ನವದೆಹಲಿ: ದೇಶದಲ್ಲಿ ದಿನೇದಿನೆ ಕೋವಿಡ್​19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಿನಸಿ ಅಂಗಡಿ ಮತ್ತು ತರಕಾರಿ ವ್ಯಾಪಾರಿಗಳನ್ನೆಲ್ಲ ಕೋವಿಡ್​-19 ಟೆಸ್ಟ್​ಗೆ ಒಳಪಡಿಸಿ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಈ ವ್ಯಾಪಾರಿಗಳು ಕೋವಿಡ್​ ಸೋಂಕು ಹರಡುವ ಸಂಭಾವ್ಯರಾಗಿರುವ ಕಾರಣ ಈ ಟೆಸ್ಟ್ ಮಾಡಿಸಬೇಕು ಎಂದು ಅದು ನಿರ್ದೇಶಿಸಿದೆ.
ಈ ಸಂಬಂಧ ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳಿಗೆ ಸುತ್ತೋಲೆ ಕಳುಹಿಸಿರುವ ಆರೋಗ್ಯ ಸಚಿವಾಲಯದ ಸೆಕ್ರೆಟರಿ ರಾಜೇಶ್ ಭೂಷಣ್​, ಕೋವಿಡ್​ ಸೋಂಕಿತರನ್ನು ಕರೆದೊಯ್ಯಲು ಅನುಕೂಲವಾಗುವಂತೆ ಸುಸಜ್ಜಿತವಾದ ಆ್ಯಂಬುಲೆನ್ಸ್ ಸೌಲಭ್ಯವನ್ನೂ ಖಾತರಿಗೊಳಿಸಬೇಕು. ತುರ್ತುಕರೆಗಳಿಗೆ ತಕ್ಷಣವೇ ಸ್ಪಂದಿಸುವಂತೆಯೂ ಸೂಚಿಸಿದ್ದಾರೆ.
ಇದನ್ನೂ ಓದಿ:ಹಿಂದು ಮಹಾಸಾಗರದಲ್ಲಿ ನೌಕಾ ನಿಯೋಜನೆ ಹೆಚ್ಚಿಸಿದ ಇಂಡಿಯನ್ ನೇವಿ
ಕೋವಿಡ್ 19 ಈಗ ಹೊಸ ಪ್ರದೇಶಗಳಿಗೆ ಹರಡುತ್ತಿದ್ದು, ಆರಂಭದಲ್ಲೇ ಪತ್ತೆ ಹಚ್ಚಿ ಅಂಥ ಸೋಂಕಿತರನ್ನು ಹೋಮ್ ಐಸೋಲೇಷನ್​ಗೆ ಒಳಪಡಿಸಬೇಕು. ಇನ್​​ಫ್ಲುಯೆನ್ಝಾ ಲೈಕ್ ಇಲ್ನೆಸ್​ ಅಥವಾ ಸೀವಿಯರ್​ ಅಕ್ಯೂಟ್​ ರೆಸ್ಪಿರೇಟರಿ ಇಲ್ನೆಸ್​ ಗಳ ರೋಗ ಲಕ್ಷಣಗಳೂ ಕೋವಿಡ್ ಮಾದರಿಯಲ್ಲೇ ಇರುವ ಕಾರಣ ಈ ಬಗ್ಗೆ ನಿಗಾವಹಿಸಬೇಕು. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನ ಒಂದರ ಸರಾಸರಿ 30 ಜನರ ಸಂಪರ್ಕಿಸುತ್ತಾನೆ. ಸೋಂಕಿತರ ವಿಚಾರದಲ್ಲಿ ಇದನ್ನು ಗಮನಿಸಬೇಕು.
ಇದನ್ನೂ ಓದಿ:ಇನ್​ಸ್ಟಾಗ್ರಾಂ ಫ್ರೆಂಡ್​ ಅತ್ಯಾಚಾರ ಮಾಡ್ದ, ಮದುವೆ ಆಗಲಿಲ್ಲ: 21ರ ಯುವತಿಯ ದೂರು
ಇಂಡಸ್ಟ್ರಿಯಲ್ ಕ್ಲಸ್ಟರ್​ಗಳು, ಕೊಳಚೆ ಪ್ರದೇಶ, ಕಾರಾಗೃಹ, ವೃದ್ಧಾಶ್ರಮ, ಅನಾಥಾಶ್ರಮ ಮುಂತಾದವುಗಳು ಕೋವಿಡ್​ ಸುಲಭವಾಗಿ ಹರಡಬಲ್ಲವು. ಹೀಗಾಗಿ ಅಲ್ಲಿ ಹೆಚ್ಚಿನ ನಿಗಾ ಇರಬೇಕು. ಇದಕ್ಕೆ ಹೊರತಾಗಿ, ದಿನಸಿ ಅಂಗಡಿ, ತರಕಾರಿ ವ್ಯಾಪಾರಿ ಮುಂತಾದವರನ್ನು ಸಂಭಾವ್ಯ ಸೋಂಕು ಹರಡುವವರನ್ನಾಗಿ ಪರಿಗಣಿಸಿ ಕೋವಿಡ್ 19 ಟೆಸ್ಟ್​ಗೆ ಒಳಪಡಿಸಬೇಕು ಎಂದು ಸೂಚಿಸಿದ್ದಾರೆ. (ಏಜೆನ್ಸೀಸ್)
ಕರಿಪ್ಪೂರ್ ವಿಮಾನ ದುರಂತ ಸಾವಿನ ಸಂಖ್ಯೆ 19ಕ್ಕೆ ಏರಿಕೆ: ಬ್ಲ್ಯಾಕ್​ಬಾಕ್ಸ್​ ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 4 =
Remember me
