ನವದೆಹಲಿ:ದೇಶದಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರುವ ಟೂಲ್​ಕಿಟ್​ ಪ್ರಕರಣದಲ್ಲಿ ಬೆಂಗಳೂರಿನ ಪರಿಸರವಾದಿ ದಿಶಾ ರವಿ ಬಂಧನವಾಗಿ ಮೂರು ದಿನಗಳು ಕಳೆದಿವೆ. ಈ ಟೂಲ್​ಕಿಟ್​ ವಿಚಾರದಲ್ಲಿ ದಿಶಾ ಮತ್ತು ಗ್ರೆಟಾ ಥನ್​ಬರ್ಗ್​ ವಾಟ್ಸ್​ಆ್ಯಪ್​ನಲ್ಲಿ ಸಂಭಾಷಣೆ ನಡೆಸಿದ್ದು ಇದೀಗ ಆ ಸಂಭಾಷಣೆ ದೆಹಲಿ ಪೊಲೀಸರಿಗೆ ಸಿಕ್ಕಿದೆ.
ಟೂಲ್​ಕಿಟ್​ನ್ನು ಈಗಲೇ ಪೋಸ್ಟ್​ ಮಾಡಬೇಡ. ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಪ್ರಕಾರ ನಮ್ಮ ಮೇಲೆ ಕ್ರಮ ತೆಗೆದುಕೊಂಡರೂ ತೆಗೆದುಕೊಂಡು ಬಿಡಬಹುದು ಎಂದು ದಿಶಾ, ಗ್ರೆಟಾಗೆ ಮೆಸೇಜ್​ ಮಾಡಿದ್ದಾಳೆ. ಗ್ರೆಟಾ ಟೂಲ್​ಕಿಟ್​ನ್ನು ಟ್ವೀಟ್​ ಮಾಡಿದ ದಿನವೂ ದಿಶಾ ಆಕೆಗೆ ಮೆಸೇಜ್​ ಮಾಡಿದ್ದಾರೆ. ಟೂಲ್​ಕಿಟ್​ನಲ್ಲಿ ನನ್ನ ಹೆಸರಿದೆ. ಯುಎಪಿಎ ಪ್ರಕಾರ ನಮ್ಮ ಮೇಲೆ ಕ್ರಮ ತೆಗೆದುಕೊಂಡುಬಿಡುತ್ತಾರೆ. ಆ ಟ್ವೀಟ್​ನ್ನು ಡಿಲೀಟ್​ ಮಾಡು ಎಂದು ಆಕೆ ತಿಳಿಸಿದ್ದಾಳೆ. ಇದಾದ ನಂತರ ಎಡಿಟ್​ ಮಾಡಿರುವ ಟೂಲ್​ಕಿಟ್​ನ್ನು ಗ್ರೆಟಾ ಪೋಸ್ಟ್​ ಮಾಡಿದ್ದಾಳೆ. ದಿಶಾಳ ಫೋನಿನ ಪರಿಶೀಲನೆ ನಡೆಸುತ್ತಿರುವ ದೆಹಲಿ ಪೊಲೀಸರಿಗೆ ಇದೀಗ ಅದರಿಂದ ಈ ಮಾಹಿತಿ ಸಿಕ್ಕಿದೆ.
ಟೂಲ್​ಕಿಟ್​ ಒಂದು ಸ್ಥಿರ ದಾಖಲಾಗಿರಲಿಲ್ಲ. ಅದರಲ್ಲಿ ಸಾಕಷ್ಟು ಹೈಪರ್​ಲಿಂಕ್​ಗಳಿದ್ದವು. ಅನೇಕ ವೆಬ್​ಸೈಟ್​ಗಳ ಲಿಂಕ್​ ಅದರಲ್ಲಿತ್ತು. ಅದರಲ್ಲಿ ಒಂದು ಲಿಂಕ್​ ಒಂದು ವೆಬ್​ಸೈಟ್​ಗೆ ಕರೆದೊಯ್ದಿದ್ದು, ಆ ವೆಬ್​ಸೈಟ್​ ಖಲಿಸ್ತಾನ ಪರವಾದ ವೆಬ್​ಸೈಟ್​ ಆಗಿದೆ. ಈ ರೀತಿ ಅನೇಕ ಕಾನೂನುಬಾಹಿರ ಮಾಹಿತಿಗಳು ಆ ಟೂಲ್​ಕಿಟ್​ನಲ್ಲಿದೆ ಎಂದು ಉಪ ಪೊಲೀಸ್ ಆಯುಕ್ತ (ಸೈಬರ್ ಸೆಲ್) ಅನೀಶ್ ರಾಯ್ ತಿಳಿಸಿದ್ದಾರೆ. (ಏಜೆನ್ಸೀಸ್​)
ರಕ್ಷಣಾ ಸಚಿವರ ಕಚೇರಿಯೊಳಗೇ ರೇಪ್​! ಕ್ಷಮೆಯಾಚಿಸಿದ ಆಸ್ಟ್ರೇಲಿಯಾ ಪ್ರಧಾನಿ

ಟಾಪ್​ಲೆಸ್​ ರಿಹಾನ ಕೊರಳಲ್ಲಿ ಗಣೇಶನ ಪದಕ! ಕೆರಳಿಸುವ ಫೋಟೋ ಹೇಗಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
