಂ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 11 =
Remember me
