ಮುಂಬೈ:ಭಾರತ ಹಾಗೂ ನ್ಯೂಜಿಲೆಂಡ್​ ತಂಡದ ಮಧ್ಯೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್​ನ ಸೆಮಿಫೈನಲ್ ವಿರಾಟ ಕೊಹ್ಲಿಯ ಭರ್ಜರಿ ಆಟದಿಂದ ರೋಚಕ ಎನಿಸಲಾರಂಭಿಸಿದೆ. ಮಾತ್ರವಲ್ಲ, ಇದೊಂದೇ ಇನ್ನಿಂಗ್ಸ್​ನಲ್ಲಿ ಕ್ರಿಕೆಟ್ ದೇವರ ಎರಡು ದಾಖಲೆಗಳನ್ನು ಮುರಿದಿರುವ ಅವರು ಬ್ಯಾಟಿಂಗ್​ನಲ್ಲಿ ವಿರಾಟರೂಪ ದರ್ಶನ ಮಾಡಿದ್ದಾರೆ.
ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ 49 ಶತಕಗಳನ್ನು ಬಾರಿಸುವ ಮೂಲಕ ದಾಖಲೆ ಮಾಡಿದ್ದರು. ಇಂದು ವಿರಾಟ್ ಕೊಹ್ಲಿ ಶತಕ ಬಾರಿಸುವ ಮೂಲಕ ಆ ದಾಖಲೆಯನ್ನು ಮುರಿದಿದ್ದಾರೆ. ಅಂದರೆ ಈ ಶತಕದೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಒಟ್ಟು 50 ಶತಕಗಳನ್ನು ಬಾರಿಸಿದಂತಾಗಿದೆ.
ಇದನ್ನೂ ಓದಿ:ಕ್ರಿಕೆಟ್ ದೇವರ ದಾಖಲೆ ಮುರಿದ ವಿರಾಟ್​; 20 ವರ್ಷಗಳ ಹಿಂದಿನ ರೆಕಾರ್ಡ್​ ಬ್ರೇಕ್ ಮಾಡಿದ ಕೊಹ್ಲಿ
ತಮ್ಮ ಜನ್ಮದಿನವಾದ ನ. 5ರಂದು ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ, ಅಂದು ಕ್ರಿಕೆಟ್ ದಿಗ್ಗಜನ ದಾಖಲೆಗೆ ಸರಿಗಟ್ಟುವ ಮೂಲಕ ಜನ್ಮದಿನವನ್ನು ಸ್ಮರಣೀಯವಾಗಿಸಿಕೊಂಡಿದ್ದರು.
ವಿರಾಟ್​ ಕೊಹ್ಲಿ ಈಗ ಕೆಲವೇ ನಿಮಿಷಗಳ ಹಿಂದೆ ಒಂದೇ ಏಕದಿನ ವಿಶ್ವಕಪ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಗಳಿಸುವ ಮೂಲಕ ಸಚಿನ್ ತೆಂಡುಲ್ಕರ್ ಅವರ ದಾಖಲೆ ಮುರಿದಿದ್ದಾರೆ. ಸಚಿನ್ ತೆಂಡೂಲ್ಕರ್ 2003ರ ಏಕದಿನ ವಿಶ್ವಕಪ್​ನಲ್ಲಿ 673 ರನ್ ಗಳಿಸಿದ್ದರು. ಆದರೆ ಇದೀಗ ವಿರಾಟ್​ ಕೊಹ್ಲಿ 674ಕ್ಕೂ ಅಧಿಕ ರನ್​ಗಳನ್ನು ಗಳಿಸಿ ಅಜೇಯರಾಗಿ ಆಟ ಮುಂದುವರಿಸಿದ್ದಾರೆ. ಈ ಮೂಲಕ ಇದೊಂದೇ ಇನ್ನಿಂಗ್ಸ್​ನಲ್ಲಿ ಸಚಿನ್ ಅವರ ಎರಡು ದಾಖಲೆಗಳನ್ನು ವಿರಾಟ್ ಮುರಿದಂತಾಗಿದೆ.
ಇದಕ್ಕೂ ಮೊದಲು ವಿರಾಟ್​ ಕೊಹ್ಲಿ ಇನ್ನೊಂದು ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಒಂದೇ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹತ್ತು ಇನ್ನಿಂಗ್ಸ್​ನಲ್ಲಿ ಒಟ್ಟು 8 ಸಲ ಅರ್ಧ ಶತಕ ಬಾರಿಸಿದ ಪ್ರಥಮ ಆಟಗಾರ ಎಂಬ ಖ್ಯಾತಿಯೂ ಅವರದ್ದಾಗಿದೆ.
ಕಾರಿನ ಚಕ್ರಗಳ ಗಾಳಿ ತೆಗೀತಿದ್ರಂತೆ ಸಚಿನ್; ಮಕ್ಕಳ ದಿನಾಚರಣೆ ಪ್ರಯುಕ್ತ ಬಾಲ್ಯದ ತುಂಟತನ ನೆನಪಿಸಿಕೊಂಡ ತೆಂಡುಲ್ಕರ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 11 =
Remember me
