ಗಯಾ:ತನ್ನ ಮೊದಲ ಪತ್ನಿ ಇರುವಾಗಲೇ ಎರಡನೇ ಮದುವೆಯಾಗಲು ಯತ್ನಿಸಿದ ವರನೊಬ್ಬನಿಗೆ ಮದುವೆ ಮನೆಯಲ್ಲಿಯೇ ಥಳಿಸಿರುವ ವಿಚಿತ್ರ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ.ಇದನ್ನೂ ಓದಿ:ಪ್ರಸ್ತುತ ರಾಜಕಾರಣ ಐಪಿಎಲ್​ನಂತಾಗಿದೆ, ಯಾರು ಯಾವ ಕಡೆ ಆಡುತ್ತಿದ್ದಾರೋ ಯಾರಿಗೂ ತಿಳಿದಿಲ್ಲ: ಮಹಾರಾಷ್ಟ್ರ ಮಾಜಿ ಸಿಎಂಕೊತ್ವಾಲಿ ಪೊಲೀಸ್ ಠಾಣೆಯ ಇಕ್ಬಾಲ್ ನಗರದ ನಿವಾಸಿಯಾಗಿರುವ ವ್ಯಕ್ತಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಈತ ತನ್ನ ಮೊದಲ ಹೆಂಡತಿ ಜೀವಂತವಾಗಿರುವಾಗಲೇ ಎರಡನೇ ಮದುವೆಯಾಗಲು ಯತ್ನಿಸಿದ್ದಾನೆ. ಸುದ್ದಿ ತಿಳಿದ ಪತ್ನಿ ಹಾಗೂ ಸಂಬಂಧಿಕರು ಸ್ಥಳಕ್ಕಾಗಮಿಸಿದ್ದ ಕೂಡಲೇ ಬಾಲಕಿಯ ಕುಟುಂಬಸ್ಥರಿಗೆ ಆತನಿಗೆ ಥಳಿಸಿದ್ದಾರೆ.ಈ ವೇಳೆ ಅಲ್ಲಿಯೇ ನೆರೆದಿದ್ದ ವ್ಯಕ್ತಿಯೊಬ್ಬ, ವರನ ತಲೆ ಬೋಳಿಸಲು ಉಪಾಯವನ್ನು ನೀಡಿದ್ದಾನೆ. ಕೂಡಲೇ ಜನರು ಕ್ಷೌರಿಕನಿಗ ಬರಲು ಹೇಳಿದ್ದಾರೆ. ಈ ವೇಳೆ ವರನು ತನ್ನನ್ನು ಬಿಡುವಂತೆ ಪರಿಪರಿಯಾಗಿ ನೆರೆದವರಿಗೆ ಕೇಳಿಕೊಂಡಿದ್ದಾನೆ. ಆದರೆ ಜನರು ಈತನ ಮಾತನ್ನು ನಿರ್ಲಕ್ಷಿಸಿದ್ದು, ಕ್ಷೌರಿಕ ವರನ ತಲೆಗೂದಲು ಕತ್ತರಿಸಲು ಮುಂದಾಗಿದ್ದಾನೆ.ಇದನ್ನೂ ಓದಿ:ಸಮೋಸಾ ಆರ್ಡರ್ ಮಾಡಲು ಹೋಗಿ 1.40 ಲಕ್ಷ ರೂ. ಕಳೆದುಕೊಂಡ ವೈದ್ಯಈ ವೇಳೆ ವರನು ಧರಿಸಿದ್ದ ವಿಗ್​​​ ಕಿತ್ತು ಕ್ಷೌರಿಕನ ಕೈಗೆ ಬಂದಿದೆ. ಕೂಡಲೇ ಬಾಲಕಿಯ ಮನೆಯವರ ಸಿಟ್ಟು ನೆತ್ತಿಗೇರಿದ್ದು ವರನಿಗೆ ಮತ್ತೆ ಧರ್ಮದೇಟು ನೀಡಿದ್ದಾರೆ. ವರನ ಕಷ್ಟದ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಆದರೆ ದೋಭಿ ಪೊಲೀಸ್ ಠಾಣೆ ಮತ್ತು ಕೊತ್ವಾಲಿ ಪೊಲೀಸ್ ಠಾಣೆ ಇಂತಹ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − nine =
Remember me
