ರಾಜಸ್ಥಾನ:ಇಲ್ಲಿ ದೊಡ್ಡ ಕನಸುಗಳನ್ನು ಹೊತ್ತು ಕೋಚಿಂಗ್​ಗಾಗಿ ಮಕ್ಕಳಷ್ಟೇ ಮನೆ ಬಿಡುತ್ತಿಲ್ಲ, ಅವರ ಜೊತೆಗೆ ತಂದೆ-ತಾಯಿ, ಅಜ್ಜ-ಅಜ್ಜಿ ಇಲ್ಲವೇ ಯಾರಾದರೂ ಒಬ್ಬರು ಕೂಡ ಮನೆ ಬಿಡುತ್ತಿದ್ದಾರೆ. ಇಂಥದ್ದೊಂದು ಪರಿಸ್ಥಿತಿಯನ್ನು ಕೋಚಿಂಗ್ ಹಬ್ ಎಂದು ಕರೆಯಲಾಗುವ ರಾಜಸ್ಥಾನದ ಕೋಟಾದಲ್ಲಿನ ಆತಂಕಕಾರಿ ಬೆಳವಣಿಗೆಯೊಂದು ಸೃಷ್ಟಿಸಿದೆ.
ಉನ್ನತ ಸ್ಥಾನ ಗಳಿಸುವ ನಿಟ್ಟಿನಲ್ಲಿ ಕೋಚಿಂಗ್​ಗಾಗಿ ಕೋಟಾಗೆ ಬರುತ್ತಿರುವ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚಾಗಿರುವುದರಿಂದ ಇಂಥದ್ದೊಂದು ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಜತೆ ಮನೆಯಿಂದ ಬೇರೆ ಯಾರಾದರೂ ಒಬ್ಬರು ಕೂಡ ಬಂದು ನೆಲೆಸಲಾರಂಭಿಸಿದ್ದಾರೆ.
ಇದನ್ನೂ ಓದಿ:ರಿಯಲ್​ ಸ್ಟಾರ್ ಉಪೇಂದ್ರ ಹೇಳಿದ್ದರಲ್ಲಿ ‘ಸತ್ಯ’ ಇದ್ಯಾ?: ‘ಯು-ಐ’ ಮೂಡಿಸಿದ ಪ್ರಶ್ನೆ!
ಇಲ್ಲಿಗೆ ಕೋಚಿಂಗ್​ಗೆ ಎಂದು ಬರುತ್ತಿರುವ ಮಕ್ಕಳನ್ನು ಮನೆಯವರು ಈಗ ಹಾಸ್ಟೆಲ್​ನಲ್ಲಿ ಇರಲು ಬಿಡುತ್ತಿಲ್ಲ. ಬದಲಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡು ಮನೆಯವರು ಯಾರಾದರೂ ಒಬ್ಬರು ಅವರೊಂದಿಗೆ ಇರುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ. ಈ ವರ್ಷದಲ್ಲಿ ಈಗಾಗಲೇ ಇಲ್ಲಿಗೆ ಕೋಚಿಂಗ್​ ಪಡೆಯಲೆಂದು ಬಂದ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 15 ಆಗಿತ್ತು. ಹೀಗಾಗಿ ಮಕ್ಕಳನ್ನು ಒಂಟಿಯಾಗಿ ಕಳುಹಿಸಲು ಮನೆಯವರು ಹಿಂಜರಿಯುತ್ತಿದ್ದಾರೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಬಿಹಾರದ ಸೀತಾಮರ್ಹಿಯ ನೀರುದೇವಿ ಎಂಬಾಕೆ ತನ್ನ 80ನೇ ವಯಸ್ಸಿನಲ್ಲೂ ಮನೆ ಬಿಟ್ಟು ಬಂದಿದ್ದಾರೆ. ಐಐಟಿ ಪ್ರವೇಶ ಪರೀಕ್ಷೆಗೆ ಸಜ್ಜಾಗುತ್ತಿರುವ ಮೊಮ್ಮಗ ಕೋಚಿಂಗ್​ ಸಲುವಾಗಿ ಈಕೆಯೂ ಆತನೊಂದಿಗೆ ಬಂದು ನೆಲೆಸಿದ್ದಾರೆ. ಕೋಚಿಂಗ್​ಗೆ ಸೇರಿಸಿ ಹೋದ ನಾವು ಮನೆಯಲ್ಲಿ ನೆಮ್ಮದಿಯಲ್ಲಿ ಇರಲು ಆಗಿಲ್ಲ. ಇಲ್ಲಿನ ಆತಂಕಕಾರಿ ವಿಷಯದ ಕುರಿತು ಕೇಳಿ ಯಾರಾದರೂ ಒಬ್ಬರು ಬಂದಿರುವುದೇ ಸೂಕ್ತ ಎಂದುಕೊಂಡು ಬಂದೆ ಎಂಬುದಾಗಿ ಹೇಳಿದ್ದಾರೆ.
ಇದನ್ನೂ ಓದಿ:ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!
ಮಧ್ಯಪ್ರದೇಶದ ಸಂಧ್ಯಾ ದ್ವಿವೇದಿ ಎಂಬಾಕೆ ತನ್ನ ಮಗನೊಂದಿಗೆ ಬಂದು ನೆಲೆಸಿದ್ದಾರೆ. ಚಂಡೀಘಡದ ಟೆಕ್ಕಿ ಶಿವಾನಿ ಜೈನ್ ಎಂಬಾಕೆ ನೀಟ್​ಗೆ ಸಜ್ಜಾಗುತ್ತಿರುವ ಮಗಳ ಜೊತೆಗಿರಲು ಕೋಟಾಗೆ ಬಂದಿದ್ದಾರೆ. ಹೀಗೆ ಹಲವರು ಮಕ್ಕಳು-ಮೊಮ್ಮಕ್ಕಳ ಜತೆಗೆ ಬಂದು ನೆಲೆಸಿದ್ದಾರೆ. ಜೆಇಇ, ನೀಟ್ ಮುಂತಾದ ಪರೀಕ್ಷೆಗಳ ಕೋಚಿಂಗ್ ಸಲುವಾಗಿ ವರ್ಷಕ್ಕೆ 2 ಲಕ್ಷಕ್ಕೂ ಅಧಿಕ ಮಂದಿ ಕೋಟಾಗೆ ಆಗಮಿಸುತ್ತಿದ್ದಾರೆ.
ಕ್ರೀಡಾ ದಿನಕ್ಕೆ ವಿಷ್​ ಮಾಡುವಲ್ಲಿ ಎಡವಿದ ಪಿ.ಟಿ.ಉಷಾ; ನೆಟ್ಟಿಗರಿಂದ ತೀವ್ರ ಟೀಕೆ..

ಕೋವಿಡ್​ನಿಂದ ಗುಣವಾಗಿ ಡಿಸ್​​ಚಾರ್ಜ್​ ಆದಮೇಲೆ ಸತ್ತವರೆಷ್ಟು ಗೊತ್ತೇ?; ಐಸಿಎಂಆರ್​ ಅಧ್ಯಯನದಲ್ಲಿ ಬಹಿರಂಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
