ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮ ದಿನಕ್ಕೆ ದೇಶ-ವಿದೇಶಗಳಿಂದ ಶುಭ ಹಾರೈಕೆಯ ಮಹಾಪೂರವೇ ಹರಿದುಬಂದಿದೆ. ಜಾಗತಿಕ ನಾಯಕರ ಪೈಕಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಜರ್ಮನಿ ಚಾನ್ಸಲರ್ ಏಂಜೆಲಾ ಮೆರ್ಕೆಲ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್​ಸನ್, ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಸಹಿತ ಅನೇಕ ಮುಖಂಡರು ಮೋದಿಗೆ ಶುಭ ಹಾಗೂ ಯಶಸ್ಸು ವೃದ್ಧಿಯನ್ನು ಕೋರಿ ಸಂದೇಶ ಕಳಿಸಿದ್ದಾರೆ.
ಪ್ರಧಾನಿಯವರನ್ನು ‘ನರೇಂದ್ರ’ ಎಂದೇ ಆತ್ಮೀಯವಾಗಿ ಸಂಬೋಧಿಸಿರುವ ಏಂಜೆಲಾ ಮೆರ್ಕಲ್, ಅಸಹಜವಾದ ಪ್ರಸಕ್ತ ಪರಿಸ್ಥಿತಿಯಲ್ಲಿ ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ. ಮೋದಿಯವರೊಂದಿಗೆ ಬೆಳೆಸಿಕೊಂಡಿರುವ ಬಾಂಧವ್ಯಕ್ಕೆ ತಾವು ತುಂಬಾ ಬೆಲೆ ನೀಡುವುದಾಗಿ ವ್ಲಾದಿಮಿರ್ ಪುತಿನ್ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ. ಮೋದಿ ನೇತೃತ್ವದಲ್ಲಿ ಭಾರತ ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಅಭಿವೃಧಿ ಪಥದಲ್ಲಿ ಸಾಗುತ್ತಿದೆ ಎಂದಿದ್ದಾರೆ. ಬೋರಿಸ್ ಜಾನ್​ಸನ್, ಮೋದಿಯವರನ್ನು ತಮ್ಮ ‘ಗೆಳೆಯ’ ಎಂದು ಹೇಳಿದ್ದು ಶೀಘ್ರವೇ ಭೇಟಿಯಾಗುವ ಆಶಯ ವ್ಯಕ್ತಪಡಿಸಿದ್ದಾರೆ. ಫಿನ್ಲೆಂಡ್ ಪ್ರಧಾನಿ ಸನ್ನಾ ಮಾರಿನ್ ಕೂಡ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
‘ಭಾರತೀಯ ಜೀವನ ಮೌಲ್ಯಗಳು ಮತ್ತು ಪ್ರಜಾತಾಂತ್ರಿಕ ಪರಂಪರೆಗೆ ಉದಾಹರಣೆ ಹಾಕಿ ಕೊಟ್ಟಿದ್ದೀರಿ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ ಟ್ವೀಟ್ ಮಾಡಿದ್ದಾರೆ. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಸ್ಪೀಕರ್ ಓಂ ಬಿರ್ಲಾ, ರಾಜನಾಥ ಸಿಂಗ್ ಸಹಿತ ಅನೇಕ ಕೇಂದ್ರ ಸಚಿವರೂ ಶುಭ ಕೋರಿದ್ದಾರೆ. ಮೋದಿ ನೇತೃತ್ವದಲ್ಲಿ ದೇಶಸೇವೆಗೆ ಅವಕಾಶ ಸಿಕ್ಕಿದ್ದು ಗೌರವದ ಸಂಗತಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಟ್ವಿಟ್ಟರ್​ನಲ್ಲಿ ಮೋದಿಗೆ ಶುಭಾಶಯ ಕೋರಿದವರಲ್ಲಿ ಸೇರಿದ್ದಾರೆ.
