ಮುಜಾಫರ್​ನಗರ:ದುಬಾರಿ ವರದಕ್ಷಿಣೆ ಕೇಳಿದ ವರನಿಗೆ ವಧು, ಆಕೆಯ ಕುಟುಂಬ ಮತ್ತು ಗ್ರಾಮಸ್ಥರು ಸೇರಿಕೊಂಡು ಬುದ್ಧಿ ಕಲಿಸಿರುವ ಅಪರೂಪದ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ನಡೆದಿದೆ.
ವರ ವಾಸಿಂ ಅಹ್ಮದ್​ ಎಂಬಾತ ವರದಕ್ಷಿಣೆಯಾಗಿ ಟ್ರ್ಯಾಕ್ಟರ್​ ನೀಡುವಂತೆ ವಧುವಿನ ಕುಟುಂಬವನ್ನು ಕೇಳಿದ್ದ. ಬಳಿಕ ಈ ವಾರದ ಆರಂಭದಲ್ಲಿ ತಮ್ಮ ಸಂಬಂಧಿಕರೊಂದಿಗೆ ಮದುವೆ ಮಂಟಪ್ಪಕ್ಕೆ ಬಂದಿದ್ದ. ಆತನನ್ನ ಮತ್ತು ಅವರ ಕುಟುಂಬವನ್ನು ಸ್ಥಳೀಯ ಜನರು ಒತ್ತೆಯಾಳಾಗಿರಿಸಿಕೊಂಡರು.
ಇದನ್ನೂ ಓದಿ:ಖ್ಯಾತ ಖಳನಾಯಕನಿಗೆ ವಿಷವುಣಿಸಿದ ಸಹೋದರ: ಕಿಡ್ನಿ ಸಮಸ್ಯೆಯಿಂದ ಕಣ್ಣೀರಿಡುತ್ತಿರುವ ಪೊನ್ನಂಬಲಂ
ಇದಾದ ಬಳಿಕ ಒಂದು ಹೊಸ ಟ್ರ್ಯಾಕ್ಟರ್​ಗೆ ವ್ಯವಸ್ಥೆ ಮಾಡಿ, ವಧುವಿನ ಬದಲಾಗಿ ಆ ಟ್ರ್ಯಾಕ್ಟರ್​ ಅನ್ನೇ ಮದುವೆ ಆಗುವಂತೆ ಸ್ಥಳೀಯರು ಒತ್ತಾಯ ಮಾಡಿದರು. ಮದುವೆಯ ಸಕಲ ವ್ಯವಸ್ಥೆಗೆ ವಧುವಿನ ಮನೆಯವರು ಮಾಡಿದ್ದ ಖರ್ಚನ್ನು ಕೊಡಲು ಒಪ್ಪಿಕೊಂಡ ಬಳಿ ವರ ಮತ್ತು ಅವನ ಜೊತೆಗಿದ್ದ ಸಂಬಂಧಿಕರನ್ನು ಹಲವಾರು ಗಂಟೆಗಳ ನಂತರ ಬಿಟ್ಟು ಕಳುಹಿಸಲಾಯಿತು.
ವಧುವಿನ ಚಿಕ್ಕಪ್ಪ ಮೊಹಮ್ಮದ್ ಮಾತನಾಡಿ, ನನ್ನ ಸಹೋದರ ತನ್ನ ಮಗಳಿಗಾಗಿ ಪೀಠೋಪಕರಣ, ಫ್ರಿಡ್ಜ್ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಲಕ್ಷಗಟ್ಟಲೆ ಖರ್ಚು ಮಾಡಿದ್ದಾನೆ. ನಾಲ್ಕು ದಿನಗಳ ಹಿಂದೆ ವರನ ಮನೆಗೆ ಎಲ್ಲವನ್ನೂ ತಲುಪಿಸಲಾಗಿದೆ ಎಂದು ತಿಳಿಸಿದರು. (ಏಜೆನ್ಸೀಸ್​)
ಗುಳಿಗ ದೈವಕ್ಕೆ ಅಪಮಾನ ಪ್ರಕರಣ; ಸ್ಪಷ್ಟನೆ ನೀಡಿದ ಆರಗ ಜ್ಞಾನೇಂದ್ರ…

ನಮ್ಮ ಫೋಟೋ ಮಾತ್ರ ತೆಗಿಬೇಡಿ ಸರ್​… ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದವರಿಂದ ಹೊಸ ಡ್ರಾಮ

ರೈಲ್ವೇ ನಿಲ್ದಾಣದಲ್ಲಿ ಶವ ಪತ್ತೆ ಪ್ರಕರಣ | ಮೂವರ ಬಂಧನ; ಪೊಲೀಸರಿಗೆ ಹಂತಕರ ಸುಳಿವು ನೀಡಿದ್ದು ಡ್ರಮ್ ಮೇಲಿದ್ದ ಸ್ಟಿಕ್ಕರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
