ಲಖನೌ:ಮದುವೆ ಎಂದರೆ ಹೆಣ್ಣು ಮಕ್ಕಳು ಅದೆಷ್ಟು ಕನಸು ಕಟ್ಟಿರುತ್ತಾರೆ.. ಅದೇ ರೀತಿ ಸಾಕಷ್ಟು ಕನಸಿನೊಂದಿಗೆ ಹಸೆ ಮಣೆ ಏರಲು ಸಿದ್ಧವಾಗಿದ್ದ ವಧುವಿಗೆ ಮದುವೆ ದಿನವೇ ಕನಸಿನ ಅರಮನೆಗೆ ಬೆಂಕಿ ಬಿದ್ದ ಘಟನೆ ಉತ್ತರ ಪ್ರದೇಶದ ಮಹಾರಾಜಗಂಜ್​ನಲ್ಲಿ ನಡೆದಿದೆ. ಒಂದು ವಿಡಿಯೋ ನೋಡಿದ ವರ ಮದುವೆಯನ್ನೇ ಕ್ಯಾನ್ಸಲ್​ ಮಾಡಿಕೊಂಡು ಹೋಗಿದ್ದಾನೆ.
ಆ ಹುಡುಗ ಹೈದರಾಬಾದ್​ನಲ್ಲಿ ಕೆಲಸ ಮಾಡುತ್ತಿದ್ದ. ಯಾವುದೋ ಮದುವೆಗೆ ಹೋದಾಗ ಹುಡುಗಿಯೊಬ್ಬಳನ್ನು ನೋಡಿ ಪ್ರೀತಿಸಲು ಆರಂಭಿಸಿದ್ದ. ಪ್ರೀತಿ ಹೆಮ್ಮರವಾಗಿ ಬೆಳೆದು, ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮೇ 16ಕ್ಕೆ ಮದುವೆಯೂ ನಿಶ್ಚಯವಾಗಿತ್ತು. ಆದರೆ ಮದುವೆಯ ದಿನ ಬೆಳಗ್ಗೆ ವರ, ವಧುವಿಗೆ ಕರೆ ಮಾಡಿದ್ದಾನೆ. ನಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಫೋನ್​ ಕಟ್​ ಮಾಡಿದ್ದಾನೆ. ಇದನ್ನು ಕೇಳಿದ ವಧು ಅಲ್ಲೇ ತಲೆ ತಿರುಗಿ ಬಿದ್ದಿದ್ದಾಳೆ. ಎಚ್ಚರವಾದ ನಂತರ ವರ ಹೇಳಿದ ವಿಚಾರವನ್ನು ತಿಳಿಸಿ ಕಣ್ಣೀರು ಸುರಿಸಿದ್ದಾಳೆ.
ಇದರಿಂದಾಗಿ ಸಿಟ್ಟಿಗೆದ್ದ ಕುಟುಂಬಸ್ಥರು ತಕ್ಷಣ ಆಕೆಯನ್ನು ಕರೆದುಕೊಂಡು, ಮದುವೆ ಆಮಂತ್ರಣ ಪತ್ರಿಕೆ ಹಿಡಿದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ಪೊಲೀಸರು ಎರಡೂ ಕಡೆಯವರನ್ನು ಕರೆಸಿ ನಡೆದ ವಿಚಾರವನ್ನು ಸವಿಸ್ತಾರವಾಗಿ ತಿಳಿಸುವಂತೆ ತಿಳಿಸಿದ್ದಾರೆ.
ಯುವಕ, ಯುವತಿ ಪ್ರೀತಿಯಲ್ಲಿದ್ದಾಗ, ಯುವಕ ಆಕೆಗೆ ಒಂದು ಸ್ಕೂಟಿಯನ್ನು ಕೊಡಿಸಿದ್ದನಂತೆ. ಕೆಲಸ ಮಾಡಬೇಕು ಎನ್ನುವ ಆಸೆಯಲ್ಲಿದ್ದ ಅವಳಿಗೆ ಲಂಚ ಕೊಟ್ಟು ಕೆಲಸ ಸೇರಲು ಸಹಾಯ ಮಾಡಿದ್ದ. 1.25 ಲಕ್ಷ ರೂಪಾಯಿ ಲಂಚ ನೀಡಲೆಂದು ಕೊಟ್ಟಿದ್ದನಂತೆ. ಗೋರಕ್​ಪುರದ ಒಬ್ಬ ವ್ಯಕ್ತಿಗೆ ಲಂಚ ನೀಡಿ ಕೆಲಸ ಗಿಟ್ಟಿಸಿಕೊಳ್ಳಲಾಗಿತ್ತು. ಆದರೆ ಈ ಮಧ್ಯೆ ಲಂಚ ಪಡೆದ ವ್ಯಕ್ತಿ ಹಾಗೂ ಯುವತಿ ಹೆಚ್ಚು ಸ್ನೇಹ ಬೆಳೆಸಿಕೊಂಡಿದ್ದಾರೆ. ಕೆಲ ಖಾಸಗಿ ಕ್ಷಣಗಳನ್ನೂ ಕಳೆದಿದ್ದಾರೆ. ಅದರ ವಿಡಿಯೋ ಮಾಡಿಕೊಂಡಿದ್ದ ಆತ ಅದನ್ನು ಆಕೆಯ ಪ್ರಿಯತಮನಿಗೆ ಮದುವೆಯ ದಿನವೇ ಕಳುಹಿಸಿಕೊಟ್ಟಿದ್ದಾನೆ. ಅದರಿಂದ ಸಿಟ್ಟಿಗೆದ್ದ ವರ ಮದುವೆ ಕ್ಯಾನ್ಸಲ್​ ಮಾಡಿದ್ದಾನೆ. ಎರಡೂ ಕಡೆಯವರ ಮನ ಒಲಿಸಲು ಪೊಲೀಸರು ಸಾಕಷ್ಟು ಪ್ರಯತ್ನ ಪಟ್ಟರು ಅದು ಸಾಧ್ಯವಾಗಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 11 =
Remember me
