ಜೈಪುರ:ಮದುವೆ ಒಂದು ವಿಶಿಷ್ಟವಾದ ಬಂಧ. ಎರಡು ಕುಟುಂಬಗಳನ್ನು ಸೇರಿಸುವ ಕಾರ್ಯಕ್ರಮ ಎಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ವಿವಾಹ ಮಹೋತ್ಸವಗಳು ಸಾಕಷ್ಟು ವಿಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಆಗುತ್ತಿರುವುದು ವಿಶೇಷ.
ಇದೀಗ ರಾಜಸ್ಥಾನದ ಬರ್ಮೆರ್​ ಜಿಲ್ಲೆಯಲ್ಲಿ ನಡೆದ ಮದುವೆ ಮೆರವಣಿಗೆ ಎಲ್ಲರ ಗಮನ ಸೆಳೆದಿರುವುದು ವಿಶೇಷವಾಗಿದೆ. 51 ಟ್ರ್ಯಾಕ್ಟರ್​ಗಳಲ್ಲಿ ವರನ ಕಡೆಯವರು ವಧುವಿನ ಮನೆಯವರೆಗೂ ಮದುವೆ ದಿಬ್ಬಣದ ಮೆರವಣಿಗೆ ನಡೆಸಿದ್ದಾರೆ.
ಬರ್ಮೆರ್​ ಜಿಲ್ಲೆಯ ಗುಡಮಳನಿ ಗ್ರಾಮದ ಪ್ರಕಾಶ್ ಚೌಧರಿ​ ಎಂಬುವವರು ರೊಲಿ ಗ್ರಾಮದ ಮಮತಾ ಎಂಬುವವರನ್ನು ಸೋಮವಾರ ಮದುವೆಯಾಗಿದ್ದಾರೆ. ವರನ ಮನೆಯಿಂದ ವಧುವಿನ ಮನೆ ಸುಮಾರು 51 ಕಿ.ಮೀ ದೂರವಿದ್ದು, ಪ್ರಕಾಶ್​​ ಕಡೆಯವರು ಮದುವೆ ದಿಬ್ಬಣವನ್ನು ವಿಶಿಷ್ಟವಾಗಿ ಆಯೋಜಿಸಿದ್ದಾರೆ.
Rajasthan: Groom arrives with procession on 51 tractors in BarmerRead@ANIStory |https://t.co/HvvhnFZIMH#Rajasthan#51Tractors#Weddingpic.twitter.com/CIcqrmu85L— ANI Digital (@ani_digital)June 13, 2023

Rajasthan: Groom arrives with procession on 51 tractors in BarmerRead@ANIStory |https://t.co/HvvhnFZIMH#Rajasthan#51Tractors#Weddingpic.twitter.com/CIcqrmu85L
ಇದನ್ನೂ ಓದಿ:ಕಂಠಪೂರ್ತಿ ಕುಡಿದು ಸ್ವಂತ ಕಾರನ್ನೇ ಅಪರಿಚಿತನಿಗೆ ಕೊಟ್ಟು ಮನೆಗೆ ಬಂದ; ಮರುದಿನ ಕಾದಿತ್ತು ಶಾಕ್​
ಈ ಕುರಿತು ಪ್ರತಿಕ್ರಿಯಿಸಿರುವ ವರನ ತಂದೆ ಜೇತುರಾಮ್​ ನನ್ನ ಮದುವೆಯ ಮೆರವಣಿಗೆಗೆಂದು ಒಂದು ಟ್ರ್ಯಾಕ್ಟರ್​ ಬಳಸಲಾಗಿತ್ತು. ಮಗನ ಮದುವೆ ದಿಬ್ಬಣದ ಮೆರವಣಿಗೆ ಹೆಚ್ಚು ವಿಶಿಷ್ಟವಾಗಿರಲೆಂದು 51 ಟ್ರ್ಯಾಕ್ಟರ್​ಗಳನ್ನು ಬಳಸಲಾಗಿದೆ ಎಂದು ತಿಳಿಸಿದ್ದಾರೆ.
ನನ್ನ ಕುಟುಂಬದ ಪ್ರಮುಖ ವರತ್ತಿ ಕೃಷಿಯಾಗಿದ್ದು, ಇದರಲ್ಲಿ ಮನೆಯ ಪ್ರತಿಯೊಬ್ಬ ಸದಸ್ಯ ತೊಡಗಿಸಿಕೊಂಡಿದ್ದಾರೆ. ಟ್ರ್ಯಾಕ್ಟರ್​ ರೈತನ ಗುರುತಾಗಿದ್ದು, ನನ್ನ ಅಪ್ಪನ ಮದುವೆಯ ಮೆರವಣಿಗೆ ಒಂದು ಟ್ರ್ಯಾಕ್ಟರ್ಅನ್ನು​ ಬಳಸಲಾಗಿತ್ತು. ನನ್ನ ಮದುವೆಗೇಕೆ 51 ಟ್ರ್ಯಾಕ್ಟರ್​ ಬಳಸಬಾರದೆಂದು ಎಂದು ಯೋಚಿಸಿದೆವು.
ನನ್ನ ತಂದೆ ಹಾಗೂ ತಾತನ ಮದುವೆ ಸಮಾರಂಭಗಳಲ್ಲಿ ಒಂಟೆಗಳನ್ನು ಮೆರವಣಿಗೆಗೆ ಬಳಸಲಾಗಿತ್ತು. ನಮ್ಮ ಕುಟುಂಬದಲ್ಲಿ 20-30 ಟ್ರ್ಯಾಕಟರ್​ಗಳಿದ್ದು, ನನ್ನ ಸ್ನೇಹಿತರದ್ದು ಸೇರಿಸಿ ಒಟ್ಟು 51 ವಾಹನಗಳಲ್ಲಿ ಮೆರವಣಿಗೆ ಮಾಡಿದ್ದೇವೆ. ಟ್ರ್ಯಾಕ್ಟರ್​ಅನ್ನು ಕೃಷಿಗೆ ಮಾತ್ರ ಬಳಸಲಾಗುತ್ತದೆ. ಆದರೆ, ಮದುವೆಗೆ ಯಾಕೆ ಉಪಯೋಗಿಸಬಾರದೆಂದು ಚಿಂತಿಸಿದೆವು ಎಂದು ವರ ಪ್ರಕಾಶ್​ ಚೌಧರಿ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
