ಲಖನೌ:ಆಮಂತ್ರಣವಿಲ್ಲದಿದ್ದರೂ ಮದುವೆಗೆ ಬಂದ ಯುವಕನೊಬ್ಬ, ಕಾರ್ಯಕ್ರಮದಲ್ಲಿ ಸಂತಸದಿಂದಿದ್ದ ತನ್ನ ಅಜ್ಜನನ್ನೇ ಕೊಡಲಿಯಿಂದ ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.
ಮಂಡಿ ಧನೌರಾ ಪೊಲೀಸ್ ಠಾಣೆ ಪ್ರದೇಶದ ಜುಂಧಾಪುರ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಕೆಮ್​ ಸಿಂಗ್​ ಎನ್ನುವವರ ಮಗ ಅರುಣ್ ಮದುವೆ ನಡೆಯುತ್ತಿತ್ತಂತೆ. ಕರೊನಾ ಇದ್ದ ಕಾರಣದಿಂದ ಹೆಚ್ಚಿನ ಜನರಿಗೆ ಆಮಂತ್ರಣ ನೀಡದೆಯೇ ಮದುವೆ ಮಾಡಲಾಗಿದೆ. ಕೆಮ್ ಸಿಂಗ್ ತಂದೆಯ ಮಗಳ ಮನೆಗೇ ಆಮಂತ್ರಣ ಕೊಟ್ಟಿರಲಿಲ್ಲವಂತೆ. ಸಾಕಷ್ಟು ಸಮಯದಿಂದ ಎರಡು ಕುಟುಂಬಗಳ ನಡುವೆ ಯಾವುದೋ ಕಾರಣಕ್ಕೆ ಅಂತರ ಏರ್ಪಟ್ಟಿದ್ದರಿಂದಾಗಿ ಮದುವೆಗೆ ಕರೆದಿಲ್ಲ.
ಆದರೆ ಈ ವಿಚಾರದಲ್ಲಿ ಸಿಟ್ಟಾಗಿದ್ದ ಮೊಮ್ಮಗ ಸೌರಭ್​ ಬೇರೆಯದ್ದೇ ನಿರ್ಧಾರ ಮಾಡಿದ್ದಾನೆ. ಆಮಂತ್ರಣವಿಲ್ಲದಿದ್ದರೂ ಮದುವೆಗೆ ತೆರಳಿದ್ದಾನೆ. ಅಲ್ಲಿ ತನ್ನ ಅಜ್ಜನೊಂದಿಗೆ ಜಗಳವಾಡಿ ಆತನಿಗೆ ಕೊಡಲಿಯಿಂದ ಬಲವಾಗಿ ಹೊಡೆದಿದ್ದಾನೆ. ಅದನ್ನು ತಪ್ಪಿಸಲು ಬಂದ ಮೂರ್ನಾಲ್ಕು ಜನರಿಗೂ ಕೊಡಲಿ ಏಟು ಕೊಟ್ಟಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಹೆಚ್ಚು ಗಾಯಾಳುವಾಗಿದ್ದ ಅಜ್ಜ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಪೊಲೀಸ್ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)
ವಾಟ್ಸ್​ಆ್ಯಪ್​ ಸ್ಟೇಟಸ್​ನಿಂದಾಗಿ ನಡೆದೇ ಹೋಯಿತು ಭಯಾನಕ ಕೊಲೆ! ತಲೆ ಮೇಲೆ ಕಲ್ಲು ಎತ್ತಾಕಿದ್ದ ಆರೋಪಿಗಳು ಅಂದರ್

ಗಂಡ ಗಂಡಸಲ್ಲ ಎಂದು ಹನಿಮೂನ್​ನಲ್ಲಿ ಗೊತ್ತಾಯ್ತು! ಇದೀಗ ಗಂಡನ ಸ್ತ್ರೀ ರೂಪವನ್ನೇ ಮದುವೆಯಾಗಲು ಮುಂದಾದ ಹೆಂಡತಿ

ಟ್ರಕ್​ ಓಡಿಸುತ್ತಲೇ ಓರಲ್ ಸೆಕ್ಸ್! ಮುಂದಾಗಿದ್ದು ಏನೆಂದು ಕೇಳಿದರೆ ಶಾಕ್ ಆಗ್ತೀರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 4 =
Remember me
