ವಾಷಿಂಗ್ಟನ್:ಅಮೆರಿಕವು ತನ್ನ ದೇಶದಲ್ಲಿ ನೆಲೆಸಿರುವ ಭಾರತೀಯರನ್ನು ಹೊರಕ್ಕೆ ಹಾಕಲು ಪರೋಕ್ಷವಾಗಿ ಕೆಲವು ಯತ್ನಗಳನ್ನು ನಡೆಸುತ್ತಿರುವ ಬೆನ್ನಲ್ಲೇ, ಬೇರೆ ಬೇರೆ ಕಾರಣಗಳಿಂದಾಗಿ ಅಮೆರಿಕದ ಪ್ರಜೆಗಳಾಗಲು ಭಾರತೀಯರು ಹವಣಿಸುತ್ತಿರುವುದೂ ಇದೆ. ಇದಕ್ಕಾಗಿ ಬೇಕಾಗಿರುವುದು ಗ್ರೀನ್‌ ಕಾರ್ಡ್‌.
ಆದರೆ ಸದ್ಯದ ಅಮೆರಿಕದ ಪರಿಸ್ಥಿತಿ ಹೇಗಿದೆಯಂತೆ, ಅಮೆರಿಕದಲ್ಲಿರುವ ಭಾರತೀಯರು ಅಲ್ಲಿಯ ಕಾಯಂ ಪ್ರಜೆಯಾಗಲು ಗ್ರೀನ್ ಕಾರ್ಡ್ ಪಡೆಯಬೇಕಿದ್ದರೆ ಏನಿಲ್ಲವೆಂದರೂ ಕನಿಷ್ಠ 195 ವರ್ಷ ಕಾಯಬೇಕಂತೆ! ಅಮೆರಿಕದಲ್ಲಿನ ಬ್ಯಾಕ್‌ಲಾಗ್ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಎದುರಾಗಿದೆ ಎಂದಿದೆ ಅಮೆರಿಕ.
ಭಾರತದಿಂದ ವಲಸಿಗರಾಗಿ ಅಮೆರಿಕಕ್ಕೆ ಪ್ರವೇಶಿಸಿದವರು ಈ ಇ.ಬಿ 3 ಗ್ರೀನ್ ಕಾರ್ಡ್ ಪಡೆಯಬೇಕಿದ್ದರೆ 195 ವರ್ಷ ಕಾಯಬೇಕಿದೆ. ಪಾಲಕರು ಅರ್ಜಿ ಸಲ್ಲಿಸಿದರೆ ಅವರ ಮಕ್ಕಳು ಕೂಡ ಅಮೆರಿಕದ ಪ್ರಜೆಗಳಾಗಲು ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. 2019ರ ಆರ್ಥಿಕ ವರ್ಷದ ಅಂತ್ಯಕ್ಕೆ 9008 ಇ.ಬಿ-1, 2908 ಇ.ಬಿ-2 , 5083 ಇ.ಬಿ- 3 ಭಾರತೀಯರ ಅರ್ಜಿಗಳು ಅಷ್ಟೇ ಮಾನ್ಯವಾಗಿದೆ ಎಂದು ಅಮೆರಿಕದ ಸೆನೆಟರ್ ಮೈಕ್‌ಲೀ ಹೇಳಿದ್ದಾರೆ.
ಈ ಸಮಸ್ಯೆ ಬೃಹತ್‌ ಪ್ರಮಾಣದಲ್ಲಿ ತಲೆದೋರಿದ್ದು, ಒಂದು ವೇಳೆ ಇದಕ್ಕೆ ಕೂಡಲೇ ಪರಿಹಾರ ಕಂಡುಹಿಡಿಯದೇ ಹೋದರೆ, ಸಮಸ್ಯೆ ಮತ್ತಷ್ಟು ಕಗ್ಗಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಮಾಸ್ಕ್‌ ಧರಿಸದಿದ್ರೆ ಒಂದು ಲಕ್ಷ ದಂಡ, 2 ವರ್ಷ ಜೈಲು: ಇದೆಲ್ಲಿ ಗೊತ್ತಾ?
ಒಂದು ವೇಳೆ ಈ ರೀತಿಯೇನಾದರೂ ಆಗಿದ್ದೇ ಆದಲ್ಲಿ, ಅಮೆರಿಕದಲ್ಲಿ ಇರುವ ಭಾರತೀಯರಿಗೆ ಭಾರೀ ಪ್ರಮಾಣದ ನಷ್ಟ ಉಂಟಾಗಲಿದೆ. ಅಲ್ಲಿ ಜನಿಸಿರುವ ವಲಸಿಗರು ಹಾಗೂ ಅವರ ಮಕ್ಕಳಿಗೆ ಅಮೆರಿಕದ ಸರ್ಕಾರದ ಸೌಲಭ್ಯಗಳಾಗಲೀ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ಸವಲತ್ತುಗಳಾಗಲೀ ಸಿಗುವುದಿಲ್ಲ ಎಂಬ ಆತಂಕ ಎದುರಾಗಿದೆ.
ಈ ಕುರಿತು ಇನ್ನಷ್ಟು ಮಾಹಿತಿ ನೀಡಿರುವ ಮೈಕ್‌ಲೀ, ಎಚ್‌1ಬಿ ವೀಸಾದ ಮೇಲೆ ಅಮೆರಿಕಕ್ಕೆ ಬಂದವರ ಮಕ್ಕಳು ಗ್ರೀನ್‌ಕಾರ್ಡ್‌ಗೆ ಕಾಯುತ್ತಿರುತ್ತಾರೆ. ಆದರೆ ಅವರಿಗೆ ಇದು ಸಿಗದೇ ಹೋದರೆ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಾರೆ. ಇಲ್ಲಿಯವರೆಗೆ ದುಬಾರಿ ಶುಲ್ಕವನ್ನು ನೀಡಿ ಅವರು ಶಿಕ್ಷಣವನ್ನು ಪಡೆದಿರುತ್ತಾರೆ. ಆದರೆ ಗ್ರೀನ್ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕೆ ಅವರನ್ನು ದೇಶದಿಂದ ಹೊರಹಾಕಿದರೆ ಅವರ ಸ್ಥಿತಿ ಏನಾಗಬೇಕು ಎಂದು ಕೇಳಿದ್ದಾರೆ.
ಗಣ್ಯರಿಗೆ ಹುಡುಗಿಯರ ಸಪ್ಲೈ, ಆಟೋ ಡ್ರೈವರ್‌ ಮಗಳ ಭಯಾನಕ ಹಿಸ್ಟರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − five =
Remember me