ಆರೋಗ್ಯದ ಗುಟ್ಟು
ಸದಾ ಲವಲವಿಕೆಯಿಂದ ಕೆಲಸ ಮಾಡುವುದು ಪ್ರಧಾನಿ ಮೋದಿಯವರ ವಿಶೇಷ ಗುಣ. ಅವರು ತಮ್ಮ ದೇಹ, ಮನಸ್ಸು ಆರೋಗ್ಯವಾಗಿರಲು ಬಾಲ್ಯದಿಂದಲೂ ಅಭ್ಯಾಸವಾಗಿರುವ ಯೋಗಾಭ್ಯಾಸ ಮುಂದುವರಿಸಿದ್ದಾರೆ. ಅದುವೇ ತಮ್ಮ ಆರೋಗ್ಯದ ಹಿಂದಿರುವ ಗುಟ್ಟು ಎಂದು ಮೋದಿ ಹೇಳಿದ್ದಾರೆ.
ಮೋದಿ ಬರ್ತ್ ಡೇ ವಿಶೇಷ
ಕಾಂಗ್ರೆಸ್​ನಿಂದ ನಿರುದ್ಯೋಗ ದಿನ
ಪ್ರಧಾನಿ ಮೋದಿ ಜನ್ಮ ದಿನವನ್ನು ಕಾಂಗ್ರೆಸ್ ನಿರುದ್ಯೋಗ ದಿನವಾಗಿ ಆಚರಿಸಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ ಅನೇಕರು ಸೆ.17ನ್ನು ನಿರುದ್ಯೋಗ ದಿನವಾಗಿ ಗುರುತಿಸಬೇಕು ಎಂದು ಹೇಳಿದ್ದಾರೆ.
ಸೇವಾ ಸಪ್ತಾಹ
ಬಿಜೆಪಿ ದೇಶದಾದ್ಯಂತ ಸೆಪ್ಟೆಂಬರ್ 14ರಿಂದ 20ರವರೆಗೆ ಸೇವಾ ಸಪ್ತಾಹ ಹಮ್ಮಿಕೊಂಡಿದೆ. ಗುರುವಾರ ದೇಶಾದ್ಯಂತ ಪಕ್ಷದ ಕಾರ್ಯಕರ್ತರು ಸೇವಾ ಚಟುವಟಿಕೆ ನಡೆಸಿದರು.
ಮೋದಿಗೆ ಶುಭ ಕೋರಿದ ಕರ್ನಾಟಕದ ನಾಯಕರು
ಬೆಂಗಳೂರು: ಪ್ರಧಾನಿ ಮೋದಿ 70ನೇ ಜನ್ಮ ದಿನಾಚರಣೆಗೆ ಬಿಜೆಪಿಯ ರಾಜ್ಯ ನಾಯಕರು ಶುಭಾಶಯಗಳ ಸುರಿಮಳೆಗೈಯ್ದಿದ್ದಾರೆ. ಮೋದಿ ಅವರನ್ನು ವಿಶ್ವ ನಾಯಕ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಬಣ್ಣಿಸಿದ್ದು, ಆರೋಗ್ಯಪೂರ್ಣರಾಗಿ ಬಹು ವರ್ಷಗಳ ಕಾಲ ರಾಷ್ಟ್ರ ಸೇವೆ ಮುಂದುವರಿಯಲಿ ಎಂದು ಹಾರೈಸಿದ್ದಾರೆ. ಸಚಿವ ಸಂಪುಟದ ಸಹೋದ್ಯೋಗಿಗಳು ಟ್ವೀಟ್​ಗಳ ಮೂಲಕ ಶುಭ ಹಾರೈಸಿದ್ದಾರೆ. ಆತ್ಮನಿರ್ಭರ ಭಾರತ ಕನಸಿನ ಮೂಲಕ ಸ್ವಾವಲಂಬಿತ ಭಾರತ ನಿರ್ವಣಕ್ಕೆ ಪಣತೊಟ್ಟ ಮೋದಿ ದೇಶದ ಹೆಮ್ಮೆಯ ಪುತ್ರರೆಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕೊಂಡಾಡಿದ್ದರೆ, ಮೋದಿ ಭಾರತದ ಪ್ರಜಾತಂತ್ರದ ಹಿರಿಮೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಮ್ಮೆ ವ್ಯಕ್ತಪಡಿಸಿ, ಹಾರೈಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮೋದಿಗೆ ಪತ್ರ ಬರೆದು ಜನ್ಮ ದಿನದ ಶುಭಾಶಯ ಕೋರಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + 2 =
Remember me
