ನವದೆಹಲಿ:ಮದ್ಯವನ್ನು ಖರೀದಿಸಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಅಜ್ಜ-ಅಜ್ಜಿಯನ್ನೇ ಕೊಲೆ ಮಾಡಿದ್ದು, ಇದೀಗ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ. ಇಬ್ಬರ ಶವವೂ ಕೊಳೆತು ನಾರಲಾರಂಭಿಸಿದ ಮೇಲೆಯೇ ಕೊಲೆಯ ವಿಷಯ ಗೊತ್ತಾಗಿದ್ದು.
ಉತ್ತರಪ್ರದೇಶದ ಬುಡೌನ್ ಜಿಲ್ಲೆಯ ದಮ್ರಿ ಗ್ರಾಮದಲ್ಲಿ ಈ ಕೊಲೆ ನಡೆದಿದೆ. ಹಿಮೇಶ್ (20) ಕೊಲೆ ಆರೋಪಿ. ಪ್ರೇಮ್​ಶಂಕರ್​ (65) ಮತ್ತು ಭಾವನಾ ದೇವಿ (60) ಮೊಮ್ಮಗನಿಂದ ಕೊಲೆಗೀಡಾದ ಅಜ್ಜ-ಅಜ್ಜಿ. ಈ ಕುಟುಂಬ ದೆಹಲಿಯಲ್ಲಿ ವಾಸವಿದ್ದು, ಮದುವೆಯೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಉತ್ತರಪ್ರದೇಶಕ್ಕೆ ಬಂದಿತ್ತು.
ಹಿಮೇಶ್ ಮದ್ಯವ್ಯಸನಿಯಾಗಿದ್ದು, ಮದ್ಯವನ್ನು ಖರೀದಿಸಲು ಸಂಬಂಧಿಕರು ಹಾಗೂ ಮನೆಯವರನ್ನು ಪೀಡಿಸುತ್ತಿದ್ದ. ಈ ಸಲವೂ ಮನೆಯವರನ್ನು ಕೇಳಿದ್ದಾಗ ಅವರು ಬೈದಿದ್ದರು. ಇದೇ ಸಿಟ್ಟಲ್ಲಿ ಈತ ಅಜ್ಜ-ಅಜ್ಜಿಯನ್ನು ಕೊಲೆ ಮಾಡಿ, ಇಬ್ಬರ ಶವವನ್ನು ಮನೆಯಲ್ಲಿನ ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಅಡಗಿಸಿಟ್ಟಿದ್ದ.
ಈ ಕೊಲೆ ಜೂ. 22ರಂದು ನಡೆದಿದ್ದು, ಮನೆಯವರು ಭಾನುವಾರ ದೂರು ನೀಡಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ. ಆರೋಪಿ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭ್ರಷ್ಟಾಚಾರದ ಆರೋಪದಲ್ಲಿ ಬಂಧಿತ ಐಎಎಸ್ ಅಧಿಕಾರಿಯ ಪುತ್ರ ಗುಂಡಿಟ್ಟುಕೊಂಡು ಆತ್ಮಹತ್ಯೆ!

ಇಲ್ಲಿ ಸದ್ಯಕ್ಕೆ ಪಾನಿಪುರಿ ಮಾರಾಟ ನಿಷೇಧ: ಕಾರಣ ಮತ್ತೇನೂ ಅಲ್ಲ, ಇದು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − five =
Remember me
