ಝಾನ್ಸಿ:ಮದುವೆ ಕಾರ್ಯಕ್ರಮ ಮುಗಿದ ಬಳಿಕ ವಧು, ವರನ ಮನೆಗೆ ಬರುವುದು ಸಂಪ್ರದಾಯ. ಆದರೆ ಇಲ್ಲೊಂದು ಕಡೆ ಕೊನೆಯ ಕ್ಷಣದಲ್ಲಿ ಅವಾಂತರವಾಗಿದೆ. ವಿವಾಹವಾದ ಬಳಿಕ ವಧುವಿನ ತಂದೆ ಹಾಕಿದ ಮೂರು ಷರತ್ತು ಕೇಳಿ ವರ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾನೆ. ಕೊನೆಗೆ ಷರತ್ತುಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಮದುವೆ ಗಂಡು, ಹೆಂಡತಿ ಬೇಡವೆಂದು ಹೇಳಿ ಒಬ್ಬನೇ ಮನೆಗೆ ಹೋಗಿದ್ದಾನೆ. ಇತ್ತ ವಧು ತನ್ನ ಮನೆಗೆ ತೆರಳಿದ್ದಾಳೆ.
ವಿಚಿತ್ರ ಎಂದೆನಿಸುವ ಈ ಘಟನೆ ನಡೆದಿರುವುದು ಝಾನ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಬರುವಾಸಾಗರ್ ನಗರದಲ್ಲಿ. ಮನ್ವೇಂದ್ರ ಸೇನ್ ಮತ್ತು ಗುರ್ಸರಾಯ್‌ನ ಇಟೋರಾ ಗ್ರಾಮದ ಯುವತಿಯ ಮದುವೆ ಕಾರ್ಯಕ್ರಮ ಕಳೆದ ಜೂನ್ 6 ರಂದು ನಡೆದಿದೆ. ಅದ್ಧೂರಿಯಾಗಿಯೇ ವಿವಾಹ ಕಾರ್ಯಕ್ರಮ ಜರುಗಿದೆ. ಕೊನೆಯಲ್ಲಿ ವಧು-ವರರನ್ನು ಬೀಳ್ಕೊಡಬೇಕು ಎನ್ನುವಷ್ಟರಲ್ಲಿ ಹುಡುಗಿಯ ತಂದೆ ಮೂರು ಷರತ್ತು ವಿಧಿಸಿದ್ದು, ಇದನ್ನು ಕೇಳಿ ಅಲ್ಲಿದ್ದವರೆಲ್ಲ ಒಂದು ಕ್ಷಣ ಕಂಗಾಲಾಗಿ ಹೋಗಿದ್ದಾರೆ.
ಇದನ್ನೂ ಓದಿ:ಕೇರಳದಿಂದ ಕಾಲ್ನಡಿಗೆಯಲ್ಲೇ ಹಜ್ ಯಾತ್ರೆ ಕೈಗೊಂಡ ಯುವಕ; ಈತ ಕ್ರಮಿಸಿದ್ದು 8,600 ಕಿ.ಮೀ ದೂರ!
1. ಮದುವೆಯ ನಂತರ, ವಧು ಮತ್ತು ವರ ದೈಹಿಕ ಸಂಬಂಧ ಮಾಡಬಾರದು2.ಹುಡುಗಿಯ ತಂಗಿ ಕೂಡ ತನ್ನ ಅಕ್ಕನೊಂದಿಗೆ ಅಲ್ಲಿಯೇ ಇರುತ್ತಾಳೆ.3.ಮಗಳ ಮನೆಗೆ ನಾನು(ವಧುವಿನ ತಂದೆ) ಯಾವಾಗ ಬೇಕಾದರೂ ಬರಬಹುದು. ಈ ವೇಳೆ ಯಾರೂ ತಡೆಯಬಾರದುಎಂದು ಮದುವೆ ಹೆಣ್ಣಿನ ತಂದೆ ವಧು-ವರರ ಬೀಳ್ಕೊಡುಗೆ ಸಮಯದಲ್ಲಿ ಮೂರು ಷರತ್ತು ವಿಧಿಸಿದ್ದಾರೆ. ಮೊದಲ ಷರತ್ತು ಕೇಳಿದ ವರನಿಗೆ ಒಂದು ಕ್ಷಣ ಆಶ್ಚರ್ಯವಾಗಿದೆ. ಇಂತಹ ವಿಚಿತ್ರ ಷರತ್ತು ಯಾಕೆ ಎಂದು ಕೇಳಿದಾಗ ವಧುವಿನ ತಂದೆ ಏನೂ ಉತ್ತರಿಸದೆ ಷರತ್ತು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಷರತ್ತಿನ ಬಗ್ಗೆ ಎರಡೂ ಕುಟುಂಬಗಳ ನಡುವೆ ಸಾಕಷ್ಟು ಮಾತುಕತೆ ನಡೆದಿದೆ. ಅಂತಿಮವಾಗಿ ವರನ ಷರತ್ತುಗಳನ್ನು ನಿರಾಕರಿಸಿದ್ದಾನೆ. ಇತ್ತು ವಧು ಕೂಡ ತನ್ನ ತಂದೆಯ ಮಾತಿಗೆ ಒಪ್ಪಿಗೆ ಸೂಚಿಸಿದ್ದಾಳೆ. ಕೊನೆಗೆ ವಧು ಇಲ್ಲದೆ ವರ ತನ್ನ ಮನೆಗೆ ಮರಳಿದ್ದಾನೆ.
ಇದನ್ನೂ ಓದಿ:ಸಚಿವೆ ನಿರ್ಮಲಾ ಸೀತಾರಾಮನ್ ಅಳಿಯ ಪಿಎಂಒ ಅಧಿಕಾರಿ; ಇವರಿಗಿರುವ ಮಹತ್ವದ ಜವಾಬ್ದಾರಿ ಏನು? ಇಲ್ಲಿದೆ ಮಾಹಿತಿ…
ಮದುವೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವರನ ಕುಟುಂಬಸ್ಥರು ಸಾಕಷ್ಟು ಮೌಲ್ಯದ ಚಿನ್ನಾಭರಣ ವಧುವಿಗೆ ನೀಡಿದ್ದಾರೆ. ಘಟನೆಯ ಬಳಿಕ ಆಭರಣವನ್ನು ಹಿಂತಿರುಗಿಸದೆ ವಧು ತನ್ನ ತಂದೆಯೊಂದಿಗೆ ಹೋಗಿದ್ದಾಳೆ. ಈ ಬಗ್ಗೆ ಹುಡುಗನ ಕಡೆಯವರು ಬರುವಸಾಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಅಜ್ಮೀರ್ ಸಿಂಗ್ ಭದೌರಿಯಾ ತಿಳಿಸಿದ್ದಾರೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:2 × 3 =
Remember me
