ಚೆನ್ನೈ:ಮನೆಯಲ್ಲಿ, ಕಟ್ಟಡಗಳಲ್ಲಿ ನಿರುಪಯುಕ್ತವಾಗಿ ನೀರನ್ನು ಸಂಗ್ರಹಿಸಿರುವರಿಗೆ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ದಂಡ ವಿಧಿಸಲು ಮುಂದಾಗಿದೆ.ನಗರದಲ್ಲಿ ಡೆಂಘೆ ಹರಡುವುದನ್ನು ತಡೆಗಟ್ಟಲು ಈ ಕಾರ್ಯ ಕೈಗೊಳ್ಳಲಾಗುತ್ತಿದೆ. ನಾಗರಿಕ ಸಂಸ್ಥೆಯ ಪ್ರಯತ್ನ ಇದಾಗಿದ್ದು, ಈ ಕ್ರಮವು ನಗರದಲ್ಲಿ ಜಾರಿಗೆ ತಂದ ಡೆಂಘೆ ಹರಡುವಿಕೆ ತಡೆಯುವ ಕ್ರಮಗಳ ಒಂದು ಭಾಗವಾಗಿದೆ.ಮನೆಯ ಆವರಣದಲ್ಲಿ ನೀರು ನಿಂತಿರುವುದು ಕಂಡುಬಂದರೆ ನಾಗರಿಕ ಸಂಸ್ಥೆ ದಂಡ ವಿಧಿಸುತ್ತದೆ ಎಂದು ನಿಗಮ ಆಯುಕ್ತ ಜಿ.ಪ್ರಕಾಶ್ ಮಂಗಳವಾರ ತಿಳಿಸಿದ್ದಾರೆ.
ಇದನ್ನೂ ಓದಿ:ವ್ಯಸನ ಮುಕ್ತನನ್ನಾಗಿ ಮಾಡಿ ಎಂದು ಹೋದವನ ಬದುಕನ್ನು ಶಾಶ್ವತವಾಗಿ ಮುಗಿಸಿಬಿಡೋದಾ?….
ಆಯಾ ಕಟ್ಟಡಗಳು, ಆವರಣಗಳಿಗನುಣವಾಗಿ ದಂಡ ವಿಧಿಸಲಾಗುತ್ತದೆ. ಮೊದಲ ಹಂತದಲ್ಲಿ ನಿಯಮ ಉಲ್ಲಂಘಿಸಿದ ಮನೆ ಮಾಲೀಕರಿಗೆ ನೋಟಿಸ್ ನೀಡಲಾಗುತ್ತದೆ. ಎರಡನೇ ಉಲ್ಲಂಘನೆಗೆ 100 ರೂ. ಮತ್ತು ಮೂರನೇ ಉಲ್ಲಂಘನೆಗೆ 200 ರೂ.ಗಳ ದಂಡ ವಿಧಿಸಲಾಗುತ್ತದೆ.ಅಪಾರ್ಟ್​​​ಮೆಂಟ್ ಸಂಕೀರ್ಣಗಳ ಮೊದಲ ಉಲ್ಲಂಘನೆಗೆ 500 ರೂ.ಗಳ ದಂಡವನ್ನು ವಿಧಿಸಲಾಗುತ್ತದೆ. ಎರಡನೇ ಮತ್ತು ಮೂರನೇ ಉಲ್ಲಂಘನೆಗಳಿಗೆ ಈ ಮೊತ್ತವು ಕ್ರಮವಾಗಿ 5,000 ಮತ್ತು 15,000 ರೂಗಳಿಗೆ ಹೆಚ್ಚಾಗುತ್ತದೆ.ಸಣ್ಣ ಅಂಗಡಿಗಳಿಗೆ ಮೊದಲ ಉಲ್ಲಂಘನೆಗಾಗಿ 500 ರೂ. ಎರಡನೇ ಉಲ್ಲಂಘನೆಗೆ, 2,000 ರೂ ಮತ್ತು ಮೂರನೇ ಉಲ್ಲಂಘನೆಗೆ 5,000 ರೂ. ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ:ಭತ್ತದ ಗದ್ದೆಯಲ್ಲಿ ಕೈಕೆಸರು ಮಾಡಿಕೊಂಡು ಸೀದಾ ಬಂದು ಆನೆಗೆ ಬಲಿಯಾದಳು
ಸರ್ಕಾರಿ ಕಟ್ಟಡಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಕೈಗಾರಿಕೆಗಳಿಗೆ ಮೊದಲ ಉಲ್ಲಂಘನೆಗೆ 10,000 ರೂ. ಎರಡನೇ ಮತ್ತು ಮೂರನೇ ಉಲ್ಲಂಘನೆಗಳಿಗೆ ಈ ಮೊತ್ತ 25 ಸಾವಿರ ಮತ್ತು ಒಂದು ಲಕ್ಷ ರೂ. ವಿಧಿಸಲಾಗುತ್ತದೆ. ನಿಯಮ ಉಲ್ಲಂಘಿಸುವ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು ಮತ್ತು ನಿರ್ಮಾಣ ಸ್ಥಳಗಳಿಗೂ ಸಹ ದಂಡ ಪಾವತಿಸಲು ಸೂಚಿಸಲಾಗುತ್ತದೆ.ಖಾಲಿ ಪ್ಲಾಟ್‌ಗಳ ಮೇಲೆ ಹೆಚ್ಚಿನ ಗಮನಹರಿಸಲಾಗುತ್ತದೆ.ಅಂಬತ್ತೂರು ಮತ್ತು ಅಳಂದೂರಿನಲ್ಲಿ ಖಾಲಿ ನಿವೇಷನಗಳ ಮೇಲೆ ತೀಕ್ಷ್ಣ ಕಾವಲು ಇಡಲಾಗುವುದು ಎಂದು ಪ್ರಕಾಶ್ ತಿಳಿಸಿದ್ದಾರೆ. “ಇಲ್ಲಿ ನೀರು ಸ್ಥಗಿತಗೊಂಡರೆ ಅದು ನೆರೆಹೊರೆಯವರಿಗೂ ಅಪಾಯವನ್ನುಂಟು ಮಾಡುತ್ತದೆ. ಅಂತಹ ಪ್ಲಾಟ್‌ಗಳ ಸ್ವಚ್ವತೆಯು ಮಾಲೀಕರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.ಘನ ತ್ಯಾಜ್ಯ ವಿಲೇವಾರಿಗೂ ಕ್ರಮ ಕೈಗೊಳ್ಳಲಾಗುತ್ತದೆ. ಜನದಟ್ಟಣೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ದೊಡ್ಡ ಕಸದ ತೊಟ್ಟಿಗಳನ್ನೂ ತ್ವರಿತವಾಗಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ಚರ್ಚಿಸಲು ಸಂಬಂಧಪಟ್ಟವರೊಂದಿಗೆ ಚರ್ಚಿಸಲು ನಡೆಸಲಾಗುವುದು ಎಂದು ಅವರು ತಿಳಿಸಿದರು.
ಕಣ್ಣೆದುರೇ ಚಪ್ಪಲ್‌ಗಳು ದಿಢೀರ್‌ ಮಾಯ: ಸಿಸಿಟಿವಿ ನೋಡಿ ಬೆಚ್ಚಿಬಿದ್ದ ಜನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + two =
Remember me
