ಮದುವೆಗೆ ಮದುಮಕ್ಕಳು ಬರುವುದನ್ನು ದಿಬ್ಬಣ ಎನ್ನುತ್ತೇವೆ. ಆದರೆ ಇಲ್ಲೊಂದು ಮದುವೆಯಲ್ಲಿ ಮದುಮಕ್ಕಳು ಬಂದದ್ದು ಆಂಬುಲೆನ್ಸ್​ನಲ್ಲಿ!
ಹೌದು ಇಂತಹ ಘಟನೆಯನ್ನು ನೋಡಿದ ನೆಟ್ಟಿಗರು ಎಮರ್ಜೆನ್ಸಿಯಲ್ಲಿ ಬಳಸುವ ಆಂಬುಲೆನ್ಸ್​ನಂತಹ ವಾಹನವನ್ನು ಈ ರೀತಿ ಬಳಸಿದ್ದಕ್ಕೆ ಕಿಡಿ ಕಾರಿದ್ದಾರೆ.
ಇಂತಹ ವಿಲಕ್ಷಣ ಘಟನೆ ನಡೆದಿರುವುದು ಮಲೇಷ್ಯಾದಲ್ಲಿ. ಈ ವಿಡಿಯೋವನ್ನು ನೋಡಿದ ಫೇಸ್​ಬುಕ್​ ಬಳಕೆದಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ನಾಲ್ಕು ನಿಮಿಷದ ವಿಡಿಯೋದಲ್ಲಿ ಅವರಿಬ್ಬರು ಮದುಮಕ್ಕಳ ಉಡುಪಿನಲ್ಲಿ ಬರುತ್ತಾರೆ. ಈ ವಿಡಿಯೋ ಈವರೆಗೆ 1.97 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ಪೋಸ್ಟ್​ನ್ನು 200ಕ್ಕೂ ಹೆಚ್ಚು ಬಾರಿ ಶೇರ್​ ಮಾಡಲಾಗಿದೆ.
ವ್ಹೀಲ್​ಚೇರ್​ನಲ್ಲಿ ಮದುಮಗಳುಈ ವಿಡಿಯೋದಲ್ಲಿ ಮದುಮಗ, ಮದುಮಗಳನ್ನು ವ್ಹೀಲ್​ಚೇರಿನಲ್ಲಿ ಕರೆ ತರುತ್ತಾನೆ. ಅಲ್ಲದೆ ಈ ಇಬ್ಬರ ಸಂಬಂಧಿಕರೂ ಆಂಬುಲೆನ್ಸ್​ನಲ್ಲಿ ಬರುತ್ತಾರೆ. ಆಂಬುಲೆನ್ಸ್​ನಂತಹ ತುರ್ತು ವಾಹನವನ್ನು ಈ ರೀತಿ ಬಳಕೆ ಮಾಡಿದ್ದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಲೇಷಿಯಾದ ಸಚಿವಾಲಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ, ಈ ಆಂಬುಲೆನ್ಸ್​ ಖಾಸಗಿಯಾದ್ದಾಗಿದೆ. ಇದನ್ನು ಅವರು ತಮ್ಮ ಮದುವೆಗೆ ಬುಕ್​ ಮಾಡಿದ್ದಾರೆ ಎಂದು ತಿಳಿಸಿದೆ.(ಏಜೆನ್ಸೀಸ್​)
https://www.facebook.com/JengkaToday/videos/1204027516474468/?t=125

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
