ಭೋಪಾಲ್​:ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡಿಕೊಡುವ ಪ್ರಯತ್ನ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಪೊರ್ಸಾ ಗ್ರಾಮದಲ್ಲಿ ನಡೆದಿದೆ. ಮದುವೆಯನ್ನು ಪೊಲೀಸರು ತಡೆದಿದ್ದು, ಮದುವೆ ಆಗದ ಸಿಟ್ಟಿನಿಂದಾಗಿ ವರ, ವಧುವಿನ ತಂಗಿಯನ್ನೇ ಹೊತ್ತೊಯ್ದಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಪ್ರಿಯತಮೆಗೆ ಗರ್ಭನಿರೋಧಕ ಮಾತ್ರೆ ಕೊಟ್ಟು ಹಸೆಮಣೆ ಏರಿದ ಭೂಪ! ಮದುವೆ ದಿನವೇ ಮಸಣ ಸೇರಿದ ಯುವತಿ
ದಲಿತ ಕುಟುಂಬದ ಅಪ್ರಾಪ್ತ ಬಾಲಕಿಯನ್ನು ಹಸೆಮಣೆ ಮೇಲೆ ಕೂರಿಸಿ ಮದುವೆ ಮಾಡುವ ಪ್ರಯತ್ನ ಮಾಡಲಾಗುತ್ತಿತ್ತು. ಈ ವಿಚಾರವಾಗಿ ಗ್ರಾಮಸ್ಥರಿಂದ ಪೊಲೀಸ್​ ಠಾಣೆಗೆ ದೂರು ಬಂದಿದೆ. ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಪೊಲೀಸರು ಮದುವೆ ನಿಲ್ಲಿಸಿದ್ದಾರೆ. ಆದರೂ ಕೇಳದ ವರ, ಎಲ್ಲರ ಕಣ್ತಪ್ಪಿಸಿ ವಧುವಿಗೆ ಸಿಂಧೂರ ಇಟ್ಟಿದ್ದಾನೆ. ನಂತರ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮದುವೆಯನ್ನು ತಡೆದ ಪೊಲೀಸರು ವಧು ಮತ್ತು ವರನ ಕುಟುಂಬಕ್ಕೆ ಬುದ್ಧಿ ಹೇಳಿ ಬಾಲಕಿಯನ್ನು ಪೊಲೀಸ್​ ಠಾಣೆಗೆ ಕರೆತಂದಿದ್ದಾರೆ.
ಇದನ್ನೂ ಓದಿ:ಮಾನಸಿಕ ಅಸ್ವಸ್ಥ ಗಂಡನೆದುರೇ ನಡೆಯುತ್ತಿತ್ತು ಅತ್ತಿಗೆಯ ಅಫೇರ್​! ವಿಷಯ ಗೊತ್ತಿದ್ದ ಮೈದುನನಿಗೆ ಅತ್ತಿಗೆ ಮಾಡಿದ್ದೇನು?
ಬಾಲಕಿ ಮನೆಯಲ್ಲೇ ಇದ್ದರೆ ಮತ್ತೆ ಮದುವೆ ಮಾಡುವ ಸಾಧ್ಯತೆಯಿದೆ ಎಂದು ಪೊಲೀಸರು ಆಕೆಯನ್ನು ಠಾಣೆಗೆ ಕರೆತಂದಿದ್ದರು. ಮದುವೆ ಮುರಿದುಹೋದ ಸಿಟ್ಟಿನಿಂದ ವರ ಮತ್ತು ಆತನ ಕೆಲ ಸಂಬಂಧಿಗಳು ಬಾಲಕಿಯ ಮನೆಗೆ ಹೋಗಿದ್ದಾರೆ. ಮನೆಯಲ್ಲಿದ್ದ ಬಾಲಕಿಯ ತಂಗಿಯನ್ನು ಎಳೆದುಕೊಂಡು ಹೋಗಿದ್ದಾರೆ. ಸದ್ಯ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮದುವೆ ನಿಶ್ಚಯಿಸಿ, ವಧುವಿನ ತಂಗಿಯ ಅಪಹರಣಕ್ಕೆ ಸಹಾಯ ಮಾಡಿದ್ದ ಓರ್ವ ಮಹಿಳೆಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)
ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

ಮದುವೆಗೆ ಹೊರಟಿದ್ದವಳು ಕಾಡು ಸೇರಿದಳು; 14 ದಿನ ರೇಪ್​ ಮಾಡಿದ ಕಾಮುಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
